ಕರ್ನಾಟಕ

karnataka

ಪ್ರಧಾನಿ ನರೇಂದ್ರ ಮೋದಿಗೆ ಜನ್ಮದಿನದ ಶುಭಾಶಯ ಕೋರಿದ ಬಾಲಿವುಡ್​ ಸೆಲೆಬ್ರಿಟಿಗಳು

By ETV Bharat Karnataka Team

Published : Sep 17, 2023, 4:53 PM IST

ಪ್ರಧಾನಿ ನರೇಂದ್ರ ಮೋದಿಯವರ 73ನೇ ಹುಟ್ಟುಹಬ್ಬಕ್ಕೆ ಬಾಲಿವುಡ್​ ಸೆಲೆಬ್ರಿಟಿಗಳು ಸೋಷಿಯಲ್​ ಮೀಡಿಯಾದಲ್ಲಿ ಶುಭಹಾರೈಸಿದ್ದಾರೆ.

Modi From Akshay Kumar to Kangana Ranaut, celebrities extend birthday wish to Narendra Modi on his 73rd birthday
ಪ್ರಧಾನಿ ನರೇಂದ್ರ ಮೋದಿಗೆ ಜನ್ಮದಿನದ ಶುಭಾಶಯ ಕೋರಿದ ಬಾಲಿವುಡ್​ ಸೆಲೆಬ್ರಿಟಿಗಳು

ಪ್ರಧಾನಿ ನರೇಂದ್ರ ಮೋದಿ ಅವರಿಂದು 73ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಜನನಾಯಕನಿಗೆ ಸೋಷಿಯಲ್​ ಮೀಡಿಯಾದಲ್ಲಿ ಜನ್ಮದಿನದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಬಾಲಿವುಡ್​ ಸೆಲೆಬ್ರಿಟಿಗಳು ಕೂಡ 'ವಿಶ್ವದ ಅತ್ಯಂತ ಪ್ರೀತಿಯ ನಾಯಕ' ಎಂದೇ ಕರೆಯಲ್ಪಡುವ ಭಾರತದ ಹೆಮ್ಮೆಯ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದ್ದಾರೆ.

ಹಿಂದಿ ಸಿನಿರಂಗದ ತಾರೆಯರಾದ ಲೇಡಿ ಸೂಪರ್​ಸ್ಟಾರ್​ ಕಂಗನಾ ರಣಾವತ್​, ಬಾಲಿವುಡ್​ ಕಿಲಾಡಿ ಅಕ್ಷಯ್ ಕುಮಾರ್​, ಹೇಮಾ ಮಾಲಿನಿ, ಸನ್ನಿ ಡಿಯೋಲ್​, ಅನುಪಮ್​ ಖೇರ್​, ಕಿರಣ್​ ಖೇರ್​ ಸೇರಿದಂತೆ ಅನೇಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಸೋಷಿಯಲ್​ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡರು.​

ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರು ಎಕ್ಸ್​ (ಹಿಂದಿನ ಟ್ವಿಟರ್​) ನಲ್ಲಿ ಪ್ರಧಾನಿ ಮೇಲಿನ ಆಳವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. "ತನ್ನ ಕಠಿಣ ಪರಿಶ್ರಮದ ಮೂಲಕ ಸಬಲೀಕರಣದ ಉತ್ತುಂಗಕ್ಕೆ ಏರಿದ ಸಾಮಾನ್ಯ ವ್ಯಕ್ತಿ ಮತ್ತು ನವ ಭಾರತದ ವಾಸ್ತುಶಿಲ್ಪಿಯಾಗಿರುವ ವಿಶ್ವದ ಅತ್ಯಂತ ಪ್ರೀತಿಯ ನಾಯಕನಿಗೆ ಜನ್ಮದಿನದ ಶುಭಾಶಯಗಳು. ನೀವು ಕೇವಲ ಭಾರತದ ಜನತೆಗೆ ಪ್ರಧಾನಿಯಲ್ಲ. ಶ್ರೀರಾಮನಂತೆ ನಿಮ್ಮ ಹೆಸರು ಕೂಡ ಈ ರಾಷ್ಟ್ರದಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ. ನಿಮಗೆ ದೀರ್ಘಾಯುಷ್ಯ ಮತ್ತು ಆರೋಗ್ಯವನ್ನು ಭಗವಂತ ನೀಡಲಿ ಎಂದು ಹಾರೈಸುತ್ತೇನೆ" ಎಂದು ಶುಭಾಶಯ ಕೋರಿದ್ದಾರೆ.

ಅಕ್ಷಯ್​ ಕುಮಾರ್​ ಅವರು ಎಕ್ಸ್​ನಲ್ಲಿ ಮೋದಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ನಟ ಪ್ರಧಾನಿಯವರನ್ನು ನಮಗೆಲ್ಲ ಸ್ಫೂರ್ತಿ ಎಂಬುದಾಗಿ ಶ್ಲಾಘಿಸಿದ್ದಾರೆ. ಜನನಾಯಕನಿಗೆ ಆರೋಗ್ಯ, ಸಂತೋಷವನ್ನು ದೇವರು ಕರುಣಿಸಲು ಎಂದು ಹಾರೈಸಿದ್ದಾರೆ. "ಜನ್ಮದಿನದ ಶುಭಾಶಯಗಳು ನರೇಂದ್ರ ಮೋದಿ ಜಿ. ವರ್ಷದಿಂದ ವರ್ಷಕ್ಕೆ ನಮಗೆ ಸ್ಫೂರ್ತಿ ನೀಡುತ್ತೀರಿ. ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷ ಸದಾ ಇರಲಿ" ಎಂದು ಬರೆದುಕೊಂಡಿದ್ದಾರೆ.

ನಟ ಸನ್ನಿ ಡಿಯೋಲ್​ ಕೂಡ ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರನ್ನು 'ನಮ್ಮ ಪ್ರಧಾನಿ' ಎಂದು ಉಲ್ಲೇಖಿಸಿದ ಸನ್ನಿ, ಜನನಾಯಕನಿಗೆ ಉತ್ತಮ ಆರೋಗ್ಯ ಮತ್ತು ಶಾಶ್ವತ ಸಂತೋಷ ಸಿಗಲಿ ಎಂದು ಹಾರೈಸಿದ್ದಾರೆ. "ನಮ್ಮ ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮಗೆ ಯಾವಾಗಲೂ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಬಯಸುತ್ತೇನೆ" ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ.

ನಟ ವರುಣ್​ ಧವನ್​ ಕೂಡ ಪ್ರಧಾನಿಗೆ 73ನೇ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. "ಪ್ರೀತಿಯ ಸರ್​, ನೀವು ನಮ್ಮ ವೈಭವಯುತ ರಾಷ್ಟ್ರದ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದುಕೊಂಡಿದ್ದೀರಿ. ನೀವು ಸಿಂಹದಂತೆ ಘರ್ಜಿಸುತ್ತೀರಿ. ಜಗತ್ತೇ ಎದ್ದು ನಿಂತು ನಿಮ್ಮನ್ನು ಗೌರವಿಸುತ್ತದೆ. ಜನ್ಮದಿನದ ಶುಭಾಶಯಗಳು ಪ್ರಧಾನಿ ನರೇಂದ್ರ ಮೋದಿ ಜಿ. ಜೈ ಹಿಂದ್​" ಎಂದು ಎಕ್ಸ್​ನಲ್ಲಿ ಶುಭಾಶಯ ತಿಳಿಸಿದ್ದಾರೆ.

ಹಿರಿಯ ನಟ ಅನುಪಮ್​ ಖೇರ್​ ಕೂಡ ಮೋದಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ಸೋಷಿಯಲ್​ ಮೀಡಿಯಾವನ್ನು ಬಳಸಿಕೊಂಡರು. ಭಾರತವನ್ನು ಜಾಗತಿಕವಾಗಿ ಪ್ರತಿನಿಧಿಸುವಲ್ಲಿ ಪ್ರಧಾನಿಯ ಪ್ರಾಮುಖ್ಯತೆಯನ್ನು ಉಲ್ಲೇಖಿಸಿ ಅವರನ್ನು ಶ್ಲಾಘಿಸಿದರು. ಅಲ್ಲದೇ ಕಿರಣ್​ ಖೇರ್​ ಕೂಡ ಪ್ರಧಾನಿ ಮೋದಿಗೆ ಆರೋಗ್ಯ, ಸಂತೋಷ ಮತ್ತು ಇನ್ನೂ ಅನೇಕ ಅದ್ಭುತ ವರ್ಷಗಳನ್ನು ಹಾರೈಸಿದರು. ಹೇಮಾ ಮಾಲಿನಿ ಅವರು ಕೂಡ ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯ ತಿಳಿಸಿದರು.

ಇದನ್ನೂ ಓದಿ:ಮೋದಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ರಾಷ್ಟ್ರಪತಿ ಮುರ್ಮು, ಅಮಿತ್​ ಶಾ, ಬಿಎಸ್​ವೈ, ಹೆಚ್​ಡಿಕೆ

ABOUT THE AUTHOR

...view details