ಕರ್ನಾಟಕ

karnataka

ವಸಿಷ್ಠ ಸಿಂಹ ಅಭಿನಯದ 'ಲವ್ ಲಿ' ಸಿನಿಮಾಗೆ ಜೋಡಿಯಾದ ಜಾರ್ಖಂಡ್ ಬೆಡಗಿ

By

Published : Jul 18, 2022, 9:01 PM IST

ವಸಿಷ್ಠ ಸಿಂಹ ಅಭಿನಯದ ಬಹುನಿರೀಕ್ಷಿತ ಸಿನೆಮಾ ಲವ್ ಲಿ ಸಿನೆಮಾದ ಚಿತ್ರೀಕರಣ ನಡೆಯುತ್ತಿದ್ದು, ನಾಯಕ ವಸಿಷ್ಠ ಸಿಂಹ ಅವರಿಗೆ ಜೊತೆಯಾಗಿ ಜಾರ್ಖಂಡ್ ಬೆಡಗಿ ಸ್ಟೆಫಿ ಪಟೇಲ್ ನಟಿಸಲಿದ್ದಾರೆ.

jharkhand-beauty-steffi-patel-paired-with-vasishtha-simha-in-loveli-movie
ವಸಿಷ್ಠ ಸಿಂಹ ಅಭಿನಯದ 'ಲವ್ ಲಿ' ಸಿನಿಮಾಗೆ ಜೋಡಿಯಾದ ಜಾರ್ಖಂಡ್ ಬೆಡಗಿ

ಕಂಚಿನ ಕಂಠದಿಂದಲೇ ಸ್ಯಾಂಡಲ್​​​​ವುಡ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನಟ ವಸಿಷ್ಠ ಸಿಂಹ. ಖಳನಟನ ಪಾತ್ರಗಳ ಜೊತೆಗೆ ನಾಯಕ ನಟನಾಗಿ ಸದ್ದು ಮಾಡ್ತಿರೋ ವಸಿಷ್ಠ ಸಿಂಹ, ರೋಸ್ ಹಿಡಿದು ಹೀರೋ ಆಗೋಕು ರೆಡಿ, ಲಾಂಗ್ ಹಿಡಿದು ವಿಲನ್ ಆಗೋಕೂ ಸೈ. ಹೀಗೆ ಎಲ್ಲದಕ್ಕೂ ಸೈ ಎನಿಸಿಕೊಂಡಿರುವ ವಸಿಷ್ಠ ಸಿಂಹ ಸದ್ಯ ಲವ್ ಲಿ ಸಿನಿಮಾದ ಜಪ ಮಾಡ್ತಾ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಶಿವಣ್ಣನ ಜೊತೆ ಟಗರು ಸಿನೆಮಾದಲ್ಲಿ ಚಿಟ್ಟೆಯಾಗಿ ಮಿಂಚಿದ ವಸಿಷ್ಠ ಸಿಂಹ ಸ್ಟೈಲಿಶ್ ಲುಕ್ ನಲ್ಲಿ ‘ಲವ್ ಲಿ’ ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಸಿಷ್ಠ ನಾಯಕ ನಟನಾಗಿ ನಟಿಸುತ್ತಿರುವ ‘ಲವ್ ಲಿ’ ಸಿನೆಮಾದ ಚಿತ್ರೀಕರಣದಲ್ಲಿ ನಡೆಯುತ್ತಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಎಲ್ಲರ ಗಮನ ಸೆಳೆದಿದೆ.

ವಸಿಷ್ಠ ಸಿಂಹ ಅಭಿನಯದ 'ಲವ್ ಲಿ' ಸಿನಿಮಾ

'ಲವ್​ ಲಿ' ಚಿತ್ರದಲ್ಲಿ ವಸಿಷ್ಠ ಸಿಂಹ ಜೊತೆಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿತ್ತು. ಆ ಕುತೂಹಲಕ್ಕೀಗ ಚಿತ್ರತಂಡ ತೆರೆ ಎಳೆದಿದೆ. ವಸಿಷ್ಠ ಸಿಂಹನಿಗೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ಆಯ್ಕೆಯಾಗಿದ್ದಾರೆ. ಹಿಂದಿ, ಕೊರಿಯನ್, ತಮಿಳು ಭಾಷೆಗಳ ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಿರುವ ಸ್ಟೆಫಿ ಪಟೇಲ್ ಗೆ ಇದು ಮೊದಲ ಕನ್ನಡ ಸಿನಿಮಾ. ಈಗಾಗಲೇ ಸ್ಟೆಫಿ ಪಟೇಲ್ ‘ಲವ್ ಲಿ’ ಚಿತ್ರತಂಡ ಸೇರಿಕೊಂಡಿದ್ದು ಜುಲೈ 19ರಿಂದ ಚಿತ್ರದ ಎರಡನೇ ಸುತ್ತಿನ ಚಿತ್ರೀಕರಣ ಆರಂಭವಾಗಲಿದೆ.

'ಲವ್ ಲಿ' ಸಿನಿಮಾಗೆ ಜೋಡಿಯಾದ ಜಾರ್ಖಂಡ್ ಬೆಡಗಿ

'ಲವ್ ಲಿ’ ಚಿತ್ರಕ್ಕೆ ಚೇತನ್ ಕೇಶವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಕಮರ್ಶಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ರೌಡಿಸಂ ಕಥಾ ಹಂದರವೂ ಚಿತ್ರದಲ್ಲಿದೆ. ಚಿತ್ರವನ್ನು ಎಂ.ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದು, ಹರೀಶ್ ಕೊಮ್ಮೆ ಸಂಕಲನ, ಅಶ್ವಿನ್ ಕೆನಡಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ವಸಿಷ್ಠ ಸಿಂಹ ಹಾಗೂ ಸ್ಟೆಫಿ ಕಾಂಬಿನೇಶನ್ ಒಳಗೊಂಡ ಪೋಸ್ಟರ್ ಜುಲೈ 21ರಂದು ಚಿತ್ರತಂಡ ರಿವೀಲ್ ಮಾಡಲಿದೆ.

ಜಾರ್ಖಂಡ್ ಬೆಡಗಿ ಸ್ಟೆಫಿ ಪಟೇಲ್

ಓದಿ :ವಿಹಾನ್​ಗೆ ನಾಯಕಿಯಾದ 'ನಮ್ಮನೆ ಯುವರಾಣಿ'.. 'ಪಂಚತಂತ್ರ' ನಟನಿಗೆ ಸಿಂಪಲ್ ಸ್ಟಾರ್ ಸಾಥ್

ABOUT THE AUTHOR

...view details