ಕರ್ನಾಟಕ

karnataka

ಹೊಸ ವರ್ಷಾಚರಣೆ: ನೀವು ಆನಂದಿಸಬಹುದಾದ 5 ಉತ್ತಮ ಭಾರತೀಯ ಸಿನಿಮಾಗಳಿವು!

By

Published : Dec 28, 2022, 7:46 PM IST

2022ಕ್ಕೆ ವಿದಾಯ - 2023ಕ್ಕೆ ಸ್ವಾಗತ - ಹೊಸ ವರ್ಷಾಚರಣೆ ಸಂಭ್ರಮಿಸಲು ಸಿದ್ಧತೆ - ನೀವು ನೋಡಿ ಆನಂದಿಸಬಹುದಾದ 5 ಉತ್ತಮ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ.

good Indian films
ಉತ್ತಮ ಭಾರತೀಯ ಸಿನಿಮಾಗಳು

2022 ವಿದಾಯ ಹೇಳಲು, 2023 ಅನ್ನು ಸ್ವಾಗತಿಸಲು ಜನರು ಸಜ್ಜಾಗಿದ್ದಾರೆ. ಅನೇಕರು ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಪಾರ್ಟಿ ಮಾಡುವ ಮನಸ್ಥಿತಿಯಲ್ಲಿದ್ದಾರೆ. ಮತ್ತೆ ಹಲವರು ಸಿನಿಮಾಗಳನ್ನು ನೋಡುವ ಯೋಜನೆಯಲ್ಲಿದ್ದಾರೆ. ನೀವು ಆನಂದಿಸಬಹುದಾದ 5 ಉತ್ತಮ ಭಾರತೀಯ ಚಲನಚಿತ್ರಗಳ ಪಟ್ಟಿ ಇಲ್ಲಿದೆ.

ಕಾಲಾ (Qala): ಅನ್ವಿತಾ ದತ್ ನಿರ್ದೇಶಿಸಿರುವ ಇರ್ಫಾನ್ ಖಾನ್ ಅವರ ಮಗ ಬಾಬಿಲ್ ಖಾನ್ ಅವರ ಬಾಲಿವುಡ್ ಚೊಚ್ಚಲ ಚಿತ್ರ. ತ್ರಿಪ್ತಿ ಡಿಮ್ರಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 1930 - 1940ರ ದಶಕದ ಯುವ ಹಿನ್ನೆಲೆ ಗಾಯಕರ ಕಥೆಯಾಗಿದೆ. ಈ ಚಿತ್ರವು ಪ್ರಸ್ತುತ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಸೀತಾ ರಾಮನ್

ಸೀತಾ ರಾಮನ್:ಹನು ರಾಘವಪುದಿ ನಿರ್ದೇಶನದ ಈ ರೊಮ್ಯಾಂಟಿಕ್ ಡ್ರಾಮಾದಲ್ಲಿ ದುಲ್ಕರ್ ಸಲ್ಮಾನ್, ರಶ್ಮಿಕಾ ಮಂದಣ್ಣ ಮತ್ತು ಮೃಣಾಲ್ ಠಾಕೂರ್ ನಟಿಸಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಸೀತಾ ಮಹಾಲಕ್ಷ್ಮಿಯ ಮೇಲಿನ ತನ್ನ ಪ್ರೀತಿಯನ್ನು ಹೇಳಿಕೊಳ್ಳುವ ಸಲುವಾಗಿ ಲೆಫ್ಟಿನೆಂಟ್ ರಾಮ್ ಅವರ ಪ್ರಯಾಣವನ್ನು ಈ ಚಲನಚಿತ್ರವು ಗುರುತಿಸುತ್ತದೆ. ಅವರು ಸೀತಾ ಮಹಾಲಕ್ಷ್ಮಿ ಅವರಿಂದ ಪ್ರೇಮ ಪತ್ರಗಳನ್ನು ಸ್ವೀಕರಿಸಲು ಪ್ರಾರಂಭಿಸಿದಾಗ ಅವರ ಪ್ರೀತಿ ಬೆಳೆಯುತ್ತದೆ.

ಕೊನೆಗೆ ರಾಮ್ ಸೆರೆಯಾಗಿ ಸಾವನ್ನಪ್ಪುತ್ತಾರೆ. ರಾಮ್​​ಗಾಗಿ ಸೀತಾ ಬಹು ವರ್ಷಗಳ ಕಾಲ ಕಾದು ಕುಳಿತಿರುತ್ತಾರೆ. ರಾಮ್​ ಸಾವಿನ ವಿಚಾರವನ್ನು ಸೀತಾರಿಗೆ ತಲುಪಿಸುವ ಕಾರ್ಯವನ್ನು ರಶ್ಮಿಕಾ ಮಾಡುತ್ತಾರೆ. ಈ ಚಿತ್ರ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರವು ಪ್ರಸ್ತುತ OTT ಪ್ಲಾಟ್‌ಫಾರ್ಮ್‌ಗಳಾದ ಡಿಸ್ನಿ + ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ.

ಗುಡ್​ ಬೈ ಸಿನಿಮಾ

ಗುಡ್​ ಬೈ: ವಿಕಾಸ್ ಬಹ್ಲ್ ನಿರ್ದೇಶನದ ಈ ಗುಡ್​ ಬೈ ಭಾವನಾತ್ಮಕ ಕೌಟುಂಬಿಕ ನಾಟಕವಾಗಿದೆ. ನಟಿ ರಶ್ಮಿಕಾ ಮಂದಣ್ಣ, ಬಾಲಿವುಡ್​ ಸೂಪರ್​ ಸ್ಟಾರ್ ಅಮಿತಾಭ್​ ಬಚ್ಚನ್ ಮತ್ತು ಪಾವೈಲ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಏರಿಳಿತಗಳೊಂದಿಗೆ ವ್ಯವಹರಿಸುವ ಪ್ರತಿಯೊಂದು ಕುಟುಂಬದ ಅವ್ಯವಸ್ಥೆಯನ್ನು ಚಿತ್ರವು ಚಿತ್ರಿಸುತ್ತದೆ. ಪರಸ್ಪರರ ಮಹತ್ವವನ್ನು ನಿಧಾನವಾಗಿ ನೆನಪಿಸುತ್ತದೆ. ಈ ವರ್ಷದ ಬಾಲಿವುಡ್​​ನ ಬಹುನಿರೀಕ್ಷಿತ ಚಿತ್ರವಾಗಿತ್ತು. ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತಾದರೂ ಬಾಕ್ಸ್ ಆಫೀಸ್​ನಲ್ಲಿ ಹಿಂದೆ ಸರಿಯಿತು. ಪ್ರಸ್ತುತ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

777 ಚಾರ್ಲಿ:ಜೂನ್​ ತಿಂಗಳಿನಲ್ಲಿ ಬಿಡುಗಡೆ ಆಗಿ ಸೂಪರ್​ ಹಿಟ್ ಆದ ಸಿನಿಮಾ. ಕಿರಣ್‌ರಾಜ್ ಕೆ ನಿರ್ದೇಶಿಸಿದ ಕನ್ನಡ ಚಲನಚಿತ್ರ ನಟರಾದ ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ಡ್ಯಾನಿಶ್ ಸೇಟ್ ಮತ್ತು ಬಾಬಿ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮನುಷ್ಯ ಮತ್ತು ಶ್ವಾನದ ನಡುವಿನ ಸಂಬಂಧವನ್ನು ಚಿತ್ರ ಸುಂದರವಾಗಿ ತೋರಿಸಿದೆ. ಇದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಂಗ್ರಹಿಸಿದೆ. ಬಾಕ್ಸ್​​ ಆಫೀಸ್​ನಲ್ಲಿ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 777 ಚಾರ್ಲಿ ಸದ್ಯ OTT ಪ್ಲಾಟ್‌ಫಾರ್ಮ್ Voot ಸೆಲೆಕ್ಟ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಭೂಲ್​ ಭುಲಯ್ಯಾ 2

ಭೂಲ್​ ಭುಲಯ್ಯಾ 2:ಅನೀಸ್ ಬಾಜ್ಮಿ ಅವರ ಭೂಲ್​ ಭುಲಯ್ಯಾ 2 ಚಿತ್ರವು ಹಾರರ್ ಕಾಮಿಡಿಯಾಗಿದ್ದು, ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ ಮತ್ತು ಟಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2022ರ ಅತ್ಯಂತ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿತ್ತು. ಚಿತ್ರವು ಪ್ರಸ್ತುತ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಇದನ್ನೂ ಓದಿ:ಸ್ಯಾಂಡಲ್​ವುಡ್ 2022:​​ ಸೂಪರ್ ಹಿಟ್ ಸಿನಿಮಾಗಳು - ನಿರೀಕ್ಷೆ ತಲುಪದ ಚಿತ್ರಗಳು!!

ಇವಲ್ಲದೇ ಈ ವರ್ಷ ಬಿಡುಗಡೆ ಆಗಿ ಸಕ್ಸಸ್ ಕಂಡಿರುವ ಕಾಂತಾರ, ಕೆಜಿಎಫ್​ 2, ವಿಕ್ರಾಂತ್ ರೋಣ, ದೃಶ್ಯಂ 2, ಲವ್​ ಮಾಕ್ಟೆಲ್ 2, ಪುಷ್ಪ, ಅವತಾರ್ ಹೀಗೆ ಹಲವು ಸಿನಿಮಾಗಳು ಇದ್ದು, ಪ್ರೇಕ್ಷಕರು ಸಿನಿಮಾ ನೋಡುವ ಮೂಲಕ ಹೊಸ ವರ್ಷ ಬರಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ:2022ರಲ್ಲಿ ಸ್ಯಾಂಡಲ್​ವುಡ್​ಗೆ ಯಾರೆಲ್ಲಾ ಎಂಟ್ರಿ ಕೊಟ್ಟಿದ್ದಾರೆ?

ABOUT THE AUTHOR

...view details