ಕರ್ನಾಟಕ

karnataka

49ನೇ ವರ್ಷಕ್ಕೆ ಕಾಲಿಟ್ಟ ಮಾಜಿ ವಿಶ್ವಸುಂದರಿ; ಐಶ್ವರ್ಯಾ ರೈ ಬಚ್ಚನ್‌ಗೆ​ ಶುಭಾಶಯಗಳ ಸುರಿಮಳೆ

By

Published : Nov 1, 2022, 11:27 AM IST

Updated : Nov 1, 2022, 11:37 AM IST

ಬಾಲಿವುಡ್​ ಮಾತ್ರವಲ್ಲದೆ ಹಾಲಿವುಡ್​ನಲ್ಲೂ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್​​ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

aishwarya rai bachchan celebrating 49th birthday
ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್

ಬಾಲಿವುಡ್​ನ ಮೋಹಕ ತಾರೆ ಐಶ್ವರ್ಯಾ ರೈ ಬಚ್ಚನ್​ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 49ನೇ ವರ್ಷಕ್ಕೆ ಕಾಲಿಟ್ಟರೂ ಇನ್ನೂ ಚಿರಯವ್ವನೆಯಂತೆ ಸಿನಿಕ್ಷೇತ್ರದಲ್ಲಿ ಇಂದಿಗೂ ಬೇಡಿಕೆ ಉಳಿಸಿಕೊಂಡಿರುವ ನಟಿ ಈಕೆ. ಮಂಗಳೂರಿನ ಚೆಲುವೆಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್

ಮಾಡೆಲಿಂಗ್​ ಕ್ಷೇತ್ರದಿಂದ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದ ಐಶ್ವರ್ಯಾ ರೈ ಅವರಿಗೆ ವಿಶ್ವಸುಂದರಿ ಕಿರೀಟ ದೊರೆತ ಕ್ಷಣದಿಂದ ಅವರ ಅದೃಷ್ಠದ ಬಾಗಿಲು ತೆರೆದುಕೊಂಡಿತ್ತು. ಸಾಲು ಸಾಲು ಸಿನಿಮಾಗಳ ಆಫರ್​​ಗಳು ಬರಲಾರಂಭಿಸಿದ್ದವು. ಜಾಗತಿಕ ತಾರೆ 1994ರಲ್ಲಿ ವಿಶ್ವಸುಂದರಿ ಕಿರೀಟ ತೊಟ್ಟ ಭಾರತದ ಎರಡನೇ ಮಹಿಳೆ. ಇದಕ್ಕಿಂತ ಮೊದಲು 1966 ರಲ್ಲಿ ರೀಟಾ ಫರಿಯಾ ಅವರಿಗೆ ಈ ಕಿರೀಟ ದೊರೆತಿದ್ದು, ವಿಶ್ವಸುಂದರಿ ಪಟ್ಟ ತೊಟ್ಟ ಭಾರತದ ಮೊದಲ ಮಹಿಳೆಯಾಗಿದ್ದರು.

ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್

ಆರಂಭದಲ್ಲಿ ತಮಗೆ ಬರುತ್ತಿದ್ದ ಸಿನಿಮಾ ಆಫರ್​ಗಳಿಗೆಲ್ಲ ಒಕೆ ಎಂದು ಹೇಳದೇ ನಿರ್ದೇಶಕ ಮಣಿರತ್ನಂ ನಿರ್ದೇಶನದ 'ಇರುವರ್​' ತಮಿಳು ಸಿನಿಮಾದ ಮೂಲಕ ಅಭಿನಯ ಲೋಕಕ್ಕೆ ಕಾಲಿಟ್ಟರು. ನಂತರ 'ಔರ್​ ಪ್ಯಾರ್​ ಹೋ ಗಯಾ' ಸಿನಿಮಾ ಮೂಲಕ ಬಾಲಿವುಡ್​ನಲ್ಲಿ ಖಾತೆ ತೆರೆದರು. ನಂತರದಲ್ಲಿ ತಮಿಳು, ಹಿಂದಿ, ಬೆಂಗಾಲಿ, ಇಂಗ್ಲಿಷ್​ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. 2002 ರಲ್ಲಿ, ಸಂಜಯ್ ಲೀಲಾ ಬನ್ಸಾಲಿಯವರ 'ದೇವದಾಸ್' ಚಿತ್ರದ ವಿಶ್ವ ಪ್ರಥಮ ಪ್ರದರ್ಶನಕ್ಕಾಗಿ ಐಶ್ವರ್ಯಾ ರೈ ಕ್ಯಾನೆಸ್‌ ಪ್ರವೇಶಿಸಿದರು.

ಐಶ್ವರ್ಯಾ ರೈ ಅಭಿನಯದ 'ಪೊನ್ನಿಯಿನ್​ ಸೆಲ್ವನ್​​ 1' ತೆರೆಕಂಡು ಜಾಗತಿಕವಾಗಿ ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು. ಸದ್ಯ 'ಪೊನ್ನಿಯಿನ್​ ಸೆಲ್ವನ್​ 2' ಸಿನಿಮಾ ಮಾತ್ರ ಒಪ್ಪಿಕೊಂಡಿರುವ ಅವರ ಮನಮೋಹಕ ನೃತ್ಯಕ್ಕೆ ಮನಸೋಲದ ಅಭಿಮಾನಿಗಳಿಲ್ಲ.

ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್

ಅಭಿಷೇಕ್​ ಬಚ್ಚನ್​ ಅವರನ್ನು 2007ರಲ್ಲಿ ಪ್ರೀತಿಸಿ ಮದುವೆಯಾಗಿರುವ ಐಶ್ವರ್ಯಾ ಅವರಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ. ಮಗಳೆಂದರೆ ಐಶ್ವರ್ಯಾಗೆ ತುಂಬಾ ಪ್ರೀತಿ. ಯಾವತ್ತೂ ಫಿಟ್​ ಆ್ಯಂಡ್​ ಸ್ಲಿಮ್​ ಆಗಿ ಆಕರ್ಷಕ ಸೌಂದರ್ಯದಿಂದಿರುವ ಐಶ್ವರ್ಯಾ ಪ್ರೆಗ್ನೆನ್ಸಿ ಸಮಯದಲ್ಲಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಕ್ಕಾಗಿ ಎಲ್ಲಾ ಕಡೆಯಿಂದಲೂ ನೆಗೆಟಿವ್​ ಕಮೆಂಟ್​ಗಳನ್ನು ಎದುರಿಸುವಂತಾಗಿತ್ತು. ವಿಭಿನ್ನವಾದ ಪಾತ್ರಗಳಿಗೆ ಜೀವ ತುಂಬುವ ಮೂಲಕ ಸಿನಿರಂಗದಲ್ಲಿ ಸಾಕಷ್ಟು ಎತ್ತರಕ್ಕೆ ಏರಿರುವ ಐಶ್ವರ್ಯಾ ಬಾಲಿವುಡ್​ನಲ್ಲಿ ಮಾತ್ರವಲ್ಲದೆ 'ಪಿಂಕ್ ಪ್ಯಾಂಥರ್ 2' ಮತ್ತು 'ದಿ ಲಾಸ್ಟ್ ಲೀಜನ್' ನಂತಹ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬಣ್ಣ ಹಚ್ಚುವ ಮೂಲಕ ಹಾಲಿವುಡ್​ನಲ್ಲೂ ತಮ್ಮ ಪ್ರತಿಭೆಯ ಅಚ್ಚೊತ್ತಿದ್ದಾರೆ.

ಇದನ್ನೂ ಓದಿ:ನಟಿ ಕೃತಿ ಕರಬಂದ ಬರ್ತಡೇ ಪಾರ್ಟಿಗೆ ಪ್ರಿಯಕರ ಪುಲ್ಕಿತ್ ಸಾಮ್ರಾಟ್.. ಜೋಡಿಹಕ್ಕಿ ಫೋಟೋ ವೈರಲ್​

Last Updated : Nov 1, 2022, 11:37 AM IST

ABOUT THE AUTHOR

...view details