ಕರ್ನಾಟಕ

karnataka

ಉಕ್ರೇನ್ ಅಲ್ಲಿ ಸಿಲುಕಿರುವ ತುಮಕೂರಿನ ಮೆಡಿಕಲ್ ವಿದ್ಯಾರ್ಥಿನಿ : ನೀರು, ಆಹಾರಕ್ಕೆ ಪರದಾಟ

By

Published : Feb 27, 2022, 12:34 PM IST

ಉಕ್ರೇನ್‌ನಲ್ಲಿ ಸಿಲುಕಿರುವ ತುಮಕೂರಿನ ಮೆಡಿಕಲ್ ವಿದ್ಯಾರ್ಥಿನಿ ಪ್ರತಿಭಾ ತನ್ನ ಪೋಷಕರಿಗೆ ವಾಟ್ಸ್‌ಆ್ಯಪ್ ಕರೆ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ತಿನ್ನಲು ಆಹಾರ, ನೀರು, ಎಟಿಎಂನಲ್ಲಿ ಹಣವೂ ಲಭ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ..

medical-student-from-tumkur-stuck-in-ukrein
ಉಕ್ರೇನ್ ಅಲ್ಲಿ ಸಿಲುಕಿರುವ ತುಮಕೂರಿನ ಮೆಡಿಕಲ್ ವಿದ್ಯಾರ್ಥಿನಿ

ತುಮಕೂರು: ಉಕ್ರೇನ್‌ನಲ್ಲಿ ಸಿಲುಕಿರುವ ತುಮಕೂರಿನ ಪ್ರತಿಭಾ ಎಂಬ ಮೆಡಿಕಲ್ ವಿದ್ಯಾರ್ಥಿನಿ ನಿತ್ಯ ತನ್ನ ಪೋಷಕರೊಂದಿಗೆ ವಾಟ್ಸ್ಆ್ಯಪ್ ಕಾಲ್ ಮೂಲಕ ಮಾತನಾಡುತ್ತಿದ್ದಾರೆ.

ಪ್ರಸ್ತುತ ಪ್ರತಿಭಾ ಉಳಿದುಕೊಂಡಿರೋ ಸ್ಥಳದಲ್ಲಿ ಕುಡಿಯಲು ನೀರು ಲಭ್ಯವಾಗುತ್ತಿಲ್ಲ, ಪರ್ಯಾಯವಾಗಿ ನಲ್ಲಿ ನೀರನ್ನು ಕುದಿಸಿ ಕುಡಿಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಆಹಾರ ವಸ್ತುಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಜೊತೆಗೆ ಎಟಿಎಂ ಅಲ್ಲಿ ಹಣ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಮನೆಯ ಸಮೀಪವೇ ಬಾಂಬ್ ಹಾಕಿದಂತಹ ಶಬ್ದ ಕೇಳಿ ಬರುತ್ತಿದೆ.

ತಕ್ಷಣ ಸುರಂಗಮಾರ್ಗವನ್ನು ಅವಲಂಬಿಸಬೇಕಿದೆ ಎಂದು ತನ್ನ ಪೋಷಕರಿಗೆ ಪ್ರತಿಭಾ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಪ್ರತಿಭಾ ಪೋಷಕರಾದ ಬಸವರಾಜ್ ಮತ್ತು ರಾಜೇಶ್ವರಿ ಸದ್ಯ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.

ಉಕ್ರೇನ್‌ನಲ್ಲಿ ಸಿಲುಕಿರುವ ತುಮಕೂರಿನ ಮೆಡಿಕಲ್ ವಿದ್ಯಾರ್ಥಿನಿ ಪ್ರತಿಭಾ ಜತೆ ಪೋಷಕರು ಮಾತನಾಡುತ್ತಿರುವುದು..

ಓದಿ :ಉಕ್ರೇನ್​: ಆಹಾರ, ನೀರಿಲ್ಲದೇ ಬಂಕರ್​ನಲ್ಲಿ ಸಿಲುಕಿರುವ ಮೈಸೂರಿನ ವಿದ್ಯಾರ್ಥಿನಿ

ABOUT THE AUTHOR

...view details