ಕರ್ನಾಟಕ

karnataka

ಪ್ರೀತ್ಸಿದ್​ ಹುಡ್ಗೀನೇ ಕಳ್ಕೊಂಡ್ರೆ ಬದ್ಕೋದ್​ ಹೇಗೆ? ಅಂತಿದ್ದಾರೆ ಗೋಲ್ಡನ್​ ಸ್ಟಾರ್: 'ಬಾನದಾರಿಯಲ್ಲಿ' ಟ್ರೇಲರ್​ ರಿಲೀಸ್​

By ETV Bharat Karnataka Team

Published : Sep 5, 2023, 8:02 PM IST

baanadariyalli trailer: ಬಹುನಿರೀಕ್ಷಿತ 'ಬಾನದಾರಿಯಲ್ಲಿ' ಟ್ರೇಲರ್​ ರಿಲೀಸ್​ ಆಗಿದೆ.

baanadariyalli trailer release
'ಬಾನದಾರಿಯಲ್ಲಿ' ಟ್ರೇಲರ್​ ರಿಲೀಸ್​

ಚಮಕ್ ಚಿತ್ರ ಆದ್ಮಲೇ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ ಬಹುತೇಕ ಚಿತ್ರಗಳು ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಇದೀಗ ದೊಡ್ಡ ಮಟ್ಟದ ಯಶಸ್ಸಿನ ನಿರೀಕ್ಷೆಯೊಂದಕ್ಕೆ ಗೋಲ್ಡನ್ ಸ್ಟಾರ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದಾರೆ. ಗಣಿ ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಂಡಿರುವ ಚಿತ್ರ 'ಬಾನದಾರಿಯಲ್ಲಿ'. ಚಿತ್ರದ ಪೋಸ್ಟರ್ ಹಾಗೂ ಹಾಡುಗಳಿಂದಲೇ ಸೌತ್ ಸಿನಿಮಾ ರಂಗದಲ್ಲಿ ಕ್ರೇಜ್ ಹುಟ್ಟುಹಾಕಿರೋ 'ಬಾನದಾರಿಯಲ್ಲಿ' ಚಿತ್ರದ ಟ್ರೇಲರ್​ ಅನಾವರಣಗೊಂಡಿದೆ.

ಈ ಚಿತ್ರದಲ್ಲಿ ಮೆಚ್ಚಿನ ಕ್ರೀಡೆ ಕ್ರಿಕೆಟ್ ಆಟಗಾರನ ಪಾತ್ರದಲ್ಲಿ ಕಾಣಿಸಿರೋದು ಗಣಿಯ ಜೋಶ್ ಹೆಚ್ಚಿಸಿದ್ರೆ, ಈ ಚಿತ್ರವನ್ನು ಯಾವಾಗ ನೋಡ್ತಿವೋ ಅನ್ನೋ ಕಾತರ ಮಳೆ ಹುಡುಗನ‌ ಪ್ರೀತಿಸುವ ಅಭಿಮಾನಿಗಳಲ್ಲಿದೆ. ಸಾಕಷ್ಟು ಕುತೂಹಲ ಮೂಡಿಸಿರುವ ಬಾನದಾರಿಯಲ್ಲಿ ಚಿತ್ರದ ಅಧಿಕೃತ ಟ್ರೇಲರ್ ಅನಾವರಣಗೊಂಡಿದ್ದು, ಗಣೇಶ್ ಬಾಳಲ್ಲಿ ಮತ್ತೆ ಮುಂಗಾರು ಮಳೆ ಸುರಿಸುವ ಸೂಚನೆ ಸಿಗುತ್ತಿದೆ. 'ನನ್ನ ಮನಸ್ಸಿಗೆ ನೀವು ತುಂಬಾ ಇಷ್ಟ ಆಗಿದ್ದೀರಾ' ಅಂತಾ ಗಣೇಶ್ ಡೈಲಾಗ್​​ನಿಂದ ಆರಂಭವಾಗುವ ಬಾನದಾರಿಯಲ್ಲಿ ಟ್ರೈಲರ್, ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾಗುವ ಎಲ್ಲ ಎಲಿಮೆಂಟ್ಸ್​ಗಳನ್ನ ಹೊಂದಿದೆ.

ನಟಿ ರುಕ್ಮಿಣಿ ವಸಂತ್ ಅವರ ಸರ್ಫಿಂಗ್ ಸ್ಫೋರ್ಟ್ಸ್ ನೋಡಗರಿಗೆ ಸಖತ್ ಕಿಕ್ ನೀಡುತ್ತೆ. ಇನ್ನೂ ರಂಗಾಯಣ ರಘು ಅವರ, ಮೈದಾನದಲ್ಲಿ ಮ್ಯಾಚ್ ಗೆಲ್ಲೋದು ಮುಖ್ಯ ಅಲ್ಲ ಬದುಕಲ್ಲಿ ಫಿಕ್ಸ್ ಆಗಿರೋ ಹುಡುಗಿ ಮನಸ್ಸು ಗೆಲ್ಲೋದು ಮುಖ್ಯ ಎಂಬ ಪಂಚಿಂಗ್ ಡೈಲಾಗ್​ ಗಮನ ಸೆಳೆದಿದೆ. ಕೀನ್ಯಾ ಪ್ರವಾಸ, ಫ್ಯಾಮಿಲಿ ಸೆಂಟಿಮೆಂಟ್, ಲವ್ ಎಮೋಷನ್ ಹೊಂದಿರುವ ಬಾನದಾರಿಯಲ್ಲಿ ಚಿತ್ರದ ಟ್ರೇಲರ್​ ಅಭಿಮಾನಿಗಳ ಹೃದಯ ಗೆದ್ದಿದೆ.

ಇದನ್ನೂ ಓದಿ:ಫಸ್ಟ್ ಡೇಟ್​ಗೆ ಕತ್ರಿನಾರನ್ನು ವಿಕ್ಕಿ ಕೌಶಲ್​ ಇನ್​ವೈಟ್​ ಮಾಡಿದ್ದೇಗೆ ಗೊತ್ತಾ? ಸಖತ್​ ಸಿಂಪಲ್​ ಇವ್ರು!

ಕಥೆಗಾರ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಕಲ್ಪನೆಯಲ್ಲಿ ಅರಳುತ್ತಿರುವ ಬಾನದಾರಿಯಲ್ಲಿ ಚಿತ್ರ ಸೆಟ್ಟೇರಿದಾಗಿನಿಂದಲೂ ಸಖತ್​ ಸೌಂಡ್ ಮಾಡ್ತಿದೆ. ಸದ್ಯ ಟ್ರೇಲರ್​ ನೋಡಿದವರು ಈ ಚಿತ್ರದ ಮೂಲಕ ಗಣಪನ ಮತ್ತೊಂದು ಸೆಂಚುರಿ ಪಕ್ಕಾ ಅಂತಿದ್ದಾರೆ. ಯಾವಾಗ ಈ ಚಿತ್ರ ತೆರೆಗೆ ಬರಲಿದೆ ಎಂಬ ಕಾತರ ವ್ಯಕ್ತಪಡಿಸಿದವರಿಗೆ ಚಿತ್ರತಂಡ ಉತ್ತರ ಕೊಟ್ಟಿದೆ. ಇದೇ ಸೆಪ್ಟೆಂಬರ್ 28 ರಂದು ಬಹುನಿರೀಕ್ಷಿತ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಸನಾತನ ಧರ್ಮದ ವಿರುದ್ಧ ಉದಯನಿಧಿ ಸ್ಟಾಲಿನ್ ಹೇಳಿಕೆ: ಸಚಿವರ ವಿರುದ್ಧ ನಟ ಪ್ರಥಮ್ ಅಸಮಾಧಾನ!

ಬಾನದಾರಿಯಲ್ಲಿ ಸಿನಿಮಾ ಕಥೆಯನ್ನು ಸಿನಿಮಾಟೋಗ್ರಾಫರ್ ಪ್ರೀತಾ ಜಯರಾಮನ್ ಬರೆದಿದ್ದು, ಪ್ರೀತಂ ಚಿತ್ರಕಥೆ ಬರೆದಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಅಭಿಲಾಷ್ ಕಲತಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಗೋಲ್ಡನ್‌ ಸ್ಟಾರ್ ಜೊತೆ ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ರೊಮ್ಯಾನ್ಸ್ ಮಾಡಲಿದ್ದಾರೆ. ಗಣೇಶ್ ಪ್ರೀತಂ ಕಾಂಬೋದ ನಾಲ್ಕನೇ ಚಿತ್ರವಿದು. ಪ್ರೀತಂ ಈ ಹಿಂದೆ ಮುಂಗಾರು ಮಳೆ ಸಿನಿಮಾದಲ್ಲಿ ಸಹ ಬರಹಗಾರರಾಗಿ ಕೆಲಸ ಮಾಡಿದ್ದರು. ಬಳಿಕ ಅವರು ಗಣೇಶ್ ಅವರೊಂದಿಗೆ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, ಮತ್ತು 99 ಚಿತ್ರಗಳನ್ನು ನಿರ್ದೇಶಿಸಿದರು. ಈ ಜೋಡಿ ಇದೀಗ ಬಾನದಾರಿಯಲ್ಲಿ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಪ್ರೇಕ್ಷಕರ ಮುಂದೆ ಬರುತ್ತಿದೆ.

ABOUT THE AUTHOR

...view details