ಕರ್ನಾಟಕ

karnataka

ಶಾಸಕ ಗೌರಿಶಂಕರ್ ಹುಟ್ಟುಹಬ್ಬ.. ಕಾರ್ಯಕ್ರಮದಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ ಮಹಿಳೆಯರು..

By

Published : Sep 19, 2021, 4:52 PM IST

MLA Gauri Shankar Birthday celebration
ಶಾಸಕ ಬಿ.ಸಿ ಗೌರಿಶಂಕರ್ ಹುಟ್ಟುಹಬ್ಬ ಆಚರಣೆ ()

ನನ್ನ ಕೊನೆಯುಸಿರು ಇರುವವರೆಗೂ ನಾನು ನನ್ನ ಪಕ್ಷದ ಕಾರ್ಯಕರ್ತರು ತಲೆತಗ್ಗಿಸುವಂತೆ ಎಂದೂ ನಡೆಯುವುದಿಲ್ಲ. ಸಾರ್ವಜನಿಕರ ಕಷ್ಟಕ್ಕೆ ನಾನು ಸದಾ ಸಿದ್ಧನಿದ್ದು, ಅವರ ಕಷ್ಟ-ಸುಖದಲ್ಲಿ ಭಾಗಿಯಾಗುತ್ತೇನೆ..

ತುಮಕೂರು :ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಸಿ ಗೌರಿಶಂಕರ್ ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಮಹಿಳೆಯರು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ತುಮಕೂರು ತಾಲೂಕಿನ ಬಳ್ಳಗೆರೆ ಗ್ರಾಮದ ಶಾಸಕ ಗೌರಿಶಂಕರ್ ಅವರ ನಿವಾಸದಲ್ಲಿ ಅವರ 44ನೇ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಜೋಕೆ ನಾನು ಮಿಂಚಿನಬಳ್ಳಿ ಎಂಬ ಚಲನ ಚಿತ್ರಗೀತೆಗೆ ಮಹಿಳೆಯರು ಕುಣಿದು ಕುಪ್ಪಳಿಸಿದ್ದಾರೆ.

ಶಾಸಕ ಗೌರಿಶಂಕರ್ ಹುಟ್ಟುಹಬ್ಬ ಹಿನ್ನೆಲೆ ಭರ್ಜರಿ ಸ್ಟೆಪ್ಸ್ ಹಾಕಿದ ಮಹಿಳೆಯರು..

ಶಾಸಕರ ಹುಟ್ಟುಹಬ್ಬವನ್ನು ಈ ಬಾರಿ ಮಹಿಳೆಯರು ಕಾರ್ಯಕ್ರಮದಲ್ಲಿ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಆಚರಣೆ ಮಾಡಿದ್ದು, ಜೆಡಿಎಸ್ ಕಾರ್ಯಕರ್ತರು ಹಾಗೂ ಗೌರಿಶಂಕರ ಅಭಿಮಾನಿಗಳಲ್ಲಿ ಉತ್ಸಾಹ ಇಮ್ಮಡಿಗೊಳಿಸಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಗೌರಿಶಂಕರ್, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 1200 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಗ್ರಾಮಾಂತರ ಕ್ಷೇತ್ರದಲ್ಲಿ ನಾನು ಮನೆ ಮಗನಾಗಿ ಎಲ್ಲರ ಕಷ್ಟದಲ್ಲೂ ಭಾಗಿಯಾಗಿದ್ದು, ಅವರ ಅಭಿಮಾನಕ್ಕೆ ನಾನು ಸದಾ ಚಿರಋಣಿ.

ನನ್ನ ಕೊನೆಯುಸಿರು ಇರುವವರೆಗೂ ನಾನು ನನ್ನ ಪಕ್ಷದ ಕಾರ್ಯಕರ್ತರು ತಲೆತಗ್ಗಿಸುವಂತೆ ಎಂದೂ ನಡೆಯುವುದಿಲ್ಲ. ಸಾರ್ವಜನಿಕರ ಕಷ್ಟಕ್ಕೆ ನಾನು ಸದಾ ಸಿದ್ಧನಿದ್ದು, ಅವರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದರು.

ABOUT THE AUTHOR

...view details