ಕರ್ನಾಟಕ

karnataka

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ 2ನೇ ಟ್ರ್ಯಾಕ್ 'ವಾಟ್ ಜುಮ್ಕಾ' ರಿಲೀಸ್​; ಏನ್​ ಅಂತಿದ್ದಾರೆ ಪ್ರೇಕ್ಷಕರು?

By

Published : Jul 12, 2023, 10:00 PM IST

ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ ಎರಡನೇ ಹಾಡನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ

ಮುಂಬೈ :ಜುಲೈ 28 ರಂದು ಚಿತ್ರಮಂದಿರಗಳಲ್ಲಿತೆರೆ ಕಾಣಲು ತಯಾರಿ ನಡೆಸಿರುವ ಬಾಲಿವುಡ್​ನ​ ಸಖತ್​ ರೋಮ್ಯಾಂಟಿಕ್ ಹಾಗೂ ಹಾಸ್ಯ ಭರಿತ ಚಿತ್ರವಾದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಯ 'ವಾಟ್ ಜುಮ್ಕಾ' ಎಂಬ ಎರಡನೇ ಹಾಡನ್ನು ನಿರ್ಮಾಪಕರು ಬುಧವಾರ ಅನಾವರಣಗೊಳಿಸಿ ದ್ದಾರೆ. ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಚಿತ್ರ ಇದಾಗಿದ್ದು, ಮುಖ್ಯ ಭೂಮಿಕೆಯಲ್ಲಿ ನಟ ರಣವೀರ್ ಸಿಂಗ್ ಮತ್ತು ಬಹುಬೇಡಿಕೆ ನಟಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ.

ವಾಟ್​ ಜುಮ್ಕಾ ಹಾಡಿಗೆ ಅರಿಜಿತ್ ಸಿಂಗ್ ಮತ್ತು ಜೋನಿತಾ ಗಾಂಧಿ ಧ್ವನಿಗೂಡಿಸಿದ್ದು, ಸಾಹಿತ್ಯವನ್ನು ಅಮಿತಾಬ್ ಭಟ್ಟಾಚಾರ್ಯ ಬರೆದಿದ್ದಾರೆ. ಕರಣ್​ ಜೋಹರ್​ ಹಾಡನ್ನು ಅನಾವರಣಗೊಳಿಸಿದ ನಂತರ, ಅಭಿಮಾನಿಗಳು ಫುಲ್​ ಖುಷ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಅಭಿಪ್ರಾಯಗಳು ಸಂಗ್ರಹವಾಗುತ್ತಿವೆ. ಹಾಡಿಗೆ ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳು ರೆಡ್​ ಹಾರ್ಟ್​ ಮತ್ತು ಫೈರ್ ಎಮೋಜಿಗಳನ್ನು ತುಂಬುತ್ತಿದ್ದಾರೆ.

ಇಷ್ಟೆಲ್ಲ ಪ್ರತಿಕ್ರಿಯೆ ಮಧ್ಯೆ ಕೆಲವರು ರಣಬೀರ್ ಕಪೂರ್ ಅವರ ಚಿತ್ರವೊಂದರ 'ತೂ ಜೂತಿ ಮೈನ್ ಮಕ್ಕರ್ ಸಾಂಗ್ ಶೋ ಮೀ ದಿ ತುಮ್ಕಾ' ಹಾಡಿನಲ್ಲಿ ಡ್ಯಾನ್ಸ್ ಮಾಡಿರುವಂತೆ ರಣವೀರ್ ಕೂಡ ಮಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆಲಿಯಾ ಭಟ್ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನೊಬ್ಬ ರಣಬೀರ್ ಕಾ ತುಮ್ಕಾ, ಅಲಿಯಾ ಕಾ ಜುಮ್ಕಾ. ಎಂದು ಕಾಮೆಂಟ್​ ಬರೆದಿದ್ದಾರೆ. ಇಬ್ಬರು ನಟರ ಡ್ಯಾನ್​ ನೋಡಿ ಮತ್ತೊಬ್ಬ ಅಭಿಮಾನಿ "ರಣಬೀರ್ ಡ್ಯಾನ್ಸ್ ತುಮ್ಕಾ ರಣವೀರ್ ಜುಮ್ಕಾದಲ್ಲಿ ಡ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಹೀಗೆ ಅನೇಕರು ರಣವೀರ್ ಸಿಂಗ್ ಅವರ ಡ್ಯಾನ್ಸ್​ ಮೂಮೆಂಟ್​ಗಳನ್ನು ರಣಬೀರ್ ಕಪೂರ್ ಅವರೊಂದಿಗೆ ಹೋಲಿಸಿ ಟ್ರೋಲ್​ ಮಾಡುತ್ತಿದ್ದಾರೆ.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಟ್ರೇಲರ್ ಜುಲೈ 4 ರಂದು ಬಿಡುಗಡೆಯಾಯಿತು. ರಣ್​ವೀರ್​, ಆಲಿಯಾ ಹೊರತಾಗಿ, ಹಿರಿಯ ಕಲಾವಿದರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಅವರು ಈ ಚಲನಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಹು ತಾರಾಗಣ ಹೊಂದಿರುವ ಬಿಗ್​ ಬಜೆಟ್​ ಸಿನಿಮಾ ಜುಲೈ 28 ರಂದು ಬಿಡುಗಡೆ ಆಗಲಿದೆ.

ಇನ್ನು ಚಿತ್ರ ನಿರ್ದೇಶಕ ಕರಣ್ ಜೋಹರ್ ಅವರು ಕಥೆ ಹೇಳುವ ಶೈಲಿ, ಬಿಗ್​ ಸ್ಟಾರ್ ಕಾಸ್ಟ್, ಅದ್ಧೂರಿ ಸೆಟ್‌, ಭಾವಪೂರ್ಣ ಸಂಗೀತದೊಂದಿಗೆ ಬರಲಿರುವ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾದಂತೆ ತೋರುತ್ತಿದೆ. ಸದ್ಯ ಅನಾವರಣಗೊಂಡಿರುವ ಟ್ರೇಲರ್​, ಟೀಸರ್​, 2 ಹಾಡುಗಳಲ್ಲಿ ಚಿತ್ರದ ಪ್ರಮುಖ ನಟರಾದ ರಣ್​​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಜೋಡಿಯ ಜಗಳ, ಪ್ರೇಮ, ಹಬ್ಬದ ವಾತಾವರಣ ಮತ್ತು ಮದುವೆಯ ಸಮಯದಲ್ಲಿ ಕುಟುಂಬದ ಆಚರಣೆಗಳುಳ್ಳ ಹಲವಾರು ದೃಶ್ಯಗಳಿವೆ. ಕರಣ್ ಜೋಹರ್ 6 ವರ್ಷಗಳ ಬಳಿಕ ಸಿನಿಮಾವೊಂದನ್ನು ನಿರ್ದೇಶಿಸಿದ್ದು, ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಇದನ್ನೂ ಓದಿ :Alia Bhatt: 'ತುಮ್​ ಕ್ಯಾ ಮಿಲೇ' ಹಾಡಿನ ಚಿತ್ರೀಕರಣದ ವಿಡಿಯೋ ಹಂಚಿಕೊಂಡ ಆಲಿಯಾ ಭಟ್​

ABOUT THE AUTHOR

...view details