ಕರ್ನಾಟಕ

karnataka

ಅರ್ಜುನ್ ಕಪೂರ್ - ಜಾಹ್ನವಿ ಕಪೂರ್ ಚಿತ್ರಗಳ ನಡುವೆ ಪೈಪೋಟಿ : ಗೆಲ್ಲುವವರ‍್ಯಾರು ?

By

Published : Jul 22, 2022, 6:06 PM IST

ಏಕ್ ವಿಲನ್ ರಿಟರ್ನ್ಸ್ ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್ ನಟರಾದ ಅರ್ಜುನ್ ಕಪೂರ್, ಜಾನ್ ಅಬ್ರಹಾಂ ಮತ್ತು ನಟಿಯರಾದ ದಿಶಾ ಪಟಾನಿ ಮತ್ತು ತಾರಾ ಸುತಾರಿಯಾ ಇಂದೋರ್‌ಗೆ ಆಗಮಿಸಿದರು.

film-ek-villain-returns-star-cast-reached-indore-for-promotion
ಅರ್ಜುನ್ ಕಪೂರ್ ಮತ್ತು ಜಾಹ್ನವಿ ಕಪೂರ್ ಚಿತ್ರಗಳ ನಡುವೆ ಪೈಪೋಟಿ

ಇಂದೋರ್(ಮಧ್ಯಪ್ರದೇಶ): ಏಕ್ ವಿಲನ್ ರಿಟರ್ನ್ಸ್ ಚಿತ್ರ ಜುಲೈ 29 ರಂದು ಬಿಡುಗಡೆಯಾಗುತ್ತಿದೆ. ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಚಿತ್ರದಲ್ಲಿ ನಟರಾದ ಅರ್ಜುನ್ ಕಪೂರ್, ಜಾನ್ ಅಬ್ರಹಾಂ, ನಟಿಯರಾದ ತಾರಾ ಸುತಾರಿಯಾ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಾರಾ ಈ ಚಿತ್ರದ ಮೂಲಕ ಗಾಯಕಿಯಾಗಿಯೂ ಪದಾರ್ಪಣೆ ಮಾಡಿದ್ದಾರೆ.

ಜಾನ್ವಿ ಮತ್ತು ನನ್ನ ಚಿತ್ರಕ್ಕೆ ವೀಕ್ಷಕರು ಪ್ರೀತಿಯನ್ನು ನೀಡುತ್ತಾರೆ:ಅಣ್ಣ ಮತ್ತು ತಂಗಿಯ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದರ ಬಗ್ಗೆ ಮಾತಾನಾಡಿದ ಅರ್ಜುನ್ ಕಪೂರ್. ನನ್ನ ಏಕ್ ವಿಲನ್ ರಿಟರ್ನ್ಸ್(Ek Villain Returns) ಮತ್ತು ಜಾಹ್ನವಿ ಕಪೂರ್ ಅವರ ಗುಡ್ ಲಕ್ ಜೆರ್ರಿ (Good Luck Jerry) ಒಂದೇ ದಿನ ಬಿಡುಗಡೆಯಾಗುತ್ತಿದೆ. ಜನ ಎರಡನ್ನು ಮೆಚ್ಚುತ್ತಾರೆ ಎಂದು ಭಾವಿಸುತ್ತೇನೆ. ಜಾಹ್ನವಿ ಕಪೂರ್ ಅವರ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಎಂದರು.

ಏಕ್ ವಿಲನ್ ಚಿತ್ರ ಎಂಟು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ರಿತೇಶ್ ದೇಶ್‌ಮುಖ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಶ್ರದ್ಧಾ ಕಪೂರ್ ಅದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದದ್ದರು. ಏಕ್ ವಿಲನ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಏಕ್ ವಿಲನ್ ರಿಟರ್ನ್ಸ್ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ :ನಿಮ್ಮಿಬ್ಬರನ್ನು ಒಂದೇ ರೂಂನಲ್ಲಿ ಸೇರಿಸಿದ್ರೆ ಚೂಪಾದ ವಸ್ತುಗಳನ್ನಿಡಬಹುದೇ?: ಸಮಂತಾ ಉತ್ತರ ಹೀಗಿತ್ತು..


ABOUT THE AUTHOR

...view details