ಕರ್ನಾಟಕ

karnataka

ದಾರುಣವಾಗಿ ಸಾವನ್ನಪ್ಪಿದ ಅಕ್ಕ- ತಂಗಿ: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

By

Published : Nov 19, 2021, 2:12 PM IST

ಮನೆ‌ ಬಳಿಯಿದ್ದ ನೀರಿನ ಕಟ್ಟೆಗೆ ಕಾಲು ಜಾರಿ ಬಿದ್ದು ಅಕ್ಕ - ತಂಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಬಳಿಯ ವರಣಸಂದ್ರದಲ್ಲಿ ನಡೆದಿದೆ.

Two children drowned in a water tank
ನೀರಿನ ಕಟ್ಟೆಗೆ ಕಾಲು ಜಾರಿ ಬಿದ್ದು ಅಕ್ಕ-ತಂಗಿ ಸಾವು

ತುಮಕೂರು: ಅಕ್ಕ- ತಂಗಿಯರು ದಾರುಣವಾಗಿ ಸಾವನ್ನಪ್ಪಿರುವ ಇರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಬಳಿಯ ವರಣಸಂದ್ರದಲ್ಲಿ ನಡೆದಿದೆ. ಕವನ (7), ಯೋಕ್ಷಿತಾ (3) ಮೃತ ಅಕ್ಕ- ತಂಗಿಯರಾಗಿದ್ದಾರೆ.

ತಾಯಿ ಮಂಜುಳಾ ನಿನ್ನೆ ನೀರಿನ ಕಟ್ಟೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಕವನ, ಯೋಕ್ಷಿತಾ ಆಟವಾಡಲು ಹೋಗಿ ಕಾಲು ಜಾರಿ ಬಿದ್ದಿದ್ದಾರೆ. ಮಕ್ಕಳನ್ನ ಕಾಪಾಡಲು ತಾಯಿ ಸಹ ನೀರಿನ ಕಟ್ಟೆಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಮಂಜುಳಾನನ್ನು ಬಚಾವ್ ಮಾಡಿದ್ದಾರೆ.

ನೀರಿನ ಕಟ್ಟೆಗೆ ಕಾಲು ಜಾರಿ ಬಿದ್ದು ಅಕ್ಕ-ತಂಗಿ ಸಾವು

ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಈ ಕುರಿತು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಏಷ್ಯಾದ ಮೊದಲ ಮಹಿಳಾ ಟ್ರಕ್ ಡ್ರೈವರ್ ಇನ್ನಿಲ್ಲ.. ರಾಷ್ಟ್ರಪತಿ ಪ್ರಶಸ್ತಿ ವಿಜೇತೆ ಪಾರ್ವತಿ ಆರ್ಯ ನಿಧನ

ABOUT THE AUTHOR

...view details