ಕರ್ನಾಟಕ

karnataka

ಆರಿದ್ರಾ ಮಳೆಗೆ ತಂಪಾದ ಬಿಸಿಲನಗರಿ: ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ

By

Published : Jul 8, 2022, 6:54 PM IST

ಕಲಬುರಗಿಯಲ್ಲಿ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ನಗರದ ತಗ್ಗು ಜಾಗಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

heavy rain in Kalaburagi
ಆರಿದ್ರಾ ಮಳೆಗೆ ತಂಪಾದ ಬಿಸಿಲನಗರಿ

ಕಲಬುರಗಿ :ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು, ಬಿಸಿಲನಗರಿ ತಂಪಾಗಿದೆ. ಒಂದೆಡೆ ಮಳೆ ರೈತರ ಮೊಗದಲ್ಲಿ ಮಂದಹಾಸ ತಂದರೆ, ಮತ್ತೊಂದೆಡೆ ನಗರದ ರಸ್ತೆಗಳಲ್ಲಿ ನೀರು ತುಂಬಿಕೊಂಡು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ನಗರದ ಆರ್ಚಿಡ್ ಮಾಲ್, ಸೂಪರ್ ಮಾರ್ಕೆಟ್ ಮುಖ್ಯ ರಸ್ತೆ ಸಂಪೂರ್ಣ ಜಲಮಯವಾಗಿದ್ದು. ಚರಡಿ ಭರ್ತಿಯಾಗಿ ರಸ್ತೆ ಮೇಲೆ ನೀರು ಅಡ್ಡಗಟ್ಟಿ ನಿಂತಿದ್ದರಿಂದ ಟ್ರಾಫಿಕ್‌ಜಾಮ್‌ ಉಂಟಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ನಿನ್ನೆ ಏಕಾಏಕಿ ಮಳೆ ಅಬ್ಬರಿಸಿದ್ದರಿಂದ ಬಹುಪಾಲು ತಗ್ಗು ಪ್ರದೇಶಗಳಲ್ಲಿ ನೀರು ಶೇಖರಣೆಗೊಂಡು ಜನ ಪರಾದಾಡಿದ ಪ್ರಸಂಗ ನಡೆಯಿತು.

ರೈತರ ಮೊಗದಲ್ಲಿ ಮಂದಹಾಸ:ಒಂದು ಕಡೆ ಮಳೆಯಿಂದ ಜನಜೀವನ ಅಸ್ತವ್ಯಸ್ತವಾದರೆ‌. ಇನ್ನೊಂದು‌ ಕಡೆ ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಮಳೆಗಾಗಿ ಚಾತಕ ಪಕ್ಷಿಯಂತೆ ಕಾದುಕುಳಿತಿದ್ದ ರೈತರ ಮುಖದಲ್ಲಿ ಮಂದಹಾಸ ಹುಟ್ಟಿದೆ. ವರುಣನ ಕೃಪೆಯಿಂದಾಗಿ ರೈತರು ಬಿತ್ತನೆ ಆರಂಭಿಸಿದ್ದಾರೆ.

ಇದನ್ನೂ ಓದಿ:ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಳ: ರೈತರಲ್ಲಿ ಮಂದಹಾಸ

ABOUT THE AUTHOR

...view details