ಕರ್ನಾಟಕ

karnataka

ತುಮಕೂರಿನ ಚಿಕ್ಕನಾಯಕನಹಳ್ಳಿ ಗರಡಿಮನೆಗೆ ಬೇಕಿದೆ ಕಾಯಕಲ್ಪ

By

Published : Oct 22, 2021, 9:34 AM IST

Updated : Oct 23, 2021, 7:02 AM IST

ಇತ್ತೀಚಿನ ದಿನಗಳಲ್ಲಿ ಬದಲಾದ ಆಧುನಿಕತೆಗೆ ಯುವಕರು ಮಾರು ಹೋಗಿದ್ದಾರೆ. ಈ ಕಾರಣಕ್ಕೆ ಗರಡಿಮನೆಯತ್ತ ಯುವಕರು ಬರುತ್ತಿಲ್ಲ. ಇದಕ್ಕೆ ಮೂಲ ಕಾರಣ ಗರಡಿಮನೆಯಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಗರಡಿಮನೆಯನ್ನು ಪುನಶ್ಚೇತನಗೊಳಿಸುವ ಕಾರ್ಯ ಆಗಬೇಕಿದೆ.

chikkanayakanahalli garadi mane needs basic facilities
ಚಿಕ್ಕನಾಯಕನಹಳ್ಳಿ ಗರಡಿಮನೆಗೆ ಬೇಕಿದೆ ಕಾಯಕಲ್ಪ

ತುಮಕೂರು: ರಾಜ ಮಹಾರಾಜರ ಆಳ್ವಿಕೆ ವೇಳೆ ದೇಹ ದಂಡಿಸಲು, ಕಸರತ್ತು ಮಾಡಲು, ಉತ್ತಮ ಮೈಕಟ್ಟು ಹೊಂದಲು ಗರಡಿ ಮನೆಗಳು ಮೂಲವಾಗಿದ್ದವು. ಆದ್ರೆ ಕಾಲ ಬದಲಾದಂತೆ ಹೆಚ್ಚಿನ ಕ್ಷೇತ್ರಗಳು ಬದಲಾಗಿವೆ. ಜಿಮ್​ಗಳು ತಲೆ ಎತ್ತಿವೆ. ಯುವಪೀಳಿಗೆ ಇದಕ್ಕೆ ಮಾರುಹೋಗಿದೆ. ಬೆರಳೆಣಿಕೆಯಷ್ಟು ಜೀವಂತವಾಗಿರುವ ಗರಡಿ ಮನೆಗಳು ಅವಸಾನದ ಅಂಚು ತಲುಪಿವೆ.

ಚಿಕ್ಕನಾಯಕನಹಳ್ಳಿ ಗರಡಿಮನೆಗೆ ಬೇಕಿದೆ ಕಾಯಕಲ್ಪ

1942ರಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಪ್ರಾರಂಭವಾದ ಗರಡಿ ಮನೆ, ಒಂದು ಕಾಲದಲ್ಲಿ ಯುವಕರ ಅಚ್ಚುಮೆಚ್ಚಿನ ಅಭ್ಯಾಸ ಸ್ಥಳವಾಗಿತ್ತು. ಇದು ಚಿಕ್ಕನಾಯಕನಹಳ್ಳಿ ತಾಲೂಕಿನ ಏಕೈಕ ಗರಡಿ ಮನೆ. ಈ ಗರಡಿ ಮನೆಯಲ್ಲಿ ಅದೆಷ್ಟೋ ಪೈಲ್ವಾನರು ಪಳಗಿದ್ದಾರೆ.

ಈ ಗರಡಿಮನೆಯ ಸದಸ್ಯರುಗಳು ಸೇರಿಕೊಂಡು ತಾಲೂಕಿನ ಪ್ರತಿಷ್ಠಿತ ಜಾತ್ರೆಗಳಲ್ಲಿ ಒಂದಾದ ಏಕಾದಶಿ ಹಳೆಯೂರು ಆಂಜನೇಯ ಸ್ವಾಮಿಯ ಜಾತ್ರೆಯಂದು ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಿತ್ತಾ ಬಂದಿದ್ದು, ಇಡೀ ಕರ್ನಾಟಕಕ್ಕೆ ಈ ಗರಡಿಮನೆ ಹೆಸರುವಾಸಿಯಾಗಿದೆ. ಆದರೆ ಇಂದು ಮೂಲಸೌಕರ್ಯವಿಲ್ಲದೇ ಸೊರಗಿ ಹೋಗಿದ್ದು, ಬಹುತೇಕ ಯುವಕರು ಈ ಗರಡಿಮನೆಯಲ್ಲಿ ತಾಲೀಮು ನಡೆಸಲು ಮನಸ್ಸು ಮಾಡದಂತಾಗಿದೆ.

ಇದನ್ನೂ ಓದಿ:ಇಮ್ಮಡಿಗೊಂಡ ಪ್ರವಾಸಿಗರ ಸ್ವರ್ಗ ಕಾವೇರಿ ನಿಸರ್ಗಧಾಮದ ಸೊಬಗು

79 ವರ್ಷಗಳ ಹಳೆಯದಾಗಿರುವ ಗರಡಿ ಮನೆಯ ಗೋಡೆಗಳು ಶಿಥಿಲಗೊಂಡಿವೆ. ಯುವಕರ ಅಭ್ಯಾಸಕ್ಕೆ ಪೂರಕ ಸೌಲಭ್ಯ, ಉತ್ತಮ ವಾತಾವರಣ ಇಲ್ಲವಾಗಿದೆ. ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ತಾಲೂಕಿನ ಏಕೈಕ ಗರಡಿ ಮನೆ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗರಡಿಮನೆಗೆ ಅನುದಾನ ನೀಡಿ ಪುನಶ್ಚೇತನಗೊಳಿಸಬೇಕು ಎಂಬುದು ಹಿರಿಯ ಪೈಲ್ವಾನರ ಹಾಗೂ ಸಾರ್ವಜನಿಕರ ಆಗ್ರಹ.

Last Updated : Oct 23, 2021, 7:02 AM IST

ABOUT THE AUTHOR

...view details