ಕರ್ನಾಟಕ

karnataka

ಕೌಟುಂಬಿಕ ಕಲಹ.. ಬಾವನ ಕೈ ಕತ್ತರಿಸಿ ಚೀಲದಲ್ಲಿ ತುಂಬಿ ಠಾಣೆಗೆ ಬಂದ ಬಾಮೈದ

By

Published : Aug 15, 2021, 3:57 PM IST

ತೀವ್ರ ರಕ್ತಸ್ರಾವದಿಂದ ನರಳಿ ಸರಾನ್ ಪ್ರಾಣ ಬಿಟ್ಟರೆ, ಕದೀರ್ ಕತ್ತರಿಸಿದ ಕೈಯನ್ನು ಠಾಣೆಗೆ ತಂದು ಪೊಲೀಸರಿಗೆ ಶರಣಾಗಿದ್ದಾನೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ..

a-man-murder-his-sister-husband-in-mysore
ಬಾವನ ಕೈ ಕತ್ತರಿಸಿ ಬಾಮೈದ

ಮೈಸೂರು :ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬಾವನ ಕೈ ಕತ್ತರಿಸಿ ಬಾಮೈದ ಕೊಲೆ ಮಾಡಿರುವ ಘಟನೆ ಪಟ್ಟಣದ ಗೌಸಿಯಾನಗರದಲ್ಲಿ ನಡೆದಿದೆ.

ಮಹಮ್ಮದ್​ ಸರಾನ್ (27) ಮೃತ ದುರ್ದೈವಿ. ಸರಾನ್​​ ಐದು ತಿಂಗಳ ಹಿಂದೆ ಹಿಂದೆಯಷ್ಟೇ ರೂಬೀನಾ ಎನ್ನುವ ಯುವತಿಯನ್ನು ಮದುವೆಯಾಗಿದ್ದ. ಆದರೆ, ದಾಂಪತ್ಯದಲ್ಲಿ ಬಿರುಕು ಉಂಟಾದ ಹಿನ್ನೆಲೆ ಇಬ್ಬರ ನಡುವೆ ಜಗಳವಾಗಿತ್ತು.

ರೂಬೀನಾ ಪೋಷಕರು ಮಧ್ಯಪ್ರವೇಶಿಸಿ ಇಬ್ಬರಿಗೂ ಬುದ್ಧಿ ಹೇಳಿ ಜಗಳವನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದರು. ಆದರೆ, ಘಟನೆಯಿಂದ ಕೋಪಗೊಂಡಿದ್ದ ಬಾಮೈದ ಕದೀರ್, ಬಾವನ ಕೈಕತ್ತರಿಸಿ ಅಟ್ಟಹಾಸ ಮೆರೆದಿದ್ದಾನೆ.

ತೀವ್ರ ರಕ್ತಸ್ರಾವದಿಂದ ನರಳಿ ಸರಾನ್ ಪ್ರಾಣ ಬಿಟ್ಟರೆ, ಕದೀರ್ ಕತ್ತರಿಸಿದ ಕೈಯನ್ನು ಠಾಣೆಗೆ ತಂದು ಪೊಲೀಸರಿಗೆ ಶರಣಾಗಿದ್ದಾನೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ABOUT THE AUTHOR

...view details