ಕರ್ನಾಟಕ

karnataka

ತೋಟಕ್ಕೆ ಬಂದ ಕೂಲಿ ಸಾವನ್ನಪ್ಪಿದ ವಿಷಯ ತಿಳಿಸಲು ಹೋದ ಮಾಲೀಕನೂ ಸಾವು

By

Published : Dec 28, 2021, 1:44 PM IST

ತಮ್ಮತೋಟಕ್ಕೆ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕ ಸಾವನ್ನಪ್ಪಿದ ವಿಷಯ ಹೇಳಲು ಹೋದ ಮಾಲೀಕ ಸಹ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.

The owner who was going to report the death of his worker also died by heart attack
ತೋಟಕ್ಕೆ ಬಂದ ಕೂಲಿ ಸಾವನ್ನಪ್ಪಿದ ವಿಷಯ ತಿಳಿಸಲು ಹೋದ ಮಾಲೀಕನೂ ಸಾವು

ಶಿವಮೊಗ್ಗ: ತೋಟಕ್ಕೆ ಬಂದಿದ್ದ ಕೂಲಿ ಕಾರ್ಮಿಕ ಹೃದಯಘಾತದಿಂದ ಸಾವನ್ನಪ್ಪಿದ ವಿಷಯ ಹೇಳಲು ಹೋದ ಮಾಲೀಕ ಸಹ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಮನಕಲಕುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.

ತೀರ್ಥಹಳ್ಳಿ ತಾಲೂಕು ಆರಗ ಗ್ರಾಮದ ನಿವೃತ್ತ ಶಿಕ್ಷಕ ದುಗ್ಗಪ್ಪ ಗೌಡ (67) ಎಂಬವರ ತೋಟಕ್ಕೆ ಭರ್ಮಾ ಎಂಬಾತ ಕೂಲಿ ಕೆಲಸಕ್ಕೆ ಬಂದಿದ್ದ. ಕೆಲಸ ಮಾಡುವ ವೇಳೆ ಭರ್ಮಾ ಹೃದಯಘಾತದಿಂದ ದಿಢೀರ್ ನೆಲಕ್ಕೆ ಕುಸಿದು ಬಿದ್ದು, ತೋಟದಲ್ಲಿಯೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಒಂದೇ ಕುಟುಂಬದ ಮೂವರಿಗೆ ವಿದ್ಯುತ್ ಶಾಕ್: ತಂದೆ, 2 ವರ್ಷದ ಮಗು ಸಾವು

ಭರ್ಮಾ ಸಾವಿನ ಸುದ್ದಿ ತಿಳಿಸಲು ಹೋಗುತ್ತಿದ್ದ ವೇಳೆ ದುಗ್ಗಪ್ಪ ಗೌಡರಿಗೂ ಹೃದಯಾಘಾತವಾಗಿ ಪ್ರಾಣಬಿಟ್ಟಿದ್ದಾರೆ.

TAGGED:

ABOUT THE AUTHOR

...view details