ಕರ್ನಾಟಕ

karnataka

ಭದ್ರಾವತಿ: ವಿದ್ಯುತ್ ಶಾಕ್​​​​ನಿಂದ ಬಾಲಕಿ ಸಾವು

By

Published : Apr 30, 2022, 8:43 AM IST

ಮನೆ ಬಳಿ ಆಟ ಆಡುವಾಗ ತಂತಿಯ ಮೇಲೆ ಬಿದ್ದಿದ್ದ ಕೇಬಲ್ ಮುಟ್ಟಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಇಂಚರ ಎಂದು ಗುರುತಿಸಲಾಗಿದೆ.

3-yrs-old-child-died-in-electric-shock-in-bhadravathi
ಭದ್ರಾವತಿ: ವಿದ್ಯುತ್ ಶಾಕ್ ನಿಂದ ಬಾಲಕಿ ಸಾವು.

ಶಿವಮೊಗ್ಗ: ತಂತಿ ಬೇಲಿಯ ಮೇಲೆ ಬಿದ್ದಿದ್ದ ಕೇಬಲ್ ಅನ್ನು ಮುಟ್ಟಿದ ಪರಿಣಾಮ ಮೂರು ವರ್ಷದ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಇಂಚರ(3) ಎಂದು ಗುರುತಿಸಲಾಗಿದೆ.

ಬಾಲಕಿ ಇಂಚರ ಮನೆ ಬಳಿ ಆಟವಾಡುವಾಗ ತಂತಿ ಬೇಲಿ ಮೇಲೆ ಬಿದ್ದಿದ್ದ ಟಿವಿ ಕೇಬಲ್ ಅನ್ನು ಮುಟ್ಟಿದ್ದಾಳೆ. ಈ ವೇಳೆ, ಬಾಲಕಿಗೆ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಟಿವಿ ಕೇಬಲ್ ಆಪರೇಟರ್​ನ ನಿರ್ಲಕ್ಷ್ಯದಿಂದ ಬಾಲಕಿ ಸಾವನ್ನಪ್ಪಿರುವುದಾಗಿ ಮೃತ ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ಸದ್ಯ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ :ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ: ಪತ್ನಿ, ಮಕ್ಕಳು ಮನೆಯಲ್ಲಿರುವಾಗಲೇ ಕೃತ್ಯ!

ABOUT THE AUTHOR

...view details