ಕರ್ನಾಟಕ

karnataka

ಮಂಗಳೂರು, ಉಡುಪಿಗೆ ಆದ ಗತಿ ಶಿವಮೊಗ್ಗ ಜಿಲ್ಲೆಗೂ ಆಗಲಿದೆ: ಡಿಕೆಶಿ ಎಚ್ಚರಿಕೆ

By

Published : Apr 6, 2022, 12:28 PM IST

ಶಿವಮೊಗ್ಗದಲ್ಲಿ ಸಂವಿಧಾನಕ್ಕೆ, ರಾಷ್ಟ್ರ ಧ್ವಜಕ್ಕೆ ಅಪಮಾನವಾಗುತ್ತಿದೆ. ಮಂಗಳೂರು - ಉಡುಪಿಯಲ್ಲಿ ಇದೇ ರೀತಿ ನಡೆಯುತ್ತಿತ್ತು. ಇದರಿಂದ ಅಲ್ಲಿಗೆ ಬಂಡವಾಳ ಹಾಕಲು ಯಾರೂ ಬಾರದೇ, ಅವರೆಲ್ಲ ದುಬೈ ಸೇರಿದಂತೆ ಬೇರೆ ಬೇರೆ ಕಡೆ ಹೋಗಿ ಬಂಡವಾಳ ಹಾಕುವಂತಾಗಿದೆ. ಅದೇ ಗತಿ ಶಿವಮೊಗ್ಗಕ್ಕೂ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

Digital Membership Registration Campaign in Bhadravati
ಭದ್ರಾವತಿಯಲ್ಲಿ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ : ಡಿಕೆಶಿ ಚಾಲನೆ..

ಶಿವಮೊಗ್ಗ:ಮಂಗಳೂರು, ಉಡುಪಿಗೆ ಆದ ಗತಿ ಶಿವಮೊಗ್ಗ ಜಿಲ್ಲೆಗೂ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಭದ್ರಾವತಿಯಲ್ಲಿ ನಡೆದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದ ಕುರಿತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಶಿವಮೊಗ್ಗದಿಂದ ಹೋಗುತ್ತಿರುವ ಇರುವ ಸಂದೇಶದಿಂದ ಇಲ್ಲಿಗೆ ಬಂಡವಾಳ ಹಾಕಲು ಯಾರೂ ಬರಲ್ಲ. ಶಿವಮೊಗ್ಗದಲ್ಲಿ ಸಂವಿಧಾನಕ್ಕೆ, ರಾಷ್ಟ್ರ ಧ್ವಜಕ್ಕೆ ಅಪಮಾನವಾಗುತ್ತಿದೆ. ಮಂಗಳೂರು - ಉಡುಪಿಯಲ್ಲಿ ಇದೇ ರೀತಿ ನಡೆಯುತ್ತಿತ್ತು. ಇದರಿಂದ ಅಲ್ಲಿಗೆ ಬಂಡವಾಳ ಹಾಕಲು ಯಾರು ಬಾರದೇ, ಅವರೆಲ್ಲ ದುಬೈ ಸೇರಿದಂತೆ ಬೇರೆ ಬೇರೆ ಕಡೆ ಹೋಗಿ ಬಂಡವಾಳ ಹಾಕುವಂತಾಗಿದೆ. ಅದೇ ಗತಿ ಶಿವಮೊಗ್ಗಕ್ಕೂ ಬರಲಿದೆ. ಹೀಗಾಗಿ ಶಿವಮೊಗ್ಗ ಜನತೆ ಹುಷಾರಾಗಿರಿ. ನೀವು ಬದಲಾವಣೆ ತರದೇ ಹೋದರೆ, ವ್ಯಾಪಾರ ವಹಿವಾಟಿಗೆ ಯಾರು ಬರಲ್ಲ ಎಂದು ಎಚ್ಚರಿಸಿದರು.

ಭದ್ರಾವತಿಯಲ್ಲಿ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ : ಡಿಕೆಶಿ ಚಾಲನೆ..

ಬಿಜೆಪಿಯದು ಕಾಮಲೆ ಕಣ್ಣು:ಬಿಜೆಪಿಯದು ಕಾಮಲೆ ಕಣ್ಣು. ಅವರಿಗೆ ಎಲ್ಲವು ಹಳದಿಯಾಗಿ ಕಾಣುತ್ತದೆ. ನಮಗೆ ದೇಶದ, ರಾಜ್ಯದ ಅಭಿವೃದ್ದಿ ಬೇಕು. ಆದರೆ, ಬಿಜೆಪಿಯವರಿಗೆ ಮತ ಬೇಕಷ್ಟೆ. ಬಿಜೆಪಿಯವರು ತಮ್ಮ ಆಡಳಿತದ ಮೂಲಕ ರಾಜ್ಯದ ಮೇಲೆ ಕಪ್ಪು ಚುಕ್ಕೆ ಇಡುತ್ತಿದ್ದಾರೆ. ನಮ್ಮ ಸಮಾಜದಲ್ಲಿ ನಡೆಯುತ್ತಿದ್ದ, ಅನೇಕ ಆಚರಣೆ ಬದಲಾವಣೆ ಮಾಡಲು ಹೊರಟಿದ್ದಾರೆ.

ನಾವು ಏನ್ ತಿನ್ನಬೇಕು ಅಂತಾ ಬಿಜೆಪಿಯವರಿಗೆ ಕೇಳಬೇಕಿದೆ. ಯಾರು ಏನೇನೂ ಕಾಯಕ ಮಾಡುತ್ತಾರೋ ಅದನ್ನು ಅವರೇ, ಮಾಡಬೇಕು. ರಾಜ್ಯದಲ್ಲಿರುವುದು ಭ್ರಷ್ಟ ಸರ್ಕಾರ. ಈ ಸರ್ಕಾರವನ್ನು ಶೇ.40 ಸರ್ಕಾರ ಅಂತಾ ನಾವು ಕರೆದಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೇಳಿರುವುದು ಎಂದು ಕಿಡಿಕಾರಿದರು.

ನಮ್ಮ ಪಕ್ಷದ ಕಾರ್ಯಕರ್ತರು ಧೈರ್ಯವಾಗಿರಿ. ಕಾಂಗ್ರೆಸ್ ಪಕ್ಷ ಎಲ್ಲೂ ಹೋಗಲ್ಲ. ನಮ್ಮ ಪಕ್ಷದಲ್ಲಿ ವ್ಯಕ್ತಿ ಪೂಜೆ ಇಲ್ಲ. ಎಲ್ಲರೂ ಪಕ್ಷದ ಪೂಜೆ ಮಾಡಬೇಕು.‌ ಇಲ್ಲಿ ಯಾರೂ ಶಾಶ್ವತವಾಗಿ ಇರುವುದಿಲ್ಲ. ದೆಹಲಿಯಿಂದ ಯಾರ್ ಏನ್ ಮಾಡಿದರೂ ಜನರ ನಿಲುವು ಬದಲಾಯಿಸಲು ಆಗಲ್ಲ ಎಂದರು.

ಸರ್ಕಾರ ಪ್ರತಿ ನಿತ್ಯ ಎಲ್ಲ ಅಗತ್ಯ ವಸ್ತುಗಳ ದರ ಏರಿಕೆ ಮಾಡಿ ಜನರ ಹಣ ಪಿಕ್ ಪಾಕೇಟ್ ಮಾಡುತ್ತಿದೆ. ಇಂತಹ ಸರ್ಕಾರವನ್ನು ಕಿತ್ತು ಹಾಕಬೇಕು. ಬಿಜೆಪಿಯಲ್ಲಿ ಎಲ್ಲವೂ ತಾಂಡವವಾಡುತ್ತಿವೆ. ಯಡಿಯೂರಪ್ಪ ಅವರ ವಿರುದ್ದ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದರು. ಈಗ ಬೊಮ್ಮಾಯಿ ಅವರನ್ನು ಕೆಳಗಿಳಿಸಿ ನಿರಾಣಿ ಅವರನ್ನು ಸಿಎಂ ಮಾಡಲು ಹೊರಟ್ಟಿದ್ದಾರೆ ಎಂದರು.

ಇನ್ನು ಈ ತಿಂಗಳ ಅಂತ್ಯದಲ್ಲಿ ಅಭ್ಯರ್ಥಿಗಳು ಯಾರು ಅಂತಾ ತಿರ್ಮಾನ ಮಾಡುತ್ತೇವೆ. ಸ್ವತಂತ್ರ್ಯ ಬಂದ ನಂತರ ದೇಶದಲ್ಲಿ 70 ವರ್ಷ ಕಾಂಗ್ರೆಸ್​​ ಏನು ಮಾಡಿದೆ ಎಂದು ನಮ್ಮ ಪಕ್ಷದವರು ತಿಳಿದುಕೊಂಡು, ಇತರರಿಗೆ ತಿಳಿಸಬೇಕು ಎಂದರು. ಇದೇ ವೇಳೆ, ಮಾತನಾಡಿದ ಭದ್ರಾವತಿ ಶಾಸಕ ಸಂಗಮೇಶ್, ಡಿಜಿಟಲ್ ನೋಂದಣಿಯವನ್ನು ಯಶಸ್ವಿಯಾಗಿ ನಡೆಸುತ್ತೇವೆ ಎಂದರು

ಇದನ್ನೂ ಓದಿ:ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿ ಜನರಿಂದ ಪಿಕ್ ಪಾಕೇಟ್ ಮಾಡುತ್ತಿದೆ: ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ABOUT THE AUTHOR

...view details