ಕರ್ನಾಟಕ

karnataka

ಪ್ರತಿಕೂಲ ಹವಾಮಾನ: ಕಲಬುರಗಿಗೆ ಬಂದಿಳಿಯಬೇಕಿದ್ದ ವಿಮಾನ ಹೈದರಾಬಾದ್​ನಲ್ಲಿ ಲ್ಯಾಂಡ್​

By

Published : Nov 21, 2021, 7:13 PM IST

ಪ್ರತಿಕೂಲ ಹವಾಮಾನ(extreme weather) ಹಿನ್ನೆಲೆ, ಕಲಬುರಗಿಗೆ ಬಂದಿಳಿಯಬೇಕಿದ್ದ ವಿಮಾನ ಹೈದರಾಬಾದ್​ನಲ್ಲಿ ಲ್ಯಾಂಡ್ ಆಗಿದೆ.

rain in kalburgi
ಕಲಬುರಗಿಯಲ್ಲಿ ಮಳೆ

ಕಲಬುರಗಿ: ಜಿಲ್ಲೆಯಲ್ಲಿ ಮಳೆ (rain in Kalaburagi) ಮುಂದುವರಿದಿದೆ. ಪ್ರತಿಕೂಲ ಹವಾಮಾನ(extreme weather) ವಿಮಾನಯಾನಕ್ಕೂ ಅಡ್ಡಿಪಡಿಸಿದೆ. ಕಲಬುರಗಿಗೆ ಬಂದಿಳಿಯಬೇಕಿದ್ದ ಫ್ಲೈಟ್​​ ತೆಲಂಗಾಣದ ರಾಜಧಾನಿ ಹೈದರಾಬಾದ್​ನಲ್ಲಿ ಲ್ಯಾಂಡ್ ಆಗಿದೆ.

ಹವಾಮಾನ ವೈಪರಿತ್ಯ ಹಿನ್ನೆಲೆ ಬೆಂಗಳೂರಿನ ಕೆಐಎಎಲ್ ಏರ್‌ಪೋರ್ಟ್​(Bengaluru KIAL Airport)​​ನಿಂದ ಹೊರಟ ಸ್ಟಾರ್ ವಿಮಾನ ಕಲಬುರಗಿ ಏರ್‌ಪೋರ್ಟ್​​​(Kalaburagi Airport)ನಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗಿಲ್ಲ. ದಟ್ಟ ಮೋಡಗಳು ಆವರಿಸಿ ಸಿಗ್ನಲ್ ಸಿಗದಿದ್ದಾಗ ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ಹೈದರಾಬಾದ್ ಏರ್​​ರ್ಪೋರ್ಟ್‌(Hyderabad Airport)ನಲ್ಲಿ ಲ್ಯಾಂಡ್ ಮಾಡಲಾಗಿದೆ. ಹೈದರಾಬಾದ್ ಏರ್‌ಪೋರ್ಟ್​​​‌ನಿಂದ ಪ್ರಯಾಣಿಕರು ರಸ್ತೆ ಪ್ರಯಾಣದ ಮೂಲಕ ಕಲಬುರಗಿಗೆ ಆಗಮಿಸುತ್ತಿದ್ದಾರೆ.

ಮತ್ತೊಂದೆಡೆ ಬೀದರ್ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ನಡೆಯಲಿರುವ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಶೇಷ ವಿಮಾನದ ಮೂಲಕ ಕಲಬುರಗಿಗೆ ಬಂದು ತಲುಪಿದ್ದಾರೆ. ಸಂಜೆ 4.30 ರ ಸುಮಾರಿಗೆ ಬೆಂಗಳೂರಿನಿಂದ ಹೊರಟ ವಿಮಾನ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿ ಕಲಬುರಗಿಯಲ್ಲಿ ಲ್ಯಾಂಡ್ ಆಗಿದೆ. ಸಿಗ್ನಲ್ ಸಿಗದಿದ್ರೆ ಕಲಬುರಗಿ ಬದಲಾಗಿ ಹೈದರಾಬಾದ್​​ನಲ್ಲಿ ಲ್ಯಾಂಡ್ ಮಾಡಲು ನಿರ್ಧರಿಸಲಾಗಿತ್ತು. ಆದ್ರೆ ಸಿಗ್ನಲ್ ದೊರೆತ ಹಿನ್ನೆಲೆ ಕಲಬುರಗಿಯ ಸರಡಗಿ ವಿಮಾನ ನಿಲ್ದಾಣದಲ್ಲಿಯೇ ವಿಮಾನ ಲ್ಯಾಂಡ್ ಆಗಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ವರುಣಾರ್ಭಟ: ಮತ್ತೆ ಕೊಚ್ಚಿ ಹೋದ ನಂದಿ ಬೆಟ್ಟದ ಮಾರ್ಗ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಹಿನ್ನೆಲೆ ರಾಜ್ಯದ ಹಲವೆಡೆ ಮಳೆಯಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತಿದೆ. ಇಂದು ಬೆಳಗ್ಗೆಯಿಂದಲೇ ಕಲಬುರಗಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.

ABOUT THE AUTHOR

...view details