ಕರ್ನಾಟಕ

karnataka

ಕಲಬುರಗಿ: ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು.. ಅಸಹಾಯಕರಾದ ಜನ, ಜೆಸ್ಕಾಂ ವಿರುದ್ಧ ಆಕ್ರೋಶ

By

Published : Sep 30, 2021, 7:14 AM IST

ಪಾರ್ಕ್​​ನಲ್ಲಿ ಆಟವಾಡುತ್ತಿರುವಾಗ ವಿದ್ಯುತ್​​ ತಗುಲಿ ಆರು ವರ್ಷದ ಬಾಲಕ ಸಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

kalaburagi death case
ಕಲಬುರಗಿ ಮೃತ ಪ್ರಕರಣ

ಕಲಬುರಗಿ: ಪಾರ್ಕ್​​ನಲ್ಲಿ ಆಟ ಆಡುತ್ತಿರುವಾಗ ವಿದ್ಯುತ್ ಸ್ಪರ್ಶಿಸಿ ಬಾಲಕನೊಬ್ಬ ಸಾವನ್ನಪಿರುವ ಘಟನೆ ಕಲಬುರಗಿ ನಗರದ ಎನ್.ಜಿ.ಓ ಕಾಲೋನಿ ಗಾರ್ಡನ್‌ನಲ್ಲಿ ನಡೆದಿದೆ.

ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ಆರು ವರ್ಷದ ಬಾಲಕ ಸಿದ್ದು ಮೃತ ದುರ್ದೈವಿ. ಪಾರ್ಕ್​​ನಲ್ಲಿ ಆಟವಾಡುತ್ತಿರುವಾಗ ವಿದ್ಯುತ್​​ ತಗುಲಿ ಸಾವನಪ್ಪಿದ್ದಾನೆ. ಮಳೆಯಿಂದ ವದ್ದೆಯಾಗಿದ್ದ ಗಾರ್ಡನ್‌ನಲ್ಲಿನ ವಿದ್ಯುತ್ ಕಂಬದಲ್ಲಿ ಕರೆಂಟ್ ಹರಿದಿದೆ. ಆಟವಾಡುತ್ತಿರುವಾಗ ಬಾಲಕ ಕರೆಂಟ್ ಕಂಬಕ್ಕೆ ಜೋತು ಬಿದ್ದಿದ್ದಾನೆ. ಈ ವೇಳೆ ಬಾಲಕ ಸಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಇದನ್ನೂ ಓದಿ:ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಗೆ ನ್ಯಾಯಾಂಗ ಬಂಧನ

ಜೆಸ್ಕಾಂ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಬಡಾವಣೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಕಣ್ಣೆದುರೇ ಬಾಲಕ ವಿದ್ಯುತ್ ತಗುಲಿ ಸಾವನಪ್ಪುತ್ತಿದ್ದರೂ, ಕಣ್ಣಾರೆ ಕಂಡರೂ ಸಹ ಏನು ಮಾಡಲಾಗದ ಸ್ಥಿತಿ ಎದುರಾದ ಹಿನ್ನೆಲೆ ಜನ ಮರುಗಿದ್ದಾರೆ.

ABOUT THE AUTHOR

...view details