ಕರ್ನಾಟಕ

karnataka

ಉಸ್ತುವಾರಿ ಬದಲಾವಣೆ ಸಿಎಂ ತೀರ್ಮಾನ: ಸಚಿವ ಎಸ್.ಟಿ.ಸೋಮಶೇಖರ್

By

Published : Apr 7, 2022, 5:37 PM IST

ಮೈಸೂರು ಉಸ್ತುವಾರಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಿದ್ದರೆ ಅದಕ್ಕೆ ನಾನು ಖುಷಿಪಡುತ್ತೇನೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ್ದ ಉಸ್ತುವಾರಿ ಸ್ಥಾನವನ್ನು ಬೊಮ್ಮಾಯಿ ಅವರು ಮುಂದುವರಿಸಿದ್ದಾರೆ. ಈ ಸ್ಥಾನವೇ ಬೇಕು ಎಂದು ಯಾವುತ್ತೂ ನಾನು ಹಠ ಹಿಡಿದಿಲ್ಲ. ಬೇರೆಯವರಿಗೆ ಕೊಟ್ಟರೂ ಸಂತೋಷ ಎಂದು ಎಸ್​.ಟಿ.ಸೋಮಶೇಖರ್​ ಹೇಳಿದ್ದಾರೆ.

Minister S.T.Somashekhar talked to media
ಸಚಿವ ಎಸ್.ಟಿ.ಸೋಮಶೇಖರ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೈಸೂರು: ನಾನು ಸದಾ ಇಲ್ಲೇ ಇರಬೇಕು ಎಂದು ಬಂದಿಲ್ಲ.‌ ಉಸ್ತುವಾರಿ ಸ್ಥಾನದಲ್ಲೇ ಮುಂದುವರಿಯಬೇಕು ಎಂದು ಯಾವತ್ತೂ ಪಟ್ಟು ಹಿಡಿದಿಲ್ಲ. ಜಿಲ್ಲೆಯ ಉಸ್ತುವಾರಿ ಬದಲಾವಣೆ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.


ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸಂಪುಟ ಪುನರ್​ ರಚನೆ ಅಥವಾ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಸಿಎಂ ತೀರ್ಮಾನ ಮಾಡುತ್ತಾರೆ ಎಂದ ಅವರು, ಮೈಸೂರು ಉಸ್ತುವಾರಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಿದ್ದರೆ ನಾನು ಸಂತೋಷ ಪಡುತ್ತೇನೆ‌. ನಾನು ಸದಾ ಇಲ್ಲೇ ಇರಬೇಕೆಂದು ಬಯಸಿಲ್ಲ. ಅಥವಾ ನನಗೆ ಉಸ್ತುವಾರಿ ಸ್ಥಾನ ಬೇಕೆಂದು ಪಟ್ಟು ಹಿಡಿದಿಲ್ಲ. ಬೇರೆಯವರಿಗೆ ಕೊಟ್ಟರೆ ಸಂತೋಷ. ಯಡಿಯೂರಪ್ಪನವರು ನನಗೆ ಉಸ್ತುವಾರಿ ಸ್ಥಾನ ಕೊಟ್ಟಿದ್ದರು, ಅದನ್ನು ಬೊಮ್ಮಾಯಿಯವರು ಮುಂದುವರೆಸಿದ್ದರು. ಕೊಟ್ಟ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದೇನೆ. ಉಸ್ತುವಾರಿ ಬದಲಾವಣೆ ಏನಿದ್ದರೂ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಚಾಮುಂಡಿ ಬೆಟ್ಟದಲ್ಲಿ ಹಿಂದೂಯೇತರರಿಗೆ ನೀಡಿರುವ ಮಾರಾಟ ಮಳಿಗೆಯನ್ನು ತೆರವು ಮಾಡಿ ಎಂದು ವಿಶ್ವ ಹಿಂದೂ ಪರಿಷತ್​ ಮಾಡಿರುವ ಮನವಿ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ನನಗೆ ಯಾರು ಖುದ್ದು ಮನವಿ ಮಾಡಿಲ್ಲ. ಈ ಬಗ್ಗೆ ಮನವಿ ಮಾಡಿದರೆ ಧಾರ್ಮಿಕ ದತ್ತಿ ಇಲಾಖೆ ಕಾನೂನು ಪ್ರಕಾರ ಪರಿಶೀಲನೆ ನಡೆಸುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಪರೋಕ್ಷವಾಗಿ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ

ABOUT THE AUTHOR

...view details