ಕರ್ನಾಟಕ

karnataka

ಕುಡಿಯಲು ಹಣ ನೀಡಿಲ್ಲ ಎಂದು ಮನೆಗೇ ಬೆಂಕಿ : ಆರೋಪಿಗೆ 3 ವರ್ಷ ಜೈಲು, ₹16,500 ದಂಡ

By

Published : Feb 17, 2021, 7:16 PM IST

ಹರಪನಹಳ್ಳಿ ನಂದ್ಯಾಳ ಗ್ರಾಮದ ಅಲಗಿಲವಾಡು ನಾಗರಾಜಪ್ಪ ಎಂಬ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ನ್ಯಾಯಾಧೀಶರಾದ ಕೆ ಎಂ ರಾಜಶೇಖರ್ ಅವರು ವಿಚಾರಣೆ ನಡೆಸಿ, ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ..

house-fire-attuck-accused-get-3-years-jail-fine
ಕುಡಿಯಲು ಹಣ ನೀಡಿಲ್ಲ ಎಂದು ಮನೆಗೆ ಬೆಂಕಿ: ಆರೋಪಿಗೆ 3 ವರ್ಷ ಜೈಲು

ಹೊಸಪೇಟೆ :ಮದ್ಯಪಾನ ಮಾಡಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಮನೆಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಆರೋಪಿಗೆ ನಗರದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ಹಾಗೂ ₹16,500 ದಂಡ ವಿಧಿಸಿದೆ.

ಕುಡಿಯಲು ಹಣ ನೀಡಿಲ್ಲ ಎಂದು ಮನೆಗೆ ಬೆಂಕಿ : ಆರೋಪಿಗೆ 3 ವರ್ಷ ಜೈಲು

ಓದಿ: ಯಾರೂ ಕೂಡ ಕಾಂಗ್ರೆಸ್​​​ನಿಂದ ಬಿಜೆಪಿಗೆ ಹೋಗುವವರಿಲ್ಲ: ಖಂಡ್ರೆ

ಹರಪನಹಳ್ಳಿ ನಂದ್ಯಾಳ ಗ್ರಾಮದ ಅಲಗಿಲವಾಡು ನಾಗರಾಜಪ್ಪ ಎಂಬ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ನ್ಯಾಯಾಧೀಶರಾದ ಕೆ ಎಂ ರಾಜಶೇಖರ್ ಅವರು ವಿಚಾರಣೆ ನಡೆಸಿ, ಮೂರು ವರ್ಷ ಜೈಲು ಶಿಕ್ಷೆ ಹಾಗೂ 16,500 ರೂ. ದಂಡ ವಿಧಿಸಿದ್ದಾರೆ.

ಅಲ್ಲದೇ, ಘಟನೆಯಲ್ಲಿ ನೊಂದ ಶೀಲಮ್ಮ ಎಂಬುವರಿಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಅಭಿಯೋಜಕರಾದ ಟಿ.ಅಂಬಣ್ಣ ಅವರು ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಹಿನ್ನೆಲೆ :2019 ಜೂನ್ 20ರಂದು ಆರೋಪಿ ನಾಗರಾಜಪ್ಪ, ಶಾರದಮ್ಮ ಅವರಿಗೆ ಮದ್ಯಪಾನ ಮಾಡಲು ಹಣ ಕೇಳಿದ್ದಾರೆ. ಆಗ ಶಾರದಮ್ಮ ಹಣ ನೀಡದ ಕಾರಣ ಕಪಾಳಕ್ಕೆ ಹೊಡಿದಿದ್ದಾನೆ. ಬಿಡಿಸಲು ಬಂದ ಶೀಲಮ್ಮ‌ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ನಾಗರಾಜಪ್ಪ ಸಾಯಿಸುವ ಉದ್ದೇಶದಿಂದ ಜೂನ್ 21ರಂದು ಶಾರದಮ್ಮ ಮತ್ತು ಶೀಲಮ್ಮ ಅವರ ಮನೆಗೆ ಬೆಂಕಿ ಹಚ್ಚಿದ್ದಾನೆ. ಈ ಸಂದರ್ಭದಲ್ಲಿ ಮನೆ ಗೋಡೆ ಹಾಗೂ ದವಸ ಧಾನ್ಯಗಳು ಸುಟ್ಟು ಹೋಗಿವೆ. ಈ ಕುರಿತು ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ABOUT THE AUTHOR

...view details