ಕರ್ನಾಟಕ

karnataka

ಬಾವಿಯೊಳಗೆ 38 ಕೆಜಿ ಶ್ರೀಗಂಧ ಬಚ್ಚಿಟ್ಟಿದ್ದ ಖದೀಮರು: ನಾಲ್ವರು ಅಂದರ್​

By

Published : Dec 2, 2020, 12:18 PM IST

ಹೊಸನಗರ‌ ವಲಯ ಅರಣ್ಯ ಇಲಾಖೆ ಮತ್ತು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿ 38 ಕೆಜಿ ಶ್ರೀಗಂಧ ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ.

four arrest
ನಾಲ್ವರ ಬಂಧನ

ಶಿವಮೊಗ್ಗ: ಬಾವಿಯೊಳಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 38ಕೆಜಿ ಶ್ರೀಗಂಧವನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ನಾಲ್ವರನ್ನು ಹೊಸನಗರದಲ್ಲಿ ಬಂಧಿಸಿದ್ದಾರೆ.

ಬಾಣಿಗ ನಿವಾಸಿ ಹನಿಫ್ ಸಾಬ್, ದಮ್ಮಾ ಗ್ರಾಮದ ಮಂಜುನಾಥ್,‌ ಹೊಸಕೆರೆ ಹಾಲೇಶ್ ಹಾಗೂ ಸಾಗರದ ಶಿವಪ್ಪ ನಾಯಕ ರಸ್ತೆ ನಿವಾಸಿ ಮಂಜುನಾಥ್ ಬಂಧಿತರು. ಹೊಸನಗರ ತಾಲೂಕಿನ ಬಾಣಿಗೆ ಗ್ರಾಮದ ಬಾವಿಯಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಸಂಚಾರಿ ಅರಣ್ಯ ದಳ ಹಾಗೂ ಹೊಸನಗರ‌ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 38 ಕೆಜಿ ಶ್ರೀಗಂಧವನ್ನು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದಿರುವ ಶ್ರೀಗಂಧದ ತುಂಡುಗಳು

ಕಾರ್ಯಾಚರಣೆಯಲ್ಲಿ ಸಂಚಾರಿ ದಳದ ಎಸಿಎಫ್ ಬಾಲಚಂದ್ರ, ಹೊಸನಗರದ ಎಸಿಎಫ್ ಶಿವಮೂರ್ತಿ ಹಾಗೂ ಅರಣ್ಯ ಸಿಬ್ಬಂದಿ ಹಾಜರಿದ್ದರು.

ABOUT THE AUTHOR

...view details