ಕರ್ನಾಟಕ

karnataka

ಪತ್ನಿ ಸಾವಿನ ಸುದ್ದಿ ತಿಳಿದು ಪತಿಯೂ ಆತ್ಮಹತ್ಯೆ; ಸಾವಲ್ಲೂ ಒಂದಾದ ನವದಂಪತಿ

By

Published : Nov 21, 2021, 4:09 AM IST

Updated : Nov 21, 2021, 8:30 AM IST

ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ನಿಯ ಸಾವಿನ ಸುದ್ದಿ ತಿಳಿದು ಪತಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ನಡೆದಿದೆ.

family strife: Couple suicide in Tumkur district
ತುಮಕೂರು: ಪತ್ನಿ ಸಾವಿನ ಸುದ್ದಿ ತಿಳಿದು ಪತಿಯೂ ಆತ್ಮಹತ್ಯೆ; ಸಾವಲ್ಲೂ ಒಂದಾದ ನವ ದಂಪತಿ

ಕುಣಿಗಲ್‌(ತುಮಕೂರು): ಕೌಟುಂಬಿಕ ಕಲಹಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಪತಿಯೂ ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ಕುಣಿಗಲ್ ತಾಲೂಕಿನ ಕೆಂಪಸಾಗರ ಗ್ರಾಮದಲ್ಲಿ ನಡೆದಿದೆ.

ಕೆಂಪಸಾಗರದ ಮುನಿರಾಜು(26), ಪತ್ನಿ ವರಲಕ್ಷ್ಮಿ(22) ಸಾವಿಗೆ ಶರಣಾದ ನವ ದಂಪತಿ. ಮೃತ ಮುನಿರಾಜು ತಮ್ಮ ಹತ್ತಿರದ ಸಂಬಂಧಿ, ಅದೇ ಗ್ರಾಮದ ವರಲಕ್ಷ್ಮಿ ಅವರನ್ನು 4 ತಿಂಗಳ ಹಿಂದೆ ಮದುವೆಯಾಗಿದ್ದರು. ಶನಿವಾರ ಬೆಳಗ್ಗೆ ಪತ್ನಿ ವರಲಕ್ಷ್ಮೀ ತಾಯಿ ಮನೆಗೆ ಹೋಗಿದ್ದರು. ತಿಂಡಿ ಮಾಡಿಕೊಡಲು ಮನೆಗೆ ಬಾ ಎಂದು ಮುನಿರಾಜು ಪತ್ನಿಯನ್ನು ಕರೆದು ಬಂದಿದ್ದಾರೆ ಎನ್ನಲಾಗಿದೆ.

ನಂತರ ಕುಣಿಗಲ್‍ನಲ್ಲಿ ಇರುವ ತಮ್ಮ ಚಿಲ್ಲರೆ ಅಂಗಡಿಯನ್ನು ತೆರೆಯು ಮುನಿರಾಜು ಬಂದಿದ್ದಾರೆ. ಇದೇ ಸಮಯದಲ್ಲಿ ಮೃತನ ತಂದೆ- ತಾಯಿ ಜಮೀನು ಕೆಲಸಕ್ಕಾಗಿ ಹೊರಗೆ ಹೋಗಿದ್ದಾರೆ. ಈ ವೇಳೆಗೆ ಮನೆಗೆ ಬಂದ ವರಲಕ್ಷ್ಮಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ಮೃತಳ ಪೋಷಕರು ಮಧ್ಯಾಹ್ನ ಮನೆಗೆ ಬಂದಾಗ ನೇಣು ಹಾಕಿಕೊಂಡಿರುವ ವಿಷಯ ತಿಳಿದಿದೆ.

ಗ್ರಾಮಸ್ಥರು ಕೂಡಲೇ ವಿಷಯವನ್ನು ಮುನಿರಾಜುಗೆ ತಿಳಿಸಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಆತ ಕುಣಿಗಲ್‍ನಲ್ಲೇ ವಿಷ ಕುಡಿದು ಕೆಂಪಸಾಗರದ ತೋಟಕ್ಕೆ ತೆರಳಿ ಅಲ್ಲಿ ಮರಕ್ಕೆ ನೇಣು ಬಿಗಿದುಕೊಂದು ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Nov 21, 2021, 8:30 AM IST

ABOUT THE AUTHOR

...view details