ಕರ್ನಾಟಕ

karnataka

ರಾಹುಲ್​​ ಗಾಂಧಿ ಅವರನ್ನು ಯಾವ ಕಾನೂನಿನ ಅಡಿ ಬಂಧಿಸುತ್ತಾರೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ

By

Published : Jun 15, 2022, 2:34 PM IST

ಇಡಿಯಿಂದ ಸತತ 3ನೇ ದಿನ ರಾಹುಲ್ ಗಾಂಧಿ ವಿಚಾರಣೆ ಮಾಡುತ್ತಿದ್ದಾರೆ. ಯಾವ ಕೇಸ್​​ನಲ್ಲಿ ವಿಚಾರಣೆ ಮಾಡುತ್ತಿದ್ದಾರೆ ಎಂದು ಬಿಜೆಪಿಯವರಿಗೂ ಗೊತ್ತಿಲ್ಲ, ಇಡಿಯವರಿಗೂ ಗೊತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದರು.

KPCC spokesperson Priyank Kharge
ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ

ಕಲಬುರಗಿ: ರಾಹುಲ್​​ ಗಾಂಧಿ ಅವರನ್ನು ಯಾವ ಕಾನೂನಿನ ಅಡಿ ಬಂಧನ ಮಾಡುತ್ತಾರೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು ಇಡಿಯಿಂದ ಸತತ 3ನೇ ದಿನ ರಾಹುಲ್ ಗಾಂಧಿ ವಿಚಾರಣೆ ಮಾಡುತ್ತಿದ್ದಾರೆ. ಯಾವ ಕೇಸ್​​ನಲ್ಲಿ ವಿಚಾರಣೆ ಮಾಡುತ್ತಿದ್ದಾರೆ ಎಂದು ಬಿಜೆಪಿಯವರಿಗೂ ಗೊತ್ತಿಲ್ಲ, ಇಡಿಯವರಿಗೂ ಗೊತ್ತಿಲ್ಲ ಎಂದರು.

ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ 90 ಕೋಟಿ ರೂ. ಸಾಲವನ್ನು ನ್ಯಾಷನಲ್ ಹೆರಾಲ್ಡ್​​​​ಗೆ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಕೊಡಬಾರದು ಅಂತಾ ಎಲ್ಲಾದರೂ ಕಾನೂನು ಇದೆಯಾ?, 90 ಕೋಟಿಯಲ್ಲಿ 60 ಕೋಟಿ ಸಂಬಳ ಅದು ಇದು ಅಂತಾ ಕೊಟ್ಟಿದ್ದಾರೆ. ಇನ್ನುಳಿದ ಹಣ ಪ್ರಿಂಟಿಂಗ್ ವೆಚ್ಚ ಇನ್ಫಾಸ್ಟ್ರಕ್ಚರ್ ಸಲುವಾಗಿ ಕೊಟ್ಟಿದ್ದಾರೆ.

ಎಲ್ಲಿ ಮನಿ ಲಾಂಡ್ರಿಂಗ್ ನಲ್ಲಿ ವಿಚಾರಣೆ ಮಾಡ್ತಾರೆ, ಎಲ್ಲಿದೆ ಫೇಮಾ ಎಲ್ಲಿದೆ ಫೆರಾರಿ?. ಕೇವಲ ಟಾರ್ಚರ್ ಕೊಡಲು ವಿಚಾರಣೆ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಈ ರೀತಿ ಮಾಡಲಾಗುತ್ತಿದೆ‌. ಟಿಎಂಸಿ, ಶಿವಸೇನೆ, ಕರ್ನಾಟಕದಲ್ಲಿ ಕಾಂಗ್ರೆಸ್​​ನವರನ್ನ ಟಾರ್ಚರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈಶ್ವರಪ್ಪನ ಮೇಲಿನ ಇಡಿ ಕೇಸ್ ಏನಾಯ್ತು?: ಈಶ್ವರಪ್ಪನ ಮೇಲಿನ ಇಡಿ ಕೇಸ್ ಏನಾಯ್ತು?, ಎಲ್ಲಿದೆ ಅದು?. ಇಡಿ ಕೇಸ್ ಹಾಕಿದ ಮೇಲೆ‌ ಬಿಜೆಪಿ ಸೇರಿದವರ ಕೇಸ್ ಏನಾಯಿತು?. ನಮ್ಮ ನಾಯಕರು ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡ್ತಿದ್ದಾರಲ್ಲ. ಯಾಕಿಷ್ಟು ವಿಳಂಬ ಮಾಡ್ತಿದ್ದೀರಿ?. ಎಲೆಕ್ಷನ್ ಬಂದಾಗ ರಾಬರ್ಟ್ ವಾದ್ರಾ , ಪ್ರಿಯಾಂಕಾ ಗಾಂಧಿ ವಾದ್ರಾ , ರಾಹುಲ್ ಗಾಂಧಿ, ಮಲ್ಲಿಕಾರ್ಜುನ್​ ಖರ್ಗೆ ಅವರನ್ನ ಕರೆದು ವಿಚಾರಣೆ ಮಾಡ್ತಾರೆ. ಕಾನೂನಿಗೆ ಗೌರವ ಕೊಟ್ಟು ವಿಚಾರಣೆಗೆ ಹೋಗುತ್ತಿದ್ದೇವೆ. ಮೋದಿ ಸ್ನೇಹಿತರು ಲಂಡನ್​​ಗೆ ಓಡಿ ಹೋಗಿದ್ದಾರಲ್ಲ. ಅವರನ್ನ ಯಾವಾಗ ಕರೆದು ವಿಚಾರಣೆ ಮಾಡ್ತಾರೆ‌ ಎಂದು ಖರ್ಗೆ ಪ್ರಶ್ನಿಸಿದರು.

ವಿಚಾರಣೆಗೆ ಕರೆದರೆ ಕಾಂಗ್ರೆಸ್​​ನವರು ಯಾಕಿಷ್ಟು ಮಾಡ್ತಿದ್ದಾರೆ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾವು ಯಾರಿಗೂ ಹೆದರಿಲ್ಲ. ಪ್ರತಾಪ್ ಸಿಂಹ ಅವರಿಗೆ ಕೇಳೊದು ಒಂದೇ. ನಾವೇನು ಟೈಮ್ ತೆಗೆದುಕೊಂಡಿದ್ದಿವಾ?, ಅಮಿತ್ ಶಾ, ಮೋದಿ ವಿರುದ್ಧ ಮಾತನಾಡಿದರೆ ಅರೆಸ್ಟ್ ಮಾಡ್ತಿರಾ?, 21 ಕ್ಕೆ ಮೋದಿಯವರು ಮೈಸೂರಿಗೆ ಬರ್ತಿದ್ದಾರಲ್ಲ. ಮೈಸೂರನ್ನ ಪ್ಯಾರಿಸ್ ಮಾಡುತ್ತೇನೆ ಎಂದು ಹೇಳಿದ್ದರಲ್ಲ. ಅದೇನು ಆಯ್ತು ಅಂತಾ ಕೇಳಿ?. ಐಟಿ ಇಡಿಯಲ್ಲ ಏಜೆನ್ಸಿಗಳು ನೋಡಿಕೊಳ್ಳುತ್ತಾರೆ ಎಂದರು.

ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಕೇಸ್ : ಮೂರನೇ ದಿನ ಇಡಿ ಮುಂದೆ ಹಾಜರಾದ ರಾಹುಲ್ ಗಾಂಧಿ

ABOUT THE AUTHOR

...view details