ಕರ್ನಾಟಕ

karnataka

ಬೇಬಿ ಬೆಟ್ಟದ ಗಣಿಗಾರಿಕೆ ಒಂದು ವರ್ಷ ನಿಷೇಧಿಸಿ: ಎಸ್.ಆರ್. ಹಿರೇಮಠ ಆಗ್ರಹ

By

Published : Jul 17, 2021, 6:25 PM IST

ಕೆಆರ್​ಎಸ್ ಸಮೀಪ ಇರುವ ಬೇಬಿಬೆಟ್ಟವನ್ನ ಗಣಿಗಾರಿಕೆಯ ಮೂಲಕ ನಾಶ ಮಾಡುವ ಕೆಲಸವನ್ನ ರಾಜಕಾರಣಿಗಳು ಮಾಡುತ್ತಿದ್ದಾರೆ. ಅಲ್ಲದೇ ಹಪ್ತಾ ವಸೂಲಿ ಮಾಡುತ್ತಿದ್ದಾರೆ‌. ಇದರ ಬಗ್ಗೆ ಅಲ್ಲಿನ ಸ್ಥಳೀಯ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಮಹಾಮೈತ್ರಿ ಸಂಚಾಲಕ ಎಸ್.ಆರ್. ಹಿರೇಮಠ ಒತ್ತಾಯಿಸಿದ್ದಾರೆ.

take-action-on-actor-darshan-said-sr-hiremath
ಬೇಬಿಬೆಟ್ಟದ ಗಣಿಗಾರಿಕೆ

ಮೈಸೂರು: ಸುಪ್ರೀಂಕೋರ್ಟ್ ಆದೇಶದ ಮೆರೆಗೆ ಬಳ್ಳಾರಿ ಗಣಿಗಾರಿಕೆಯನ್ನು ಒಂದು ವರ್ಷ ನಿಷೇಧಿಸಿದಂತೆ, ಮಂಡ್ಯದ ಬೇಬಿಬೆಟ್ಟದ ಗಣಿಗಾರಿಕೆಯನ್ನೂ ಸಹ ಒಂದು ವರ್ಷ ನಿಷೇಧಿಸಬೇಕು ಎಂದು ಜನಾಂದೋಲನ ಮಹಾಮೈತ್ರಿ ಸಂಚಾಲಕ ಎಸ್.ಆರ್. ಹಿರೇಮಠ ಹೇಳಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಆರ್​ಎಸ್ ಸಮೀಪ ಇರುವ ಬೇಬಿಬೆಟ್ಟವನ್ನ ಗಣಿಗಾರಿಕೆಯ ಮೂಲಕ ನಾಶ ಮಾಡುವ ಕೆಲಸವನ್ನ ರಾಜಕಾರಣಿಗಳು ಮಾಡುತ್ತಿದ್ದಾರೆ. ಅಲ್ಲದೇ ಹಪ್ತಾ ವಸೂಲಿ ಮಾಡುತ್ತಿದ್ದಾರೆ‌. ಇದರ ಬಗ್ಗೆ ಅಲ್ಲಿನ ಸ್ಥಳೀಯ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.

ಬೇಬಿಬೆಟ್ಟದ ಗಣಿಗಾರಿಕೆಯನ್ನ ಒಂದು ವರ್ಷ ನಿಷೇಧಿಸಿ

ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇದ್ದರೆ, ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಬೇಕು. ಗಣಿಗಾರಿಕೆಯಿಂದ ರಾಜಕೀಯ ನೈತಿಕ ಅಧಃ ಪತನವಾಗುತ್ತಿದೆ. ರಾಜಕಾರಣಿಗಳು ಯಾರೂ ಕೂಡ ಸಾಚಾ ಅಲ್ಲ ಎಂದು ಹೇಳಿದರು.

ದರ್ಶನ್ ಮೇಲೆ ಕ್ರಮ ಕೈಗೊಳ್ಳಬೇಕು: ಸಾರ್ವಜನಿಕ ಜೀವನದಲ್ಲಿ ನುಡಿದರೆ ಮುತ್ತಿನ ಹಾರದಂತಿರಬೇಕು. ಆದರೆ ತಲೆ - ಕೈ ಕಟ್ ಮಾಡುತ್ತೇನಿ ಅಂತ ಹೇಳಿಕೆ ನೀಡುವುದು ತಪ್ಪು, ಇಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದರು.

ಕೇಂದ್ರ ಸರ್ಕಾರ ವಿಫಲ: ಸ್ವಾತಂತ್ರ್ಯ ನಂತರ ಆಡಳಿತ ನಡೆಸಿದ ಸರ್ಕಾರಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಮಗ್ರವಾಗಿ ವಿಫಲವಾಗಿದೆ ಎಂದು ಹೇಳಿದರು.

ABOUT THE AUTHOR

...view details