ಕರ್ನಾಟಕ

karnataka

75ನೇ ಸ್ವಾತಂತ್ರ್ಯೋತ್ಸವ.. ವಂದೇ ಮಾತರಂ ಹಾಡಿನಲ್ಲಿ ಕನ್ನಡ ತಾರೆಯರ ಮೆರಗು

By

Published : Aug 15, 2022, 12:24 PM IST

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕನ್ನಡ ಚಿತ್ರರಂಗದ ಎಲ್ಲ ನಟರು ವಂದೇ ಮಾತರಂ ಎಂಬ ವಿಶೇಷ ಹಾಡೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿ, ಭಾರಿ ಸದ್ದು ಮಾಡುತ್ತಿದೆ.

vande mataram  Patriotic Song
ವಂದೇ ಮಾತ

ದೇಶಾದ್ಯಂತ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ದೇಶಕ್ಕಾಗಿ ಹೋರಾಡಿದ ವೀರರು ಹಾಗು ಹೋರಾಟಗಾರರನ್ನ ಸ್ಮರಿಸಲಾಗುತ್ತಿದೆ. ಎಲ್ಲಿ ನೋಡಿದ್ರು ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಈ ಐತಿಹಾಸಿಕ ದಿನದ ಶುಭ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಎಲ್ಲ ನಟರು ವಂದೇ ಮಾತರಂ ವಿಶೇಷ ಹಾಡೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಪ್ರಖ್ಯಾತ ನಟರಾದ ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​, ಜಗ್ಗೇಶ್​, ರಮೇಶ್​ ಅರವಿಂದ್​, ಅನಂತ್​ ನಾಗ್​, ರವಿಚಂದ್ರನ್, ಗಣೇಶ್, ಧನಂಜಯ್, ಧ್ರುವ ಸರ್ಜಾ, ಶ್ರೀಮುರಳಿ, ರಿಷಬ್​ ಶೆಟ್ಟಿ, ಅಜಯ್​ ರಾವ್​ ಸೇರಿದಂತೆ ಸಾಕಷ್ಟು ನಟರು 'ವಂದೇ ಮಾತರಂ' ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ತಾರೆಯರ ಜೊತೆಗೆ ಸಾಲುಮರದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ, ಮಾಜಿ ಕ್ರಿಕೆಟರ್​ ವೆಂಕಟೇಶ್​ ಪ್ರಸಾದ್​, ಹಿರಿಯ ಎಸ್​.ಎಲ್. ಭರಪ್ಪ ಸೇರಿದಂತೆ ಸಾಕಷ್ಟು ಗಣ್ಯರು ಇದ್ದಾರೆ.

ವಂದೇ ಮಾತರಂ ಹಾಡಿನಲ್ಲಿ ಕನ್ನಡ ತಾರೆಯರ ಮೆರಗು

‌ಈ ಗೀತೆಯನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್‌ ನಿರ್ದೇಶನ ಮಾಡಿದ್ದು, ಪ್ರಸಿದ್ಧ ಗಾಯಕ ವಿಜಯ್​ ಪ್ರಕಾಶ್​ ಹಾಡಿದ್ದಾರೆ. ಸದ್ಯಕ್ಕೆ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು, ಭಾರಿ ಸದ್ದು ಮಾಡುತ್ತಿದೆ.

75ನೇ ಸ್ವಾತಂತ್ರ್ಯೋತ್ಸವ ತ್ರಿವರ್ಣ ಧ್ವಜಕ್ಕಾಗಿ ಮಾಡಿರುವ ಈ ಹಾಡು ಚೆನ್ನಾಗಿ ಮೂಡಿ ಬಂದಿದೆ. ಆದರೆ, ಹಾಡಿನಲ್ಲಿ ಯಾಕೆ‌ ನಟಿಯರಿಲ್ಲ. ಬೇರೆ ಕ್ಷೇತ್ರದ ಸಾಧಕರನ್ನು ಯಾಕೆ ಬಳಸಿಕೊಂಡಿಲ್ಲ ಅಂತಾ ಜನರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ:ಸ್ವಾತಂತ್ರ್ಯ ಅಮೃತ ಮಹೋತ್ಸವ.. ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿದ ಡಿಕೆಶಿ

ABOUT THE AUTHOR

...view details