ಕರ್ನಾಟಕ

karnataka

ನೂತನ ಶಿವಲಿಂಗ ಪ್ರತಿಷ್ಠಾಪಿಸಿಕೊಟ್ಟ ಕುಣಿಗಲ್​ ಶಾಸಕರಿಗೆ ವೃದ್ಧೆಯಿಂದ ಚಿನ್ನದ ಉಂಗುರ ಗಿಫ್ಟ್​

By

Published : Nov 16, 2021, 1:27 PM IST

ತಮ್ಮ ಕೋರಿಕೆಯಂತೆ ಗ್ರಾಮದ ಶಿವನ ದೇವಸ್ಥಾನದಲ್ಲಿ ನೂತನ ಶಿವಲಿಂಗ ಪ್ರತಿಷ್ಠಾಪನೆ ಮಾಡಿಸಿಕೊಟ್ಟಿದ್ದ ಶಾಸಕರಿಗೆ ಅಜ್ಜಿಯೊಬ್ಬರು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡುವ ಮೂಲಕ ಗಮನ ಸಳೆದಿದ್ದಾರೆ.

old-woman-gift-ring-to-kunigal-mla-ranganath
ನೂತನ ಶಿವಲಿಂಗ ಪ್ರತಿಷ್ಟಾಪಿಸಿಕೊಟ್ಟ ಶಾಸಕರಿಗೆ ಚಿನ್ನದ ಉಂಗುರ ನೀಡಿದ ವೃದ್ಧೆ

ತುಮಕೂರು: ನೂತನವಾಗಿ ನಿರ್ಮಿಸಲಾಗಿದ್ದ ದೇಗುಲದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿಕೊಟ್ಟ ಕುಣಿಗಲ್ ಶಾಸಕ ಡಾ. ರಂಗನಾಥ್ (Kunigal MLA Ranganath) ಅವರಿಗೆ ಗ್ರಾಮದ ವೃದ್ಧೆಯೊಬ್ಬರು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ಈ ಹಿಂದೆ ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿ ಬೆನವಾರ ಗ್ರಾಮದ ಸಾವಿತ್ರಮ್ಮ ಎಂಬ ಅಜ್ಜಿಯ ಮನೆಗೆ ಶಾಸಕ ಡಾ. ರಂಗನಾಥ್ ಭೇಟಿ ನೀಡಿದ್ದರು. ಈ ವೇಳೆ, ಗ್ರಾಮದ ಈಶ್ವರನ ದೇವಾಲಯದಲ್ಲಿ ಲಿಂಗ ಪ್ರತಿಷ್ಠಾಪನೆ ಮಾಡಿಸಿ ಎಂದು ಅಜ್ಜಿ ಮನವಿ ಮಾಡಿದ್ದರು.

ಶಾಸಕರಿಗೆ ಚಿನ್ನದ ಉಂಗುರ ನೀಡಿದ ವೃದ್ಧೆ

ಶಾಸಕರು ಅಜ್ಜಿಯ ಕೋರಿಕೆಯಂತೆ ಗ್ರಾಮದ ಶಿವನ ದೇವಸ್ಥಾನದಲ್ಲಿ ನೂತನ ಲಿಂಗ ಪ್ರತಿಷ್ಠಾಪನೆ ಮಾಡಿಸಿದ್ದಾರೆ. ಅಲ್ಲದೆ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕರಿಗೆ ಅಚ್ಚರಿ ಕಾದಿತ್ತು. ಅಜ್ಜಿಯು ಸಮೀಪ ಬಂದು ಶಾಸಕ ರಂಗನಾಥ್ ಬೆರಳಿಗೆ ಚಿನ್ನದ ಉಂಗುರ ತೊಡಿಸಿದರು. ಈ ವೇಳೆ ಶಾಸಕರು ಅಜ್ಜಿಯ ಆಶೀರ್ವಾದ ಪಡೆದರು.

ಪ್ರತಿಷ್ಠಾಪನೆಯಾದ ಶಿವಲಿಂಗ

ಇದನ್ನೂ ಓದಿ:ಮಕ್ಕಳು ಮೊಬೈಲ್‌ ನೋಡಿ ಹಾಳಾಗ್ತಾರೆ ಅನ್ಬೇಡಿ.. ಈ ಬಾಲಕನ ಪಾಂಡಿತ್ಯ ನೋಡಿ!

ABOUT THE AUTHOR

...view details