ಕರ್ನಾಟಕ

karnataka

ಪಠಾಣ್ ಬಿಡುಗಡೆಗೆ ಆಕ್ಷೇಪ: ಚಿತ್ರದ ಪೋಸ್ಟರ್​ಗಳನ್ನು ಹರಿದ ಭಜರಂಗ ದಳದ ಕಾರ್ಯಕರ್ತರು

By

Published : Jan 5, 2023, 3:02 PM IST

ಬೇಶರಂ ರಂಗ್​ ವಿವಾದ - ಪಠಾಣ್ ಸಿನಿಮಾ ಬಿಡುಗಡೆಗೆ ಆಕ್ಷೇಪ - ಚಿತ್ರಮಂದಿರದಲ್ಲಿದ್ದ ಪೋಸ್ಟರ್​ಗಳನ್ನು ಹರಿದ ಭಜರಂಗ ದಳದ ಕಾರ್ಯಕರ್ತರು.

Pathaan movie
ಪಠಾಣ್ ಬಿಡುಗಡೆಗೆ ಆಕ್ಷೇಪ

ನಟ​ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿರುವ ಪಠಾಣ್​​ ಸಿನಿಮಾ ಬಾಲಿವುಡ್ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಇದೇ ಜನವರಿ 25 ರಂದು ಬಿಡುಗಡೆ ಆಗಲಿರುವ ಈ ಚಿತ್ರದ ಟ್ರೈಲರ್​ ಅನ್ನು 10 ರಂದು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಪ್ರಚಾರದ ಭಾಗವಾಗಿ ಟ್ರೈಲರ್​ಗೂ ಮುನ್ನ ಎರಡು ಹಾಡುಗಳನ್ನು ಚಿತ್ರ ತಯಾರಕರು ಬಿಡುಗಡೆ ಮಾಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಲವೆಡೆ ಪ್ರತಿಭಟನೆ ಕೂಡ ನಡೆದಿದೆ.

ಪಠಾಣ್ ಪೋಸ್ಟರ್ ಹರಿದ ಘಟನೆ:ಪಠಾಣ್ ಚಿತ್ರದ ಬಿಡುಗಡೆಯನ್ನು ವಿರೋಧಿಸಿ ಅಹಮದಾಬಾದ್ ನಗರದ ವಸ್ತ್ರಾಪುರ ಪ್ರದೇಶದ ಆಲ್ಫಾ ಒನ್ ಮಾಲ್‌ನಲ್ಲಿರುವ ಥಿಯೇಟರ್‌ನಲ್ಲಿ ಚಿತ್ರದ ಪೋಸ್ಟರ್‌ಗಳನ್ನು ಹರಿದು ಪ್ರತಿಭಟನೆ ನಡೆಸಿದ ಭಜರಂಗ ದಳದ ಕಾರ್ಯಕರ್ತರನ್ನು ಬುಧವಾರ ಬಂಧಿಸಲಾಯಿತು. ಈ ಸಂಬಂಧ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಪಠಾಣ್ ಚಿತ್ರದ ಪೋಸ್ಟರ್​ಗಳನ್ನು ಥಿಯೇಟರ್​ನಲ್ಲಿ ಅಂಟಿಸಿರುವುದು ಬಜರಂಗದಳದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ಗುಜರಾತ್ ವಿಶ್ವ ಹಿಂದೂ ಪರಿಷತ್ (ವಿಹೆಚ್​ಪಿ) ವಕ್ತಾರ ಹಿತೇಂದ್ರ ಸಿಂಗ್ ರಜಪೂತ್ ಹೇಳಿದ್ದಾರೆ. ಹಾಗಾಗಿ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗುವುದು ಬೇಡ ಎಂದು ಪ್ರತಿಭಟನೆ ನಡೆಸಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡರು.

ವರದಿಗಳ ಪ್ರಕಾರ, ಪಠಾಣ್ ಚಿತ್ರದ ಪೋಸ್ಟರ್‌ಗಳನ್ನು ಕಿತ್ತು ಹಾಕಲು ವಸ್ತ್ರಾಪುರದ ಆಲ್ಫಾ ಒನ್ ಮಾಲ್‌ನ ಥಿಯೇಟರ್‌ಗೆ ತೆರಳಿದ್ದ ಭಜರಂಗದಳದ ಸದಸ್ಯರು ಸುಮಾರು 10-12 ಮಂದಿ ಇದ್ದರು ಎಂದು ವಸ್ತ್ರಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೆಕೆ ದಂಗರ್ ಹೇಳಿದ್ದಾರೆ. ಚಿತ್ರದ ಪೋಸ್ಟರ್​ಗಳನ್ನು ಹರಿದಿದ್ದಾರೆ. ಬಳಿಕ ಹೊರ ಬಂದು ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದರು. ನಾವು ಅವರಲ್ಲಿ 5-6 ಮಂದಿಯನ್ನು ಬಂಧಿಸಿ ಸುಮಾರು ಒಂದೂವರೆ ಗಂಟೆಗಳ ನಂತರ ಬಿಡುಗಡೆ ಮಾಡಿದ್ದೇವೆ. ಚಿತ್ರಮಂದಿರದಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ದಂಗರ್ ಹೇಳಿದ್ದಾರೆ.

ಇದನ್ನೂ ಓದಿ:ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ​ 'ಪಠಾಣ್'​ ಸಿನಿಮಾದ್ದಲ್ಲ

ಬಹು ನಿರೀಕ್ಷಿತ ಪಠಾಣ್ ಚಿತ್ರದ ಮೊದಲ ಹಾಡು ಬಿಡುಗಡೆ ಆದಾಗಿನಿಂದ ಸಿನಿಮಾ ವಿವಾದದ ಸುಳಿಯಲ್ಲಿ ಸಿಲುಕಿದೆ. ಬೇಶರಂ ರಂಗ್​​ ಹಾಡಿನಲ್ಲಿ ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಸಖತ್​ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ​ದೀಪಿಕಾ ಪಡುಕೋಣೆ ಮೈ ಚಳಿ ಬಿಟ್ಟು ಕುಣಿದಿದ್ದಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕ್​ ಔಟ್​ ಆಗಿದೆ.​ ಅದರಲ್ಲೂ 57ರ ವಯಸ್ಸಿನಲ್ಲೂ ಶಾರುಖ್​ ಖಾನ್ ಎನರ್ಜಿ ಬಗ್ಗೆ ಯುವಕರು ಕೊಂಡಾಡಿದ್ದಾರೆ. ಹಾಗಂತ ಅದನ್ನು ವಿರೋಧಿಸುವವರ ಸಂಖ್ಯೆಯೂ ಕಡಿಮೆ ಇಲ್ಲ. ನಟಿಯ ವೇಷಭೂಷಣ ಮತ್ತು ಕೇಸರಿ ಬಣ್ಣದ ಬಿಕಿನಿ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಸಿನಿಮಾ ಬಿಡುಗಡೆ ಮಾಡದಂತೆ ಹಲವೆಡೆ ಪ್ರತಿಭಟನೆ ಮುಂದುವರಿದಿದೆ.

ಇದನ್ನೂ ಓದಿ:ಪಠಾಣ್: ಅಶ್ಲೀಲ ದೃಶ್ಯ ತೆಗೆಯಲು ಡಿಜಿಪಿಗೆ ಪತ್ರ ಬರೆದ ಮಕ್ಕಳ ಕಲ್ಯಾಣ ಸಮಿತಿ

ಇನ್ನೂ ಉತ್ತರ ಪ್ರದೇಶ ರಾಜ್ಯ ಬಹ್ರೈಚ್ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯು (ಸಿಡಬ್ಲ್ಯುಸಿ) ಬೇಷರಮ್ ರಂಗ್ ಮತ್ತು ಇತರ ಅಶ್ಲೀಲ ವಿಷಯಗಳನ್ನು ಸೋಷಿಯಲ್​ ಮೀಡಿಯಾದಿಂದ ತೆಗೆದು ಹಾಕುವಂತೆ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸಲಹೆ ನೀಡಿದೆ. ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಏಳಿಗೆಗೆ ಸ್ಮಾರ್ಟ್ ಮೊಬೈಲ್ ಫೋನ್‌ಗಳನ್ನು ಒದಗಿಸಿದೆ. ಸುಲಭವಾಗಿ ಲಭ್ಯವಿರುವ ವಿಷಯಗಳನ್ನು ವೀಕ್ಷಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಸೋಷಿಯಲ್​​ ಮೀಡಿಯಾದಿಂದ ಅಶ್ಲೀಲ ವಿಷಯವನ್ನು ತೆಗೆದುಹಾಕುವುದು ಅವರ ಹಿತದೃಷ್ಟಿಯಿಂದ ಅಗತ್ಯ. ಹದಿಹರೆಯದವರ ಮನಸ್ಸಿನ ಮೇಲೆ ಪ್ರಭಾವ ಬಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.

ABOUT THE AUTHOR

...view details