ಕರ್ನಾಟಕ

karnataka

Sudeep tweet: 'ಒಳ್ಳೆಯತನವು ದುರ್ಬಳಕೆ ಮಾಡಿಕೊಳ್ಳುವ ಸಾಧನವಲ್ಲ': ನಿರ್ಮಾಪಕರ ಆರೋಪದ ಬೆನ್ನಲ್ಲೇ ಕಿಚ್ಚ ಟ್ವೀಟ್​

By

Published : Jul 4, 2023, 5:58 PM IST

Updated : Jul 4, 2023, 6:11 PM IST

ನಿರ್ಮಾಪಕ ಎನ್​ ಎಂ ಕುಮಾರ್ ಆರೋಪದ ಬೆನ್ನಲ್ಲೇ ನಟ ಕಿಚ್ಚ ಸುದೀಪ್​ ಟ್ವೀಟ್​ ಮೂಲಕ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

sudeep
ಸುದೀಪ್​

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ವಿರುದ್ಧ ಖ್ಯಾತ ನಿರ್ಮಾಪಕ ಎನ್​ ಎಂ ಕುಮಾರ್ ಗಂಭೀರ ಆರೋಪ ಮಾಡಿದ್ದರು. ಸುದೀಪ್​ ತಮ್ಮಿಂದ ಮುಂಗಡ ಹಣ ಪಡೆದು ಸಿನಿಮಾ ಮಾಡುತ್ತಿಲ್ಲ ಎಂದು ದೂರಿದ್ದರು. ಈ ಆರೋಪಕ್ಕೆ ಟ್ವೀಟ್​ ಮೂಲಕ ಕಿಚ್ಚ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಒಳ್ಳೆಯತನವು ದುರ್ಬಳಕೆ ಮಾಡಿಕೊಳ್ಳುವ ಸಾಧನವಲ್ಲ ಎಂದಿದ್ದಾರೆ.

ಕಿಚ್ಚ ಸುದೀಪ್​ ಟ್ವೀಟ್​:ಆಂಗ್ಲ ಭಾಷೆಯ ವ್ಯಾಖ್ಯಾನವೊಂದನ್ನು ಉಲ್ಲೇಖಿಸಿರುವ ಸುದೀಪ್​, ಈ ಕೋಟ್​ ನನಗೆ ನನಗೆ ಇಷ್ಟವಾಯಿತು, ನೀವೂ ಓದಿ ಎಂದಿದ್ದಾರೆ. "ಇದು ನಿಮಗೆ ತಿಳಿದಿರಲಿ. ಒಳ್ಳೆಯತನವು ಕುಶಲತೆ ಮತ್ತು ದುರುಪಯೋಗದ ಸಾಧನವಲ್ಲ. ಅದು ನಿಜವಾಗಿದ್ದಾಗ ಪ್ರಕಾಶಮಾನವಾಗಿ ಹೊಳೆಯುತ್ತದೆ. ದುರಹಂಕಾರವು ಅದರ ಪ್ರಕಾಶವನ್ನು ಹಾಳುಮಾಡಲು ನಾನು ಬಿಡುವುದಿಲ್ಲ. ವಿನಮ್ರರಾಗಿರಿ ಮತ್ತು ಸತ್ಯವಂತರಾಗಿರಿ" ಎಂಬಂರ್ಥ ನೀಡುವ ಮಾತನ್ನು ಪೋಸ್ಟ್​ ಮಾಡಿದ್ದಾರೆ.

ನಿರ್ಮಾಪಕರ ಆರೋಪವೇನು?:ನಿನ್ನೆಯಷ್ಟೇಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ್ದ ನಿರ್ಮಾಪಕ ಎನ್​ ಎಂ ಕುಮಾರ್, ನಟ ಕಿಚ್ಚ ಸುದೀಪ್​ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನನ್ನ ಜೊತೆ ಸಿನಿಮಾ ಮಾಡ್ತೇನಿ ಎಂದು ಸುದೀಪ್​ ಮುಂಗಡ ಹಣ ಪಡೆದು ಬಳಿಕ ಯಾವುದೇ ಪ್ರತಿಕ್ರಿಯೆ ನೀಡ್ತಿಲ್ಲ ಎಂದು ದೂರಿದ್ದರು.

ಇದನ್ನೂ ಓದಿ:Sudeep 46: 'ನಾನು ಮನುಷ್ಯ ಅಲ್ಲ ರಾಕ್ಷಸ' - ಕಿಚ್ಚ ಸುದೀಪ್‌ ಹೊಸ ಸಿನಿಮಾದ ಟೀಸರ್ ರಿಲೀಸ್‌, ರಗಡ್ ಲುಕ್‌ನಲ್ಲಿ ಅಬ್ಬರ!

"ಸುದೀಪ್ ಫಿಲ್ಮ್ ಚೇಂಬರ್​ಗೆ ಬಂದು ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳಲಿ. ನಾನು ಬುಧವಾರದವರೆಗೂ ಕಾಯುತ್ತೇನೆ. ಫಿಲ್ಮ್ ಚೇಂಬರ್ ಹಾಗೂ ನಿರ್ಮಾಪಕ ಸಂಘದಲ್ಲಿ ಏನು‌ ತೀರ್ಮಾನ ಮಾಡ್ತಾರೆ ಅಂತ ನೋಡುತ್ತೇನೆ. ಆಮೇಲೆಯೂ ನನಗೆ ನ್ಯಾಯ ಸಿಗದೇ ಹೋದ್ರೆ ಸುದೀಪ್​ ಮನೆ ಮುಂದೆ ಧರಿಣಿ ಕೂರ್ತಿನಿ" ಎಂದು ಎನ್​ ಎಂ ಕುಮಾರ್​ ಹೇಳಿದ್ದರು.

ಇದನ್ನೂ ಓದಿ:'ಕಿಚ್ಚ 46' ಬಗ್ಗೆ ಸಿಕ್ತು ಬಿಗ್​ ಅಪ್​ಡೇಟ್​.. ಸುದೀಪ್​ ಮುಂದಿನ ಸಿನಿಮಾದ ಟೀಸರ್​ಗೆ ಮುಹೂರ್ತ ಫಿಕ್ಸ್​!

ಕಿಚ್ಚ 46..ಸುದೀಪ್ ಅವರು​ ಮೂರು ಚಿತ್ರಗಳಿಗೆ ಈಗಾಗಲೇ ಗ್ರೀನ್​​​ ಸಿಗ್ನಲ್​ ಕೊಟ್ಟಿದ್ದಾರೆ. ಅದರಲ್ಲಿ ವಿ ಕ್ರಿಯೇಷನ್ಸ್‌ನ ಕಲೈಪುಲಿ ಎಸ್​. ತನು ನಿರ್ಮಾಣದ ಸಿನಿಮಾ ಸೆಟ್ಟೇರಿದೆ. ಎರಡು ದಿನಗಳ ಹಿಂದೆಯಷ್ಟೇ ಟೀಸರ್ ಬಿಡುಗಡೆಯಾಗಿದ್ದು, ಕಿಚ್ಚ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 'ನಾನು ಮನುಷ್ಯ ಅಲ್ಲ, ರಾಕ್ಷಸ' ಎಂಬ ಡೈಲಾಗ್​ ಗಮನ ಸೆಳೆಯುತ್ತಿದೆ. ಸಿನಿಮಾಗೆ K46 Demon War Begins ಎಂದು ಸದ್ಯಕ್ಕೆ ಟೈಟಲ್​ ಇಡಲಾಗಿದೆ.

Last Updated : Jul 4, 2023, 6:11 PM IST

ABOUT THE AUTHOR

...view details