ಕರ್ನಾಟಕ

karnataka

ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ ಅಂತಿದ್ದಾರೆ ನಿರ್ದೇಶಕ ಪ್ರೇಮ್-ಧ್ರುವಾ ಸರ್ಜಾ

By

Published : Apr 18, 2022, 10:54 PM IST

ಕೆ. ವಿ. ಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ತಯಾರಾಗ್ತಿರೋ ಪ್ಯಾನ್ ಇಂಡಿಯಾ ಚಿತ್ರದ ಮುಹೂರ್ತ ಇದೇ 24ಕ್ಕೆ ನಡೆಯಲಿದೆ.

ನಿರ್ದೇಶಕ ಪ್ರೇಮ್ - ಧ್ರುವಾ ಸರ್ಜಾ ಸಿನೆಮಾ
ನಿರ್ದೇಶಕ ಪ್ರೇಮ್ - ಧ್ರುವಾ ಸರ್ಜಾ ಸಿನೆಮಾ

ವಿಭಿನ್ನ ಚಿತ್ರಗಳ ಮೂಲಕ‌ ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಿರ್ದೇಶಕ ಜೋಗಿ ಪ್ರೇಮ್. ಏಕ್ ಲವ್ ಯಾ ಸಿನಿಮಾ ಬಳಿಕ ಜೋಗಿ ಪ್ರೇಮ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾಗೆ ಆಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ. ಈ ಹಿಂದೆ ಜೋಗಿ ಪ್ರೇಮ್ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳುತ್ತಾರೆ ಅಂತಾ ಸುದ್ದಿಯಾಗಿತ್ತು. ಅದರಂತೆ ಜೋಗಿ ಪ್ರೇಮ್ ನಿರ್ದೇಶನದ, ಧ್ರುವಾ ಸರ್ಜಾ ಅಭಿನಯದ ಹೆಸರಿಡದ ಪ್ಯಾನ್ ಇಂಡಿಯಾ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ. ಸದ್ಯ ಹೆಸರಿಡದ ಧ್ರುವ ಸರ್ಜಾ ಸಿನಿಮಾದ ಪೋಸ್ಟರ್ ರಿವೀಲ್ ಆಗಿದೆ‌.

ಇದರಲ್ಲಿ 1970 ಇಸವಿ, ಡೆಲ್ಲಿ ಗೇಟ್ ಮಾದರಿಯ ಗೇಟ್, ಗನ್ ಹಿಡಿದು ನಿಂತಿರೋ ವ್ಯಕ್ತಿ, ಹೀಗೆ ರೆಟ್ರೋ‌ ಸ್ಟೈಲಲ್ಲಿ ಪ್ರೇಮ್ ಪೋಸ್ಟರ್ ಬಿಟ್ಟಿದ್ದಾರೆ. ಜೊತೆಗೆ ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ ಅಂತ ಬರೆದು ಅಡಿ ಬರಹದಲ್ಲಿ ಇದು ನೈಜ ಘಟನೆಯನ್ನಾಧರಿಸಿದ ಕಥೆ ಎಂದು ಹೇಳಿದ್ದಾರೆ.

ಕೆ. ವಿ. ಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ತಯಾರಾಗ್ತಿರೋ ಪ್ಯಾನ್ ಇಂಡಿಯಾ ಚಿತ್ರದ ಮುಹೂರ್ತ ಇದೇ 24ಕ್ಕೆ ನಡೆಯಲಿದೆ. ಇದಕ್ಕೆ ನಿರ್ದೇಶಕ‌ ಪ್ರೇಮ್ ತಮ್ಮದೇ ಸ್ಟೈಲಲ್ಲಿ ಇನ್ವಿಟೇಷನ್ ಡಿಸೈನ್ ಮಾಡಿ, ಪ್ರೇಕ್ಷಕರ ತಲೆಗೆ ಹುಳ‌ಬಿಟ್ಟಿದ್ದಾರೆ. ಇದೊಂದು ಮಾಸ್ ಕಮರ್ಷಿಯಲ್ ಸಿನಿಮಾವಾಗಿದ್ದು, ಪ್ರೇಮ್ ಮತ್ತು ಧ್ರುವ ಒಟ್ಟಿಗೆ ಕೆಲಸ ಮಾಡಲಿದ್ದಾರೆ‌.ಧ್ರುವ ಸರ್ಜಾಗೆ ನಾಯಕಿ ಯಾರು, ತಾರಾಗಣ, ತಂತ್ರಜ್ಞಾನರು ಯಾರು ಅನ್ನೋದು ಇದೇ 24ರಂದು ಗೊತ್ತಾಗಲಿದೆ.

ಇದನ್ನೂ ಓದಿ:ಬೆಂಗಳೂರನ್ನು ಅಂತರರಾಷ್ಟ್ರೀಯ ಸ್ಮಾರ್ಟ್ ಸಿಟಿ ಮಾಡಲು ಚಿಂತನೆ: ಸಿಎಂ

TAGGED:

ABOUT THE AUTHOR

...view details