ಕರ್ನಾಟಕ

karnataka

ಕಾಡಾನೆ ದಾಳಿಗೆ ವೃದ್ಧ ಬಲಿ, ಯುವಕ ಪಾರು

By

Published : Jun 9, 2022, 11:08 AM IST

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಚ್.ಡಿ‌.ಕೋಟೆ ತಾಲೂಕಿನ ಆನೆ ಮಾಳ ಹಾಡಿಯಲ್ಲಿ ವೃದ್ಧನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಆನೆ ದಾಳಿಗೆ ವೃದ್ಧ ಸಾವು
ಆನೆ ದಾಳಿಗೆ ವೃದ್ಧ ಸಾವು

ಮೈಸೂರು: ಕಾಡಾನೆ ದಾಳಿಗೆ ಆದಿವಾಸಿ ವೃದ್ಧನೊಬ್ಬ ಮೃತಪಟ್ಟಿದ್ದು, ಆತನ ಜೊತೆಯಿದ್ದ ಯುವಕ ಪ್ರಾಣಾಪಾಯದಿಂದ ಪಾರಾದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಚ್.ಡಿ‌.ಕೋಟೆ ತಾಲೂಕಿನಲ್ಲಿ ನಡೆದಿದೆ. ಆನೆಮಾಳ ಹಾಡಿಯ ಪುಟ್ಟಪ್ಪ (75) ಮೃತ ದುರ್ದೈವಿ.

ಬುಧವಾರ ರಾತ್ರಿ ಆನೆಮಾಳ ಹಾಡಿಯತ್ತ ಪುಟ್ಟಪ್ಪ ಹಾಗೂ ಮತ್ತೊಬ್ಬ ಯುವಕ ಧಾವಿಸುತ್ತಿದ್ದ ವೇಳೆ ಕಾಡಾನೆಯೊಂದು ಎದುರಾಗಿದ್ದು, ವೃದ್ಧನ ಮೇಲೆ‌ ದಾಳಿ ನಡೆಸಿದೆ. ಈ ವೇಳೆ, ವೃದ್ಧನ ಜೊತೆಗಿದ್ದ ಯುವಕ‌ ಸ್ಥಳದಿಂದ ಪರಾರಿಯಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಆನೆ ದಾಳಿಗೆ ವೃದ್ಧ ಸಾವು

ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪುಟ್ಟಪ್ಪನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಈ ಕುರಿತು ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಂತರಸಂತೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬಿರು ಬಿಸಿಲಿನ ನಡುವೆ ಕೇವಲ10 ಅಡಿ ವ್ಯಾಪ್ತಿಯಲ್ಲಿ ಬೀಳುತ್ತೆ ಮಳೆ: ಗ್ರಾಮಸ್ಥರಲ್ಲಿ ದಿಗ್ಬ್ರಮೆ!!

ABOUT THE AUTHOR

...view details