ಕರ್ನಾಟಕ

karnataka

3 ವರ್ಷಗಳ ಹಿಂದೆ RTE ಯೋಜನೆಯಡಿ ಇದ್ದ 251 ಶಾಲೆಗಳ ಸಂಖ್ಯೆ 5ಕ್ಕೆ ಇಳಿಕೆ

By

Published : Jul 30, 2021, 5:52 PM IST

ಸರ್ಕಾರಿ ಶಾಲೆಗಿಂತಲೂ ಖಾಸಗಿ ಶಾಲೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ಆಸೆ ಹೊಂದಿದ್ದ ಬಡ ಮಕ್ಕಳು ಆರ್​​ಟಿಇ ಯೋಜನೆಯಡಿಯಲ್ಲಿ ನಿಯಮಾವಳಿಗಳಿಂದ ವಂಚಿತರಾಗುವಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಸರ್ಕಾರ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಹಾಗೂ ಪೂರಕ ವಾತಾವರಣ ನಿರ್ಮಿಸುತ್ತಿರುವ ಬಗ್ಗೆ ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಿದೆ..

Tumakur
ತುಮಕೂರು

ತುಮಕೂರು :ಜಿಲ್ಲೆಯಲ್ಲಿ ಕಳೆದ 3 ವರ್ಷಗಳ ಹಿಂದೆ ಆರ್​ಟಿಇ (ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009) ಅಡಿ ದಾಖಲಾತಿ ಪ್ರಕ್ರಿಯೆಯಲ್ಲಿ 251ಕ್ಕೂ ಹೆಚ್ಚು ಶಾಲೆಗಳಿದ್ದವು. ಆದರೆ, ಅಂತಹ ಶಾಲೆಗಳ ಸಂಖ್ಯೆ ಕಂಡು ಕೇಳರಿಯದಷ್ಟು ಕ್ಷೀಣಿಸಿದೆ.

ಜಿಲ್ಲೆಯಲ್ಲಿ ಕೇವಲ 5 ಶಾಲೆಗಳು ಮಾತ್ರ ಆರ್​​ಟಿಇ ದಾಖಲಾತಿ ಪ್ರಕ್ರಿಯೆಗೆ ಒಳಗೊಂಡಿವೆ. ಆರ್​​ಟಿಇ ದಾಖಲಾತಿ ಅನ್ವಯ ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವಂತಹ ವ್ಯವಸ್ಥೆ ಜಾರಿಗೆ ಬಂದಿತ್ತು. ಆದರೆ, ನಿಯಮಾವಳಿಯಲ್ಲಿ ಖಾಸಗಿ ಶಾಲೆಗಳು ಇರುವಂತಹ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದವು.

RTE ಯೋಜನೆಯಡಿ ಇದ್ದ 251 ಶಾಲೆಗಳ ಸಂಖ್ಯೆ 5ಕ್ಕೆ ಇಳಿಕೆ..

ಹೀಗಾಗಿ, ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆ ಎರಡು ಕಡೆ ಉಚಿತವಾಗಿ ನೀಡುವುದು ಸಾಮಾನ್ಯವಾಗಿತ್ತು. ಆದರೆ, ಸರ್ಕಾರಿ ಶಾಲೆ ಇರುವಂತಹ ಪ್ರದೇಶದಲ್ಲಿ ಆರ್​​ಟಿಇ ಯೋಜನೆಯಡಿ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ಶಿಕ್ಷಣ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ತಜ್ಞರ ಅಭಿಪ್ರಾಯವಾಗಿತ್ತು.

ಹೀಗಾಗಿ, ಕಳೆದ 3 ವರ್ಷಗಳಿಂದ ಜನವಸತಿ ಸರ್ಕಾರಿ ಶಾಲೆ ಇಲ್ಲದಂತಹ ಪ್ರದೇಶದಲ್ಲಿ ಇರುವ ಖಾಸಗಿ ಶಾಲೆಗಳಿಗೆ ಮಾತ್ರ ಆರ್​​ಟಿಇ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಇದರಿಂದಾಗಿ ಆರ್​​ಟಿಇ ಯೋಜನೆಯಡಿ ಇದ್ದಂತಹ 251 ಖಾಸಗಿ ಶಾಲೆಗಳ ಪೈಕಿ ಪ್ರಸ್ತುತ ಕೇವಲ 5 ಶಾಲೆಗಳು ಮಾತ್ರ ಇರುವುದನ್ನು ಸರ್ಕಾರ ಪತ್ತೆಹಚ್ಚಿದ್ದು, ಪ್ರದೇಶಕ್ಕೆ ಮಾತ್ರ ಆರ್‌ಟಿಇ ಯೋಜನೆಯಡಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ.

ಇನ್ನೊಂದೆಡೆ ಈ ಹಿಂದೆ ಸರ್ಕಾರದಿಂದ ಶೇ.25ರಷ್ಟು ಮಕ್ಕಳಿಗೆ ಆರ್​​ಟಿಇ ಯೋಜನೆಯಡಿ ನೀಡಲಾಗುತ್ತಿದ್ದ ಶುಲ್ಕವನ್ನು ಪಡೆದುಕೊಳ್ಳುವುದು ಕೂಡ ಖಾಸಗಿ ಶಾಲಾ ಸಂಸ್ಥೆಯ ಮಾಲೀಕರಿಗೆ ಹರ ಸಾಹಸದ ಕೆಲಸವಾಗಿತ್ತು. ವರ್ಷಾನುಗಟ್ಟಲೇ ಆದರೂ ಸರ್ಕಾರದಿಂದ ಯೋಜನೆಯಡಿ ಹಣ ಪಡೆಯುವುದು ಅಸಾಧ್ಯವಾಗಿತ್ತು. ಆರ್​​ಟಿಇ ಯೋಜನೆಯ ಶಿಕ್ಷಣ ವ್ಯವಸ್ಥೆಯಿಂದ ಖಾಸಗಿ ಶಾಲೆಗಳನ್ನು ಮುಕ್ತಗೊಳಸಿರುವುದರಿಂದ ಕೂಡ ಖಾಸಗಿ ಶಾಲಾ ಮಾಲೀಕರು ನಿಟ್ಟಿಸಿರು ಬಿಟ್ಟಿದ್ದಾರೆ.

ಸರ್ಕಾರಿ ಶಾಲೆಗಿಂತಲೂ ಖಾಸಗಿ ಶಾಲೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ಆಸೆ ಹೊಂದಿದ್ದ ಬಡ ಮಕ್ಕಳು ಆರ್​​ಟಿಇ ಯೋಜನೆಯಡಿಯಲ್ಲಿ ನಿಯಮಾವಳಿಗಳಿಂದ ವಂಚಿತರಾಗುವಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಸರ್ಕಾರ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಹಾಗೂ ಪೂರಕ ವಾತಾವರಣ ನಿರ್ಮಿಸುತ್ತಿರುವ ಬಗ್ಗೆ ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಿದೆ.

ABOUT THE AUTHOR

...view details