ಕರ್ನಾಟಕ

karnataka

ಮುದ್ದು ಮಗಳನ್ನು ಜಗತ್ತಿಗೆ ಪರಿಚಯಿಸಿದ ರಣ್​ಬೀರ್​ ಕಪೂರ್​-ಆಲಿಯಾ ದಂಪತಿ

By ETV Bharat Karnataka Team

Published : Dec 25, 2023, 5:21 PM IST

ಬಾಲಿವುಡ್ ತಾರಾ​ ದಂಪತಿ ರಣ್​ಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ತಮ್ಮ ಮಗಳು ರಾಹಾಳ ಮುಖವನ್ನು ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ್ದಾರೆ.

WATCH: Alia Bhatt, Ranbir Kapoor reveal Raha's face for the first time on Christmas 2023, toddler's eyes remind fans of Raj Kapoor
ಮಗಳು ರಾಹಾಳ ಮುಖವನ್ನು ಜಗತ್ತಿಗೆ ಪರಿಚಯಿಸಿದ 'ರಾಲಿಯಾ' ದಂಪತಿ

ಬಾಲಿವುಡ್​ ಸುಂದರ ಜೋಡಿ ಆಲಿಯಾ ಭಟ್​ ಮತ್ತು ರಣ್​ಬೀರ್​​ ಕಪೂರ್ ತಮ್ಮ ಮಗಳು ರಾಹಾ ಮುಖವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಕ್ರಿಸ್​ಮಸ್​ ಆಚರಿಸಲು ದಂಪತಿ ತಮ್ಮೊಂದಿಗೆ ರಾಹಾಳನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗುವಿನೊಂದಿಗೆ ರಣ್​ಬೀರ್​ ಮತ್ತು ಆಲಿಯಾ ಕ್ಯಾಮರಾಗೆ ಪೋಸ್​ ಕೊಟ್ಟರು. ರಾಹಾಳನ್ನು ನೋಡಿದ ಅಭಿಮಾನಿಗಳು ಮಗು, ರಣ್​ಬೀರ್​ ಕಪೂರ್​ ತಂದೆ ರಿಷಿ ಕಪೂರ್​ ಮತ್ತು ನಟಿ ಕರೀನಾ ಕಪೂರ್​ ಅವರಂತಿದೆ ಎಂದು ಕಮೆಂಟ್​ ಮಾಡುತ್ತಿದ್ದಾರೆ.

ಆಲಿಯಾ ಭಟ್ ಮತ್ತು ರಣ್​ಬೀರ್​ ಕಪೂರ್​​ 2022ರ ಏಪ್ರಿಲ್​ 14ರಂದು ಮದುವೆಯಾದರು. ಮುಂಬೈನಲ್ಲಿ ಕೆಲ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಜೋಡಿ ಸಪ್ತಪದಿ ತುಳಿದರು. 2022ರ ಜೂನ್​ ತಿಂಗಳಲ್ಲಿ ಆಲಿಯಾ ತಮ್ಮ ಗರ್ಭಧಾರಣೆ ಘೋಷಿಸಿದರು. ಕಳೆದ ವರ್ಷ ನವೆಂಬರ್​ 6ರಂದು ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಮಗುವಿಗೆ ರಾಹಾ ಎಂದು ಹೆಸರಿಡಲಾಗಿದೆ.

ಹಲವು ಬಾರಿ ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಶೇರ್​ ಮಾಡುವಾಗ ರಾಹಾ ಮುಖ ಕಾಣದಂತೆ ದಂಪತಿ ಎಚ್ಚರ ವಹಿಸಿದ್ದರು. ಆದರೆ, ರಾಹಾಳ ಮುಖವನ್ನು ತೋರಿಸುವಂತೆ ಅಭಿಮಾನಿಗಳು ಆಲಿಯಾರನ್ನು ಒತ್ತಾಯಿಸಿದಾಗ, "ರಾಹಾಗೆ ಎರಡು ವರ್ಷವಾಗುವವರೆಗೆ ನಾವು ಅವಳ ಯಾವುದೇ ಫೋಟೋಗಳನ್ನು ಹಂಚಿಕೊಳ್ಳುವುದಿಲ್ಲ. ನಾವು ಯಾವುದೇ ಸಮಾರಂಭದಲ್ಲಿ ಕಾಣಿಸಿಕೊಂಡರೆ, ಪಾಪರಾಜಿಗಳು ಕೂಡ ಫೋಟೋ ತೆಗೆದು ಸೋಷಿಯಲ್​ ಮೀಡಿಯಾದಲ್ಲಿ ಹಾಕಬಾರದು" ಎಂದು ಪ್ರತಿಕ್ರಿಯಿಸಿದ್ದರು.

ಸಿನಿಮಾ ವಿಚಾರ:ಆಲಿಯಾ ಭಟ್​ ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಲ್ಲಿ ರಣ್​ವೀರ್ ಸಿಂಗ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದರು. ಈ ಸಿನಿಮಾ ಜುಲೈ 28ರಂದು ಬಿಡುಗಡೆಯಾಗಿ, ಥಿಯೇಟರ್​ನಲ್ಲಿ ಧೂಳೆಬ್ಬಿಸಿತ್ತು. ಇದರ ಜೊತೆ ಆಲಿಯಾ ಮೊದಲನೇ ಬಾರಿಗೆ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಹಾರ್ಟ್ ಆಫ್ ಸ್ಟೋನ್' ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದಲ್ಲದೇ, ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಮುಂಬರುವ ಚಿತ್ರ 'ಜೀ ಲೇ ಜರಾ'ದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಮತ್ತೊಂದೆಡೆ, ರಣ್​​ಬೀರ್ ಕಪೂರ್​​ ಅವರು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾಹಿದ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ 'ಕಬೀರ್ ಸಿಂಗ್' ಬಳಿಕ ಸಂದೀಪ್ ರೆಡ್ಡಿ ನಿರ್ದೇಶಿಸಿರುವ ಎರಡನೇ ಬಾಲಿವುಡ್ ಸಿನಿಮಾವಿದು. ಡಿಸೆಂಬರ್ 1ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಉತ್ತಮ ಕಲೆಕ್ಷನ್​ ಮಾಡಿದೆ.. ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ. ಬಾಬಿ ಡಿಯೋಲ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ:ವಿಶ್ವಾದ್ಯಂತ ₹800 ಕೋಟಿ ಸಮೀಪಿಸಿದ 'ಅನಿಮಲ್'​: ರಣ್​ಬೀರ್​ - ರಶ್ಮಿಕಾಗೆ ಬಹುದೊಡ್ಡ ಯಶಸ್ಸು

ABOUT THE AUTHOR

...view details