ಕರ್ನಾಟಕ

karnataka

ಕಪ್ಪು ಬಿಳುಪಿನ ಉಡುಪಿನಲ್ಲಿ ನೋರಾ ಫತೇಹಿ ಮೋಹಕ ನೋಟ.. ಫ್ಯಾನ್ಸ್​ ಫಿದಾ!

By

Published : Mar 3, 2023, 4:22 PM IST

ಬಳುಕುವ ಬಳ್ಳಿ ನೋರಾ ಫತೇಹಿ ಕೆಲವು ಹೊಸ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

pictures
ನೋರಾ ಫತೇಹಿ

ಸೂಪರ್​ ಹಿಟ್​ ಡ್ಯಾನ್ಸರ್, ಮಾಡೆಲ್​ ನೋರಾ ಫತೇಹಿ ತಮ್ಮ ಅಮೆರಿಕ ಪ್ರವಾಸದ ಕೆಲವೊಂದು ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕದ ಅಟ್ಲಾಂಟಾದಲ್ಲಿ ನಡೆದ ದಿ ಎಂಟರ್​ಟೈನರ್​​ ಕಾರ್ಯಕ್ರಮದಲ್ಲಿ ರೆಡ್​ ಕಾರ್ಪೆಟ್​ ಮೇಲೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಾಲಿವುಡ್​ ತಾರೆಯರಾದ ಅಕ್ಷಯ್​ ಕುಮಾರ್​, ಮೌನಿ ರಾಯ್​, ಸೋನಮ್​ ಬಜ್ವಾ, ದಿಶಾ ಪಟಾನಿ, ಅಪಾರಶಕ್ತಿ ಕುರಾನ ಸೇರಿದಂತೆ ಕೆಲವರು ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ನೋರಾ ಫತೇಹಿ ಎಂದಿಗೂ ಅಭಿಮಾನಿಗಳನ್ನು ಮೆಚ್ಚಿಸುವಲ್ಲಿ ವಿಫಲವಾಗುವುದಿಲ್ಲ. ಅವರು ಅಮೆರಿಕದಲ್ಲಿ ನಡೆದ ಎಂಟರ್​ಟೈನರ್​ ಕಾರ್ಯಕ್ರಮಕ್ಕೆ ಬಿಳಿ ಮತ್ತು ಕಪ್ಪು ಬಣ್ಣದ ಚೆಕ್ಸ್​ ಡಿಸೈನ್​ ಡ್ರೆಸ್ ಅನ್ನು ಆರಿಸಿಕೊಂಡಿದ್ದರು. ತಮ್ಮ ಕೂದಲನ್ನು ಹಾರಲು ಬಿಟ್ಟು ಐಷರಾಮಿ ಕಾರಿನೊಳಗೆ ಫೋಸ್​ ನೀಡುತ್ತಿರುವ ಚಿತ್ರಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಅಪ್ಲೋಡ್​​​ ಮಾಡಿದ್ದಾರೆ. ಇವರ ಮನಮೋಹಕ ನೋಟಕ್ಕೆ ಅಭಿಮಾನಿಗಳು ಪಕ್ಕಾ ಫಿದಾ ಆಗಿದ್ದಾರೆ. ಜೊತೆಗೆ ಸಾಕಷ್ಟು ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ . ಕೆಲವು ನೆಟ್ಟಿಗರು ಅವರನ್ನು 'ಕ್ವೀನ್'​ ಎಂದು ಸಂಬೋಧಿಸಿದರೇ, ಇನ್ನು ಕೆಲವರು ಕೆಂಪು ಹೃದಯದ ಎಮೋಜಿನೊಂದಿಗೆ 'ಅದ್ಭುತ' ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ:'ವೇದ' ಸಕ್ಸಸ್ ಬೆನ್ನಲ್ಲೇ ಟಾಲಿವುಡ್ ಸ್ಟಾರ್​ಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾದ ನಿರ್ದೇಶಕ ಹರ್ಷ

ದುಬೈನಲ್ಲಿ ಜನ್ಮದಿನ ಆಚರಿಸಿಕೊಂಡಿದ್ದ ನಟಿ: ಬಳುಕುವ ಬಳ್ಳಿ ನೋರಾ ಫತೇಹಿ ಕೆಲವರು ವಾರಗಳ ಹಿಂದೆ ದುಬೈನಲ್ಲಿ ತಮ್ಮ 31 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ತಮ್ಮ ಆಪ್ತರೊಂದಿಗೆ ಗ್ರಾಂಡ್​ ಆಗಿ ಬರ್ತ್​ಡೇ ಸೆಲೆಬ್ರೆಟ್​ ಮಾಡಿಕೊಂಡಿದ್ದರು. ಅದರ ವಿಡಿಯೋ ಮತ್ತು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ನೋರಾ ಅವರು ತಮ್ಮ ಸ್ನೇಹಿತರೊಂದಿಗೆ ಹಡಗಿನಲ್ಲಿ ಸಮಯ ಕಳೆದಿರುವುದು ಕಾಣಬಹುದು. ಇನ್ನೊಂದು ವಿಡಿಯೋದಲ್ಲಿ ನಟಿ ತಮ್ಮ ಸೊಂಟ ಬಳುಕಿಸಿ ಸಖತ್​ ಸ್ಟೆಪ್ಸ್​ ಹಾಕಿದ್ದರು. ಸಿರಿಯನ್​ ಗಾಯಕ ಲಮಿಕ್​ ಕಾನ್ ಹಾಡಿದ ಅರೇಬಿಕ್​ ಹಾಡು ಮೆಸಯ್ತಾರಾ ಹಾಡಿಗೆ ಹುಚ್ಚೆದ್ದು ಕುಣಿದಿದ್ದರು.​

ಬಾಲಿವುಡ್​ ತಾರೆಯರು

ಇನ್ನು ಅವರ ಕೆಲಸದ ವಿಚಾರವಾಗಿ ನೋಡುವುದಾದರೆ, ಆಯುಷ್ಮಾನ್​ ಖುರಾನಾ ಅವರ ಆಕ್ಷನ್​ ಹೀರೋನ ಜೇಧಾ ನಶಾ ಹಾಡಿನಲ್ಲಿ ನೋರಾ ಕಾಣಿಸಿಕೊಂಡಿದ್ದಾರೆ. ಸಾಜಿದ್​ ಖಾನ್​ ನಿರ್ದೇಶನದ ಮುಂಬರುವ 100 ಪರ್ಸೆಂಟ್​ ಚಿತ್ರದಲ್ಲಿ ನಟಿ ನೋರಾ ಫತೇಹಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಜಾನ್​ ಅಬ್ರಹಾಂ, ಶೆಹನಾಜ್​ ಗಿಲ್​ ಮತ್ತು ರಿತೇಶ್​ ದೇಶ್​ಮುಖ್​ ಕೂಡ ಅಭಿನಯಿಸಲಿದ್ದಾರೆ.

ಕೆನಡಾದಿಂದ ಉದ್ಯೋಗವನ್ನರಸಿ ಭಾರತಕ್ಕೆ ಬಂದ ನೋರಾ ಅದ್ಭುತ ನೃತ್ಯಗಳ ಮೂಲಕ ಅನೇಕ ಜನರ ಮನ ಗೆದ್ದಿದ್ದಾರೆ. ಒಂದು ಕಾಲದಲ್ಲಿ 3,000 ರೂಪಾಯಿಯಲ್ಲಿ ಜೀವನ ನಡೆಸುತ್ತಿದ್ದ ನೋರಾ ಈಗ ಬಹುಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಬರಿಗೈಲಿ ಭಾರತಕ್ಕೆ ಬಂದ ಅವರು ಇಂದು ಬಾಲಿವುಡ್​ ಬಹುಬೇಡಿಕೆಯ ನಟಿಯಾಗಿದ್ದಾರೆ.

ಇದನ್ನೂ ಓದಿ:'ಕಬ್ಜ'ಕ್ಕೆ ಶಿವಣ್ಣ ಎಂಟ್ರಿ: ಟ್ರೇಲರ್​ ಬಿಡುಗಡೆಗೂ ಮುನ್ನವೇ ಸರ್​ಪ್ರೈಸ್​ ಕೊಟ್ಟ ನಿರ್ದೇಶಕ ಆರ್ ಚಂದ್ರು

ABOUT THE AUTHOR

...view details