ಕರ್ನಾಟಕ

karnataka

'ಮರಿ ಸಿಂಹ/ಸಿಂಹಿಣಿ ಬರುತ್ತಿದ್ದಾರಾ?' ಅಭಿಮಾನಿಗಳ ಕುತೂಹಲಕ್ಕೆ ಹರಿಪ್ರಿಯಾ ಏನ್‌ ಹೇಳಿದ್ರು?

By

Published : Mar 20, 2023, 12:41 PM IST

ಮದುವೆಯಾಗಿ ಎರಡು ತಿಂಗಳಲ್ಲೇ ಹರಿಪ್ರಿಯಾ ಶುಭಸುದ್ದಿ​ ನೀಡಿದ್ದಾರೆ.

haripriya
ಹರಿಪ್ರಿಯಾ

ಕನ್ನಡ ಚಿತ್ರರಂಗದ ತಾರಾಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜನವರಿ 26 ರಂದು ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಹನಿಮೂನ್​ ಮುಗಿಸಿಕೊಂಡು ಬಂದಿದ್ದ ನವಜೋಡಿ ಇದೀಗ ತಮ್ಮ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಹರಿಪ್ರಿಯಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿಕೊಂಡಿರುವ ಪೋಸ್ಟ್​ ಕುತೂಹಲ ಮೂಡಿಸಿದೆ.

ಸ್ಯಾಂಡಲ್​ವುಡ್​ನಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗಳ ಸಾಲಿಗೆ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಸೇರಿದ್ದಾರೆ. ಕಳೆದ ಮೂರು ವರ್ಷಗಳಿಂದ ಗೌಪ್ಯವಾಗಿ ಡೇಟಿಂಗ್​ನಲ್ಲಿದ್ದ ಇವರು ಕಳೆದ ಡಿಸೆಂಬರ್​ ತಿಂಗಳಿನವರೆಗೆ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಅಲ್ಲದೇ ಮದುವೆ ಬಗ್ಗೆ ಯಾರೂ ಕೂಡ ಊಹಿಸಿರಲಿಲ್ಲ. ಆದರೆ ನಾಲ್ಕು ತಿಂಗಳ ಹಿಂದೆ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಅದೇ ಸಮಯದಲ್ಲಿ ದುಬೈ ಪ್ರವಾಸ ಮುಗಿಸಿದ ಜೊತೆಯಾಗಿ ಕೈ ಕೈ ಹಿಡಿದುಕೊಂಡು ಮಾಧ್ಯಮದ ಮುಂದೆ ಕಾಣಿಸಿಕೊಂಡಿದ್ದರು.

ಇದಾದ ಕೆಲವು ದಿನಗಳ ಬಳಿಕ 'ಸಿಂಹಪ್ರಿಯಾ' ಕುಟುಂಬಸ್ಥರ ಸಮ್ಮುಖದಲ್ಲಿ ಗೌಪ್ಯವಾಗಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಲ್ಲದೇ ಅವರಿಬ್ಬರು ತಮ್ಮ ಎಂಗೇಜ್​ಮೆಂಟ್​ ಫೋಟೋಗಳನ್ನು ಹಂಚಿಕೊಂಡು ಎಲ್ಲಾ ಗಾಸಿಪ್​ಗಳಿಗೆ ತೆರೆ ಎಳೆದಿದ್ದರು. ಅದಾಗಿ ನಾವಿಬ್ಬರು ಜನವರಿ 26 ರಂದು ಮದುವೆಯಾಗುತ್ತಿರುವುದಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಕೊನೆಗೂ ಅದೇ ದಿನಾಂಕದಂದು ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಸರಳ ವಿವಾಹವಾಗಿದ್ದು, ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿತ್ತು.

ಇದನ್ನೂ ಓದಿ:ನಾಟು ನಾಟು ಕ್ರೇಜ್: RC15 ಶೂಟಿಂಗ್​ ಸೆಟ್​​ ಮರಳಿದ ರಾಮ್​ ಚರಣ್​ ಜೊತೆ ಕುಣಿದು ಕುಪ್ಪಳಿಸಿದ ಪ್ರಭುದೇವ ಟೀಂ

ಹೀಗೆ ಮದುವೆ ಮುಗಿಸಿಕೊಂಡ ಜೋಡಿ ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು. ಹನಿಮೂನ್​ ಕೂಡ ಮುಗಿಸಿಕೊಂಡು ಬಂದಿದ್ದರು. ಇದೀಗ ಸಿನಿಮಾ ವಿಚಾರವಾಗಿ ಇಬ್ಬರು ಕೊಂಚ ಬ್ಯುಸಿಯಾಗಿದ್ದು, ಈ ಮಧ್ಯೆ ಹರಿಪ್ರಿಯಾ ಬಿಗ್​ ಅಪ್​ಡೇಟ್​ ನೀಡಿದ್ದಾರೆ. ಹೇಸರೇನು ಮೇಡಮ್​, ಯಾವಾಗ ಅನೌನ್ಸ್​ ಮಾಡ್ತೀರಾ?, ನಿಜಾನಾ, ಗುಡ್​ ನ್ಯೂಸ್​ ಎಂಬ ಮೆಸೇಜ್​ಗಳಿರುವ ಸ್ಕ್ರೀನ್​ ಶಾಟ್​ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, "ನನಗೆ ಗೊತ್ತು ನೀವೆಲ್ಲರೂ ಬಹುಶಃ ಏನೆಂದು ತಿಳಿಯುವ ಕುತೂಹಲ ಹೊಂದಿರುತ್ತೀರಿ. ಅನೌನ್ಸ್​ ಮಾಡುವ ಮುನ್ನ ನೀವು ಊಹೆ ಮಾಡಿ" ಎಂದು ಕ್ಯಾಪ್ಶನ್​ ಬರೆದಿದ್ದಾರೆ.

ಹರಿಪ್ರಿಯಾ ಪೋಸ್ಟ್​ ಅಪ್​ಲೋಡ್​ ಮಾಡುತ್ತಿದ್ದಂತೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. "ನೀವು ಪ್ರೆಗ್ನೆಂಟಾ?, ಮರಿ ಸಿಂಹ ಅಥವಾ ಸಿಂಹಿಣಿ ಬರುತ್ತಿದ್ದಾರಾ?, ನಿಮ್ಮ ಮುಂದಿನ ಸಿನಿಮಾ ಬಗ್ಗೆ ಗುಡ್​ ನ್ಯೂಸ್​ ಹೇಳ್ತಿದ್ದೀರಾ?" ಎಂದೆಲ್ಲಾ ಬಗೆ ಬಗೆಯ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ. ಅಷ್ಟಕ್ಕೂ ಹರಿಪ್ರಿಯಾ ಈ ಬಗ್ಗೆ ಇನ್ನು ಅಪ್​ಡೇಟ್​ ನೀಡಿಲ್ಲ. ಹೀಗಾಗಿ ಗುಡ್​ ನ್ಯೂಸ್​ ಏನೆಂಬುದನ್ನು ನಟಿ ಬಹಿರಂಗಪಡಿಸುವವರೆಗೂ ಕಾದು ನೋಡಬೇಕಿದೆ.

ಇದನ್ನೂ ಓದಿ:'ಆಪ್ತಮಿತ್ರ' ಇಲ್ಲಿ 300 ದಿನ ಪ್ರದರ್ಶನ ಕಂಡಿತ್ತು! ಇತಿಹಾಸದ ಪುಟ ಸೇರ್ತಿದೆ ಶಿವಮೊಗ್ಗದ ಲಕ್ಷ್ಮೀ ಟಾಕೀಸ್

ABOUT THE AUTHOR

...view details