ಕರ್ನಾಟಕ

karnataka

ಚಿಕ್ಕಬಳ್ಳಾಪುರ: ಶಾಸಕರ ದಿನಸಿ ಕಿಟ್ ವಿತರಣೆ ವೇಳೆ ನೂಕುನುಗ್ಗಲಿಗೆ ಮಹಿಳೆ ಬಲಿ

By

Published : Oct 26, 2021, 5:42 PM IST

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಅವರು ಕ್ಷೇತ್ರದ ಜನರಿಗೆ ದಿನಸಿ ಕಿಟ್ ವಿತರಣೆ ವೇಳೆ ನೂಕು ನುಗ್ಗಲು ಉಂಟಾದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

lady death in gudibande taluku while receiving food kit
ಚಿಕ್ಕಬಳ್ಳಾಪುರ: ಶಾಸಕರ ದಿನಸಿ ಕಿಟ್ ವಿತರಣೆ ವೇಳೆ ಮಹಿಳೆ ಸಾವು

ಗುಡಿಬಂಡೆ(ಚಿಕ್ಕಬಳ್ಳಾಪುರ): ದಿನಸಿ ಕಿಟ್ ವಿತರಣೆಯ ವೇಳೆ ನಡೆದ ನೂಕು ನುಗ್ಗಲು ವೇಳೆ ಮಹಿಳೆಯೊರ್ವರು ಮೃತಪಟ್ಟಿರುವ ಘಟನೆ ತಾಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು 50 ವರ್ಷದ ಸಂಪಗಮ್ಮ ಎಂದು ಗುರುತಿಸಲಾಗಿದೆ.

ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಅವರು ಕ್ಷೇತ್ರದ ಜನರಿಗೆ ದಿನಸಿ ಕಿಟ್‌ ನೀಡುವ ಕಾರ್ಮಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ, ಜನರು ನಾ ಮುಂದು ತಾ ಮುಂದೆ ಎಂದು ಒಟ್ಟಾಗಿ ಸೇರಿದಾಗ ಉಂಟಾದ ನೂಕು ನುಗ್ಗಲಿನಿಂದ ದುರಂತ ಸಂಭವಿಸಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ABOUT THE AUTHOR

...view details