ಕರ್ನಾಟಕ

karnataka

ರೊಮ್ಯಾಂಟಿಕ್​ ಮೂಡ್​ನಲ್ಲಿ 'ರಾಲಿಯಾ' ದಂಪತಿ

By

Published : Sep 18, 2022, 12:28 PM IST

ಆಲಿಯಾ ಭಟ್​ ಇನ್ಸ್​​ಸ್ಟಾಗ್ರಾಮ್​​ನಲ್ಲಿ ಪತಿ ರಣ್​ಬೀರ್ ಜೊತೆಗಿನ ರೊಮ್ಯಾಂಟಿಕ್​ ಫೋಟೋ ಹಂಚಿಕೊಂಡಿದ್ದಾರೆ.

Alia Bhatt Ranbir Kapoor romantic pictures
ರೊಮ್ಯಾಂಟಿಕ್​ ಮೂಡ್​ನಲ್ಲಿ ರಾಲಿಯಾ ದಂಪತಿ

ಬಾಲಿವುಡ್​ ತಾರಾ​ ದಂಪತಿ ರಣ್​​ಬೀರ್​ ಕಪೂರ್​ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾ ವಿಶ್ವದಾದ್ಯಂತ 300 ಕೋಟಿ ರೂ ಗಳಿಸಿದೆ ಎಂದು ಚಿತ್ರ ತಯಾರಕರು ಹೇಳಿದ್ದಾರೆ. ಇದೇ ಚಿತ್ರದ ಮೂಲಕ ಸುದ್ದಿಯಲ್ಲಿರುವ 'ರಾಲಿಯಾ'(ರಣ್​​ಬೀರ್​ ಕಪೂರ್​ ಮತ್ತು ಆಲಿಯಾ ಭಟ್) ಜೋಡಿಯ ಲೇಟೆಸ್ಟ್‌ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬ್ರಹ್ಮಾಸ್ತ್ರ ಯಶಸ್ಸಿನ ಅಲೆಯಲ್ಲಿರುವ ಆಲಿಯಾ ಭಟ್ ತಮ್ಮ ಇನ್ಸ್​​ಸ್ಟಾಗ್ರಾಮ್ ಖಾತೆಯಲ್ಲಿ ಪತಿಯೊಂದಿಗಿರುವ ಏಕವರ್ಣದ ಫೋಟೋವೊಂದನ್ನು (Monochrome image) ಹಂಚಿಕೊಂಡಿದ್ದಾರೆ. ಫ್ಯಾಶನ್ ಛಾಯಾಗ್ರಾಹಕ ಅವಿನಾಶ್ ಗೋವಾರಿಕರ್ ಕ್ಲಿಕ್ಕಿಸಿರುವ ಈ ಚಿತ್ರದಲ್ಲಿ ಆಲಿಯಾ ಮತ್ತು ರಣಬೀರ್ ರೊಮ್ಯಾಂಟಿಕ್​ ಆಗಿ ಕಾಣುತ್ತಿದ್ದಾರೆ. ಈ ಪೋಸ್ಟ್‌ಗೆ ಆಲಿಯಾ "ಹೋಮ್" ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

ಪ್ರೀತಿಯ ಬಲೆಯಲ್ಲಿ ಬಿದ್ದ ಆಲಿಯಾ ಮತ್ತು ರಣ್​ಬೀರ್ ಜೋಡಿ ಈ ವರ್ಷದ ಏಪ್ರಿಲ್​​ನಲ್ಲಿ ವೈವಾಹಿಕ ಬಂಧನಕ್ಕೆ ಒಳಗಾಗಿದ್ದರು. ಜೂನ್​​ನಲ್ಲಿ ಆಲಿಯಾ ತಾನು ಗರ್ಭಿಣಿ ಎಂದು ಘೋಷಿಸಿದ್ದರು. ಇದಾದ ಬಳಿಕ, ಸುಂದರ ಫೋಟೋವೊಂದನ್ನು ಹಂಚಿಕೊಂಡು, "ನಮ್ಮ ಮಗು, ಶೀಘ್ರದಲ್ಲೇ ಬರಲಿದೆ" ಎಂದಿದ್ದರು. ಗರ್ಭಾವಸ್ಥೆಯಲ್ಲಿರುವ ನಟಿ ಬ್ರಹ್ಮಾಸ್ತ್ರ ಸಿನಿಮಾದ ಪ್ರಚಾರದಲ್ಲಿಯೂ ಸಂಪೂರ್ಣವಾಗಿ ತೊಡಗಿಕೊಂಡಿದ್ದರು.

ಶೀಘ್ರದಲ್ಲೇ ಪೋಷಕರಾಗಲಿರುವ ರಣ್​​ಬೀರ್​ ಕಪೂರ್​ ಮತ್ತು ಆಲಿಯಾ ಭಟ್

ಇದನ್ನೂ ಓದಿ:ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ: ಬ್ರಹ್ಮಾಸ್ತ್ರ ನಟಿ ಆಲಿಯಾ ಭಟ್

ಬ್ರಹ್ಮಾಸ್ತ್ರ ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಮಿಶ್ರ ಪ್ರತಿಕ್ರಿಯೆಗಳಿಗೆ ಪ್ರತಿಕ್ರಿಯಿಸಿರುವ ಆಲಿಯಾ, ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮತ್ತು ಚಲನಚಿತ್ರವನ್ನು ಟೀಕಿಸುವ ಹಕ್ಕು ಹೊಂದಿದ್ದಾರೆ. ನಮಗೆ ಎರಡು ಆಯ್ಕೆಗಳಿವೆ: ಒಂದು- ಸಕಾರಾತ್ಮಕ ವಿಷಯಗಳ ಮೇಲೆ ನಮ್ಮ ಗಮನ ಕೇಂದ್ರೀಕರಿಸಬೇಕು ಅಥವಾ ಋಣಾತ್ಮಕವಾದವುಗಳ ಬಗ್ಗೆಯೇ ಯೋಚಿಸುತ್ತಿರಬೇಕು. ಟೀಕೆ, ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಗಳು ಪ್ರೇಕ್ಷಕರ ಹಕ್ಕು. ನಾವು ಋಣಾತ್ಮಕವಾಗಿರುವುದಕ್ಕಿಂತ ಧನಾತ್ಮಕ ವಿಷಯಗಳನ್ನು ಮಾತ್ರ ಪಡೆಯುತ್ತೇವೆ ಎಂದು ಭಾವಿಸುತ್ತೇವೆ" ಎಂದಿದ್ದರು.

ABOUT THE AUTHOR

...view details