ಕರ್ನಾಟಕ

karnataka

ಅನನ್ಯಾ ಪಾಂಡೆ ಜೊತೆ ಫೋಟೋ ವೈರಲ್​​.. ಆದಿತ್ಯ ರಾಯ್ ಕಪೂರ್ ರಿಯಾಕ್ಷನ್​ ಹೀಗಿತ್ತು

By

Published : Aug 1, 2023, 7:02 PM IST

Aditya Ananya dating Rumors: ಅನನ್ಯಾ ಪಾಂಡೆ ಜೊತೆ ಫೋಟೋ ವೈರಲ್​ ಆದ ಕುರಿತು ಸಂದರ್ಶನವೊಂದರಲ್ಲಿ ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಪ್ರತಿಕ್ರಿಯಿಸಿದ್ದಾರೆ.

Aditya Ananya dating Rumors
ಆದಿತ್ಯ ಅನನ್ಯಾ ಡೇಟಿಂಗ್​ ವದಂತಿ

ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಅವರು ಸದ್ಯ ತಮ್ಮ ವೆಬ್ ಸೀರಿಸ್ 'ದಿ ನೈಟ್ ಮ್ಯಾನೇಜರ್‌' ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ಅಲ್ಲದೇ ನಟಿ ಅನನ್ಯಾ ಪಾಂಡೆ ಜೊತೆ ಡೇಟಿಂಗ್​ ವಿಚಾರವಾಗಿಯೂ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಪೋರ್ಚುಗಲ್‌ನಿಂದ ಹಿಂತಿರುಗಿರುವ ನಟ, ನಟನೆ ಮಾತ್ರವಲ್ಲದೇ ಡೇಟಿಂಗ್​​ ವಿಚಾವಾಗಿಯೂ ಸುದ್ದಿಯಲ್ಲಿದ್ದು ಈ ಬಗ್ಗೆ ಮಾತನಾಡಿದ್ದಾರೆ. ಕಳೆದ ತಿಂಗಳು ಯೂರೋಪ್‌ನಿಂದ ರೂಮರ್ಸ್​ ಲವ್​ ಬರ್ಡ್ಸ್​ ಫೋಟೋಗಳು ಹೊರ ಬಂದವು. ಇದೀಗ ಅನನ್ಯಾ ಪಾಂಡೆ ಜೊತೆಗಿನ ವೈರಲ್ ಫೋಟೋಗಳ ಬಗ್ಗೆ ಆದಿತ್ಯ ರಾಯ್ ಕಪೂರ್ ಮಾತನಾಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಆದಿತ್ಯ ರಾಯ್​ ಕಪೂರ್ ಅವರ ಪೋರ್ಚುಗಲ್ ಪ್ರವಾಸದ ಬಗ್ಗೆ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ನಟ, ವಿಶ್ರಾಂತಿ ಪಡೆಯಲು ವಿರಾಮದ ಅಗತ್ಯವಿದೆ ಎಂದು ತಿಳಿಸಿದರು. ಆದರೆ ಮುಂಬೈ ಮಳೆಯನ್ನು ಮಿಸ್ ಮಾಡಿಕೊಂಡಿರುವುದಾಗಿಯೂ ತಿಳಿಸಿದರು.

"ನನಗೆ ಬಿಡುವು ಬೇಕಿತ್ತು. ನಾನು ಮುಂಬೈ ಮಳೆಯನ್ನು ಇಷ್ಟಪಡುತ್ತೇನೆ. ಪೋರ್ಚುಗಲ್ ಪ್ರವಾಸ ವೇಳೆ ಮಾನ್ಸೂನ್ ಅನ್ನು ಮಿಸ್​ ಮಾಡಿಕೊಂಡಿದ್ದೆ. ಆದ್ರೆ ನಾನು ಹಿಂತಿರುಗಿದ ಕ್ಷಣದಿಂದ, ಸುಮಾರು ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ" ಎಂದು ನಟ ಆದಿತ್ಯ ರಾಯ್​ ಕಪೂರ್ ತಿಳಿಸಿದರು.

ನಟಿ ಅನನ್ಯಾ ಪಾಂಡೆ ಜೊತೆಗಿನ ಕೆಲ​ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಬಗ್ಗೆ ನೆನಪಿಸಿದಾಗ, "ನಾನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯವಾಗಿಲ್ಲದಿರುವುದು ಒಂದೊಳ್ಳೆ ವಿಚಾರ. ಆದರೆ, ಈ ವೈರಲ್​ ಫೋಟೋ ವಿಚಾರ ನನ್ನ ಗಮನಕ್ಕೆ ಬಂದಿದೆ" ಎಂದಷ್ಟೇ ಉತ್ತರಿಸಿದರು.

ಕಳೆದ ವರ್ಷ ಆದಿಪುರುಷ್​ ನಟಿ ಕೃತಿ ಸನೋನ್ ಅವರು ಆಯೋಜಿಸಿದ್ದ ದಿವಾಲಿ ಪಾರ್ಟಿಯಲ್ಲಿ ಆದಿತ್ಯಾ ಮತ್ತು ಅನನ್ಯಾ ಒಟ್ಟಿಗೆ ಕಾಣಿಸಿಕೊಂಡ ಬೆನ್ನಲ್ಲೇ ಡೇಟಿಂಗ್​​ ವದಂತಿಗಳು ಪ್ರಾರಂಭವಾಗಿವೆ. ಈ ಜೋಡಿ ತಮ್ಮ ಪ್ರೀತಿ ಬಗ್ಗೆ ಎಲ್ಲೂ ಏನನ್ನೂ ಮಾತನಾಡಿಲ್ಲ. ಆದಾಗ್ಯೂ, ಇತ್ತೀಚೆಗೆ ವಿದೇಶದ ಸರೋವರದ ಬಳಿ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿರುವ ಫೋಟೋ ವೈರಲ್​ ಆದ ಬೆನ್ನಲ್ಲೇ, ಅಭಿಮಾನಿಗಳು ಈ ಜೋಡಿ ಪ್ರೀತಿಯಲ್ಲಿರುವುದು ಖಚಿತ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬಿಗ್​ ಬಾಸ್​​ನಲ್ಲಿ ಭಟ್ ಫ್ಯಾಮಿಲಿ: ಪುತ್ರಿ ಭೇಟಿಯಾದ ಮಹೇಶ್ ಭಟ್, ಇಂದು ಸೆಲೆಬ್ರಿಟಿ ಹೌಸ್​​ಗೆ ಆಲಿಯಾ ಭಟ್ ಎಂಟ್ರಿ

ಈ ಜೋಡಿಯ ಸಿನಿಮಾ ವಿಚಾರ ಗಮನಿಸುವುದಾದರೆ ಅನನ್ಯಾ ಕಾಮಿಡಿ ಸಿನಿಮಾ ಡ್ರೀಮ್ ಗರ್ಲ್ 2 ನಲ್ಲಿ ನಟಿಸಿದ್ದಾರೆ. ಆಯುಷ್ಮಾನ್ ಖುರಾನಾ ಅವರೊಂದಿಗೆ ನಟಿಸಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫರ್ಹಾನ್ ಅಖ್ತರ್ ಅವರ 'ಖೋ ಗಯೇ ಹಮ್ ಕಹಾನ್' ಮತ್ತು ವಿಕ್ರಮಾದಿತ್ಯ ಮೋಟ್ವಾನೆ ಅವರ ಸೈಬರ್ ಕ್ರೈಮ್ ಥ್ರಿಲ್ಲರ್ 'ಕಂಟ್ರೋಲ್' ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಆದಿತ್ಯಾ ರಾಯ್​ ಕಪೂರ್​​ ಅವರು ಸಾರಾ ಅಲಿ ಖಾನ್​ ಜೊತೆ ಮೆಟ್ರೋ ಇನ್​ ದಿನೋ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುರಾಗ್ ಬಸು ನಿರ್ದೇಶನದ ಈ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ನೀನಾ ಗುಪ್ತಾ, ಅನುಪಮ್ ಖೇರ್ ಮತ್ತು ಫಾತಿಮಾ ಸನಾ ಶೇಖ್ ಕೂಡ ನಟಿಸುತ್ತಿದ್ದಾರೆ.

ಇದನ್ನೂ ಓದಿ:ಉತ್ತರಾಖಂಡಕ್ಕೆ ನಟ ಅನುಪಮ್​ ಖೇರ್ ಭೇಟಿ - ಮುಂದಿನ ಸಿನಿಮಾ ಶೂಟಿಂಗ್​ಗೆ ತಯಾರಿ!

ABOUT THE AUTHOR

...view details