ಕರ್ನಾಟಕ

karnataka

ವಸಿಷ್ಠ ಸಿಂಹ - ಹರಿಪ್ರಿಯಾ ನಿಶ್ಚಿತಾರ್ಥ... ಫೋಟೋಗಳು ವೈರಲ್​​

By

Published : Dec 3, 2022, 4:58 PM IST

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ನಿಶ್ಚಿತಾರ್ಥದ ಫೋಟೋಗಳು ವೈರಲ್​ ಆಗಿವೆ.

haripriya vasishta simha engagement pictures
ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥ

ನಿನ್ನೆ ಚಂದನವನದ ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿದೆ ಎಂದು ಬಲ್ಲಮೂಲಗಳು ತಿಳಿಸಿದ್ದವು. ಇಂದು ಈ ಸ್ಯಾಂಡಲ್​ವುಡ್ ಲವ್ ಬರ್ಡ್ಸ್ ಎಂಗೇಜ್​​ಮೆಂಟ್​ ಫೊಟೋಗಳು ವೈರಲ್​ ಆಗಿವೆ.

ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥ

ಕನ್ನಡ ಚಿತ್ರರಂಗದ ಕಂಚಿನ ಕಂಠದ ನಾಯಕ ವಸಿಷ್ಠ ಸಿಂಹ ಮತ್ತು ನೀರ್​ದೋಸೆ ಬೆಡಗಿ ಹರಿಪ್ರಿಯಾ ನಡುವೆ ವಿಶಿಷ್ಟ ಪ್ರೇಮ ಕಥೆ ಆರಂಭವಾಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಕೆಲ ದಿನಗಳ‌ ಹಿಂದೆ‌ ದುಬೈ ಪ್ರವಾಸ ಮುಗಿಸಿಕೊಂಡು ಇಬ್ಬರೂ ಜೊತೆಯಲ್ಲಿ ಬಂದಿದ್ದರು. ಕೈ ಕೈ ಹಿಡಿದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದರು. ದುಬೈನಿಂದ‌ ಬಂದ ಬೆನ್ನಲ್ಲೇ ವಸಿಷ್ಠ ಮತ್ತು ಹರಿಪ್ರಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಸಖತ್​ ಸೌಂಡ್​ ಮಾಡಿತು. ಇದೀಗ ಅವರ ಎಂಗೇಜ್​ಮೆಂಟ್​ ಫೋಟೋಗಳು ವೈರಲ್​ ಆಗುತ್ತಿವೆ.

ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥ

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಅಂತ ಕರೆಸಿಕೊಂಡಿರುವ ಡಾಲರ್ಸ್ ಕಾಲೋನಿಯಲ್ಲಿರುವ ನಟಿ ಹರಿಪ್ರಿಯಾ ಅವರ ಮನೆಯಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ನಟಿ ಹರಿಪ್ರಿಯಾ ಅವರೇ ತಮ್ಮ ಹಾಗೂ ವಸಿಷ್ಠ ಸಿಂಹ ಜೊತೆಗಿನ ಸಂಬಂಧವನ್ನು ವಿಶೇಷವಾಗಿ ಇಂದು ಖಚಿತಪಡಿಸಿದ್ದಾರೆ.

ಇದನ್ನೂ ಓದಿ:ವಸಿಷ್ಠ ಜೊತೆ ಕ್ರಿಯೇಟಿವ್ ಆಗಿ ನಿಶ್ಚಿತಾರ್ಥ ಮಾಡಿಕೊಂಡರಂತೆ ನಟಿ ಹರಿಪ್ರಿಯಾ..

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ನಟಿ ಹರಿಪ್ರಿಯಾ, ಸಿಂಹದ ಮಡಿಲಲ್ಲಿ ಮಲಗಿರುವ ಮಗುವಿನ ಫೋಟೋದ ಜೊತೆ ''ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು'' ಎಂದು ಬರೆದುಕೊಂಡಿದ್ದಾರೆ. ಸ್ವತಃ ಹರಿಪ್ರಿಯ ಅವರೇ ಈ ಪೋಸ್ಟ್ ಹಾಕಿರುವುದರಿಂದ ಇಷ್ಟು ದಿನ ಹಬ್ಬಿದ್ದ ಸುದ್ದಿಗೆ ಖಚಿತತೆ ಸಿಕ್ಕಂತಾಗಿದೆ. ಆದರೂ ಈ ಜೋಡಿಯಿಂದಲೇ ಅಧಿಕೃತ ಘೋಷಣೆ ಬಾಕಿ ಇದೆ. ಹರಿಪ್ರಿಯಾ ಅವರು ಈ ಪೋಸ್ಟ್ ಹಾಕುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್‌ ವಿಭಾಗದಲ್ಲಿ ಶುಭಾಶಯಗಳ ಮಳೆ ಸುರಿಸಿದ್ದಾರೆ.

ಇದನ್ನೂ ಓದಿ:ಹರಿಪ್ರಿಯಾ - ವಸಿಷ್ಠ ಸಿಂಹ ನಿಶ್ಚಿತಾರ್ಥ.. ಆಪ್ತರ ಸಮ್ಮುಖದಲ್ಲಿ ನಡೆಯಿತು ಸಮಾರಂಭ

ಇಬ್ಬರ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಪರಸ್ಪರ ಉಂಗುರ ಹಾಕುವ ಮೂಲ ತಮ್ಮ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ‌ ಕೆಲವೇ ಕೆಲ ಆಪ್ತರು ಮತ್ತು ಕುಟುಂಬದವರು ಭಾಗಿಯಾಗಿದ್ದರು. ಮುಂದಿನ ವರ್ಷದ ಆರಂಭದಲ್ಲಿ ಮದುವೆ ನೇರವೇರಲಿದೆ ಅಂತಾ ಅವರ ಕುಟುಂಬ ವರ್ಗ ತಿಳಿಸಿದೆ.

ABOUT THE AUTHOR

...view details