ಕರ್ನಾಟಕ

karnataka

ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಖಚಿತ : ಸಚಿವ ಪ್ರಭು ಚೌಹಾಣ್ ವಿಶ್ವಾಸ

By

Published : Oct 8, 2021, 4:47 PM IST

Updated : Oct 8, 2021, 4:56 PM IST

2014ರ ಮೊದಲು ದೇಶಕ್ಕೆ ಏನು ಬೆಲೆ ಇತ್ತು, ಇವಾಗ ಏನು ಬೇಲೆ ಇದೆ ಅಂತಾ ಎಲ್ಲರಿಗೂ ಗೊತ್ತಿದೆ. ವಿದೇಶದಲ್ಲಿ ಸಹ ಪ್ರಧಾನಿ ಮೋದಿಗೆ ಯಾವ ರೀತಿ ಪ್ರಶಂಸೆ ಮಾಡ್ತಿದ್ದಾರೆ ಎಂಬುದು ಕೂಡ ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಪ್ರಭು ಚೌಹಾಣ್ ಅವರು ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು..

minister Prabhu Chauhan
ಸಚಿವ ಪ್ರಭು ಚೌವ್ಹಾಣ್

ಕಲಬುರಗಿ: ಸಿಂದಗಿ, ಹಾನಗಲ್ ಎರಡು ಉಪಚುನಾವಣೆಯಲ್ಲೂ ಬಿಜೆಪಿಗೆ ಗೆಲುವು ಖಚಿತ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ವಿಶ್ವಾಸ ವ್ಯಕ್ತಪಡಿಸಿದರು.

ಬೈ ಎಲೆಕ್ಷನ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಸಚಿವ ಪ್ರಭು ಚೌಹಾಣ್..

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ಕೊಡುಗೆ ಹಾಗೂ ಬಸವರಾಜ ಬೊಮ್ಮಾಯಿ ಅವರ ಒಳ್ಳೆಯ ಕೆಲಸಗಳಿಂದ ನಾವು ಉಪ ಚುನಾವಣೆಯ ಎರಡೂ ಕ್ಷೇತ್ರಗಳಲ್ಲು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಐಟಿ ದಾಳಿ ಕುರಿತು ಪ್ರತಿಕ್ರಿಯೆ :ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿ, ಇತ್ತೀಚೆಗೆ ಐಟಿ ದಾಳಿ ಕಾಮನ್ ಆಗಿದೆ. ಇದು ಹೊಸದೇನಲ್ಲ. ಕಾನೂನು ಎಲ್ಲರಿಗೂ ಒಂದೇ.. ಸದ್ಯ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ದೂದ್​ ಕಾ ದೂದ್​​, ಪಾನಿ ಕಾ ಪಾನಿ ಆಗಲಿದೆ ಎಂದರು‌.

ಹೆಚ್​​ಡಿಕೆ-ಸಿದ್ದುಗೆ ವಯಸ್ಸಾಗಿದೆ :ಕಾಂಗ್ರೆಸ್ ಮತ್ತು ಜೆಡಿಎಸ್​​ನಿಂದ RSS ಕುರಿತು ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆರ್​ಎಸ್​ಎಸ್ ಇದ್ರೆ ದೇಶ ಇರುತ್ತದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿದೆ. ಅವರಿಗೆ ಯಾವ ರೀತಿ ಮಾತನಾಡಬೇಕು ಅಂತಾ ಗೊತ್ತಿಲ್ಲ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸುತ್ತೇನೆ.

2014ರ ಮೊದಲು ದೇಶಕ್ಕೆ ಏನು ಬೆಲೆ ಇತ್ತು, ಇವಾಗ ಏನು ಬೇಲೆ ಇದೆ ಅಂತಾ ಎಲ್ಲರಿಗೂ ಗೊತ್ತಿದೆ. ವಿದೇಶದಲ್ಲಿ ಸಹ ಪ್ರಧಾನಿ ಮೋದಿಗೆ ಯಾವ ರೀತಿ ಪ್ರಶಂಸೆ ಮಾಡ್ತಿದ್ದಾರೆ ಎಂಬುದು ಕೂಡ ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಪ್ರಭು ಚೌಹಾಣ್ ಅವರು ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ:ತಂದೆಯ ಗುಂಡಿಗೆ ಮಗ ಬಲಿ ಪ್ರಕರಣ : ಪುತ್ರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅಪ್ಪನಿಗೆ ಅನುಮತಿ

Last Updated : Oct 8, 2021, 4:56 PM IST

ABOUT THE AUTHOR

...view details