ಕರ್ನಾಟಕ

karnataka

100 ಕೋಟಿ ರೂ. ಮೌಲ್ಯದ 47 ನಿವೇಶನ ವಶಪಡಿಸಿಕೊಂಡ ಮುಡಾ

By

Published : Dec 18, 2021, 3:17 PM IST

ಒತ್ತುವರಿ ಕಾರ್ಯಾಚರಣೆ ನಡೆಸಿದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಬರೋಬ್ಬರಿ 100 ಕೋಟಿ ರೂ. ಮೌಲ್ಯದ 47 ನಿವೇಶನ ವಶಪಡಿಸಿಕೊಂಡಿದೆ..

muda-acquires-land-in-vijayanagar
ಮುಡಾ

ಮೈಸೂರು :ವಿಜಯನಗರದಲ್ಲಿ ಒತ್ತುವರಿ ಕಾರ್ಯಾಚರಣೆ ನಡೆಸಿದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಬರೋಬ್ಬರಿ 100 ಕೋಟಿ ರೂ. ಮೌಲ್ಯದ 47 ನಿವೇಶನ ವಶ ಪಡಿಸಿಕೊಂಡಿದೆ.

100 ಕೋಟಿ ರೂ. ಮೌಲ್ಯದ 47 ನಿವೇಶನ ವಶಪಡಿಸಿಕೊಂಡ ಮುಡಾ

ಪಟ್ಟಣದ ವಿಜಯನಗರದ 4ನೇ ಹಂತದಲ್ಲಿ ಬಸವನಹಳ್ಳಿ ಗ್ರಾಮದ ಸರ್ವೆ ನಂ.188ರಲ್ಲಿ 5 ಎಕರೆ 14 ಗುಂಟೆ ಜಮೀನಿನಲ್ಲಿ 50×80 ಅಳತೆಯ 11 ನಿವೇಶನ ಹಾಗೂ 40×60 ಅಳತೆಯ 36 ನಿವೇಶನವನ್ನು ಮುಡಾ ವಶಕ್ಕೆ ಪಡೆದಿದೆ.

ವಿಜಯನಗರದ 4ನೇ ಹಂತ, 2ನೇ ಘಟ್ಟ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು 1991 ಡಿಸೆಂಬರ್ 23ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಭೂಸ್ವಾಧೀನಪಡಿಸಿಕೊಂಡಿತ್ತು.

ಭೂ ಮಾಲಿಕರಿಗೆ ಪರಿಹಾರ ಹಣ ಪಾವತಿ ನಂತರ ಮಹದೇವಯ್ಯ ಎಂಬುವರು ಕ್ರಯದ ಒಪ್ಪಂದ ಮಾಡಿಕೊಂಡಿದ್ದರು. ಸಿವಿಲ್‌ ನ್ಯಾಯಾಲಯದಲ್ಲಿ ಮುಡಾ ಪರ ತೀರ್ಪು ಬಂದ ಹಿನ್ನೆಲೆ ಮುಡಾ ಆಯುಕ್ತ ಡಾ. ಡಿ ಬಿ ನಟೇಶ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಮಾಡಲಾಯಿತು. ಪೊಲೀಸ್ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ABOUT THE AUTHOR

...view details