ಕರ್ನಾಟಕ

karnataka

ಮಳೆಯಿಂದ ತುಂಬಿ ಹರಿಯುತ್ತಿರುವ ಹಳ್ಳ: ಹಗ್ಗದ ಸಹಾಯದಿಂದ ಹಳ್ಳ ದಾಟಿದ ಜನ

By

Published : Oct 6, 2021, 4:27 AM IST

ಊರಿಗೆ ಹೋಗಿ ಬರುವಷ್ಟರಲ್ಲಿ ಮಳೆಯಾಗಿ ಹಳ್ಳ ತುಂಬಿದ್ದರಿಂದ ಜನರು ಹಗ್ಗದ ಸಹಾಯದಿಂದ ದಾಟಿ ಬಂದಿದ್ದಾರೆ.

rain
rain

ಕಲಬುರಗಿ: ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಅಫಜಲಪುರ ತಾಲೂಕಿನ ಸಿದನೂರ ಹಳ್ಳ ತುಂಬಿ ಹರಿಯುತ್ತಿದ್ದು, ಪ್ರಾಣ ಪಣಕ್ಕಿಟ್ಟು ಗ್ರಾಮಸ್ಥರು ಹಳ್ಳದಾಟುತ್ತಿದ್ದಾರೆ.

ಸಿದನೂರು ಗ್ರಾಮದಿಂದ ರೇವೂರು ಗ್ರಾಮಕ್ಕೆ ಹೋಗಿದ್ದ ಜನರು, ಮರಳಿ ಬರುವಾಗ ಹಳ್ಳ ತುಂಬಿ ಹರಿಯುತ್ತಿತ್ತು. ಹೀಗಾಗಿ ಹಗ್ಗದ ಸಹಾಯದಿಂದ ಎಂಟು ಜನರು ಹಳ್ಳ ದಾಟಿದ್ದಾರೆ.

ಸೇತುವೆ ಇಲ್ಲದೇ ಇರೋದರಿಂದ ಹಳ್ಳ ದಾಟಲು ಪರದಾಟ ನಡೆದಿದೆ. ಹಳ್ಳ ಬಂದರೆ ರಸ್ತೆ ಸಂಪರ್ಕ ಕಡಿತವಾಗುತ್ತಿದೆ. ಸಿದನೂರು ಮತ್ತು ರೇವೂರು ಗ್ರಾಮದ ನಡುವೆ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ABOUT THE AUTHOR

...view details