ಕರ್ನಾಟಕ

karnataka

ಜ್ವರದ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ ನಟ ಶಿವರಾಜ್ ಕುಮಾರ್

By ETV Bharat Karnataka Team

Published : Nov 3, 2023, 11:03 PM IST

ತೀವ್ರ ಜ್ವರ ಹಿನ್ನೆಲೆ ನಟ ಶಿವರಾಜ್ ಕುಮಾರ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

Etv Bharatactor-shivraj-kumar-went-home-after-receiving-treatment-at-the-hospital-due-to-fever
ಜ್ವರ ಹಿನ್ನಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ ನಟ ಶಿವರಾಜ್ ಕುಮಾರ್

ನಟ ಶಿವರಾಜ್ ಕುಮಾರ್ ಅವರು ತೀವ್ರ ಜ್ವರದ ಹಿನ್ನೆಲೆ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದರು. ಘೋಸ್ಟ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದ ಕಾರಣ ಶಿವರಾಜ್ ಕುಮಾರ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ಜಾಸ್ತಿ ಆದ ಕಾರಣ‌ ಶಿವರಾಜ್ ಕುಮಾರ್ ಇಂದು ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆಯ ನಂತರ ಆರೋಗ್ಯದಲ್ಲಿ ಚೇತರಿಸಿಕೊಂಡ ಶಿವಣ್ಣ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

ವೈದೇಹಿ ಆಸ್ಪತ್ರೆಯ ವೈದ್ಯರು ನೀಡಿದ ಮಾಹಿತಿಯ ಪ್ರಕಾರ, ಓಡಾಟ ಹಾಗೂ ಬಿಡುವಿಲ್ಲದ ಶೂಟಿಂಗ್ ನಿಂದಾಗಿ ಶಿವರಾಜ್ ಕುಮಾರ್ ಅವರಿಗ ಜ್ವರ ಬಂದಿತ್ತು. ಅತಿಯಾದ ಜ್ವರ ಹೆಚ್ಚಾದ ಕಾರಣ ಮಧ್ಯಾಹ್ನ ಆಸ್ಪತ್ರೆಗೆ ಬಂದು‌ ದಾಖಲಾಗಿದ್ದರು. ಬಳಿಕ ಚಿಕಿತ್ಸೆ ಪಡೆದ ನಂತರ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಿ‌‌ ಕೊಡಲಾಗಿದೆ. ಅವರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಸದ್ಯ ಆಸ್ಪತ್ರೆಯಿಂದ‌ ಮನೆಗೆ ತೆರಳಿರುವ ಶಿವರಾಜ್ ಕುಮಾರ್ ಅವರಿಗೆ ಮೂರ್ನಾಲ್ಕು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

ಘೋಸ್ಟ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಶಿವರಾಜ್ ಕುಮಾರ್, ಭೈರತಿ ರಣಗಲ್ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ‌. ‌ಮಫ್ತಿ‌ ಚಿತ್ರದ ಬಳಿಕ ನಿರ್ದೇಶಕ ನರ್ತನ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ:ಬಿಗ್​ ಬಾಸ್​ ಕ್ಯಾಪ್ಟನ್​ ಸ್ಥಾನಕ್ಕೆ ವಿನಯ್: 'ಆನೆ'ಗೆ ಹೆದರಲ್ಲವೆಂದ ಸಂಗೀತಾ!

ABOUT THE AUTHOR

...view details