ಕರ್ನಾಟಕ

karnataka

ಅಪ್ಪು ಫೋಟೋಗೆ ಶಾಲು ಹೊದಿಸಿ, ಹೂ ಮಾಲೆ ಹಾಕಿ ಸಿದ್ಧಶ್ರೀ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ 'ಪರಮಾತ್ಮ'ನ ಧ್ಯಾನ

By

Published : Dec 3, 2021, 2:29 PM IST

Updated : Dec 3, 2021, 6:11 PM IST

ಶ್ರೀ ಮುರುಘರಾಜೇಂದ್ರ ಸ್ವಾಮೀಜಿಗಳ 37ನೇ ಗುರುವಂದನಾ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಸಿದ್ಧಶ್ರೀ ಪ್ರಶಸ್ತಿಯನ್ನು ನಟ ಪುನೀತ್ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ಪ್ರದಾನ ಮಾಡಲಾಯಿತು..

Sri Murugarajendra Swamiji's 37th Guruvandana Program
ಶ್ರೀ ಮುರುಘರಾಜೇಂದ್ರ ಸ್ವಾಮೀಜಿಗಳ 37ನೇ ಗುರುವಂದನಾ ಕಾರ್ಯಕ್ರಮ

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಗ್ರಾಮದಲ್ಲಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿಗಳ 37ನೇ ಗುರುವಂದನಾ ಕಾರ್ಯಕ್ರಮ ಜರುಗಿತು.‌

ಸಿದ್ಧಶ್ರೀ ಪ್ರಶಸ್ತಿ ಪ್ರದಾನ :ಮಠದಿಂದ ಪ್ರತಿ ವರ್ಷ ಕೊಡಲಾಗುವ ಪ್ರತಿಷ್ಠಿತ ಸಿದ್ಧಶ್ರೀ ಪ್ರಶಸ್ತಿಯನ್ನ ನಟ ಪುನೀತ್ ರಾಜಕುಮಾರ್​ ಅವರಿಗೆ ಅವರ ನಿಧನಕ್ಕೂ ಮೊದಲೇ ಕೊಡಲು ನಿರ್ಧರಿಸಲಾಗಿತ್ತು.

ಆದರೆ, ಅಪ್ಪು ಅವರ ಅಕಾಲಿಕ ನಿಧನದಿಂದ ಇದೀಗ ಮರಣೋತ್ತರವಾಗಿ ಗುರುವಂದನಾ ಕಾರ್ಯಕ್ರಮದಲ್ಲಿ ದಿ. ಪುನೀತ್ ರಾಜ್​​​ಕುಮಾರ್​ ಅವರಿಗೆ ಕುಟುಂಬದವರ ಅನುಪಸ್ಥಿತಿಯಲ್ಲಿ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದರೆ, ಪುನೀತ್​ ಅವರ ನೆನಪು ಕಾರ್ಯಕ್ರಮದುದ್ದಕ್ಕೂ ಕಾಡುತ್ತಿತ್ತು. ಎಲ್ಲರೂ ಭಾವುಕರಾಗಿದ್ದರು.

ಶ್ರೀ ಮುರುಘರಾಜೇಂದ್ರ ಸ್ವಾಮೀಜಿಗಳ 37ನೇ ಗುರುವಂದನಾ ಕಾರ್ಯಕ್ರಮ

ಖ್ಯಾತ ಗಾಯಕ ವಿಜಯ್​​ ಪ್ರಕಾಶ್, ಲಕ್ಷ್ಮಿ ನಾಗಾರಾಜ್, ನಿರೂಪಕಿ ಅನುಶ್ರೀ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಜಿಡಗಾ ಮಠದ ಭಕ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

''ಅಪ್ಪು 21ನೇ ಶತಮಾನದ ದಾನಶೂರ ಕರ್ಣ''

ಅಪ್ಪು ಭಾವಚಿತ್ರಕ್ಕೆ ಶಾಲು ಹೊದಿಸಿ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಜಿಡಗಾ ಮಠದ ಶ್ರೀ ಮುರುಘರಾಜೇಂದ್ರ ಶಿವಾಚಾರ್ಯರು, ಈ ಬಾರಿಯ ಸಿದ್ಧಶ್ರೀ ಪ್ರಶಸ್ತಿ ನೀಡಲು ಮೊದಲೇ ನಿರ್ಣಯಿಸಲಾಗಿತ್ತು. ಆದ್ರೆ, ದುರ್ದೈವ ಎನ್ನುವಂತೆ ಅಪ್ಪು ನಮ್ಮನ್ನು ಅಗಲಿ ಬಿಟ್ಟರು.

ಅಪ್ಪು ನಮ್ಮಿಂದ ದೂರವಾಗಿಲ್ಲ. ದಾನ, ಧರ್ಮಗಳ ಮೂಲಕ ಎಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. ಎಡಗೈಯಿಂದ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ದಾನ ಮಾಡಿರುವ 21ನೇ ಶತಮಾನದ ದಾನಶೂರ ಕರ್ಣ ನಮ್ಮ ಅಪ್ಪು ಎಂದು ಬಣ್ಣನೆ ಮಾಡಿದರು‌.‌

ವಿಜಯ್​​​ ಪ್ರಕಾಶ್ ಭಾವುಕ​ :ಕಾರ್ಯಕ್ರಮದಲ್ಲಿ ಗೊಂಬೆ ಹೇಳುತೈತೆ ಹಾಡು ಹಾಡುವ ಮುನ್ನ ಖ್ಯಾತ ಗಾಯಕ ವಿಜಯ್​ ಪ್ರಕಾಶ್​​ ಅವರು ಭಾವುಕರಾದರು. ಗೊಂಬೆ ಹೇಳುತೈತೆ ಹಾಡನ್ನು ನಾನು ರಾಜಕುಮಾರ ಅವರಿಗಾಗಿ ಹಾಡಿದ್ದೆ. ಇದೇ ಹಾಡು ಇಂದು ಈ ರೀತಿ ಅಗಲಿದ ಅಪ್ಪು ಅವರಿಗಾಗಿ ಹಾಡುವ ಪ್ರಸಂಗ ಬರಬಹುದೆಂದು ಕಲ್ಪನೆಯೂ ಮಾಡಿರಲಿಲ್ಲ.

ಅಪ್ಪು ನಿಧನರಾದ ನಂತರ ಈ ಹಾಡು ಅಪ್ಪು ಅವರಿಗಾಗಿ ವೇದಿಕೆ ಮೇಲೆ ಇದೇ ಮೊದಲ ಬಾರಿಗೆ ಹಾಡುತ್ತಿರುವುದು. ದಾನ, ಧರ್ಮಗಳ ಮೂಲಕ ಸಮಾಜ ಕಾರ್ಯಗಳ ಮೂಲಕ ಅಪ್ಪು ಸರ್ ಸದಾ ನಮ್ಮೊಂದಿಗೆ ಇದ್ದಾರೆ ಎಂದು ವಿಜಯ್​​ ಪ್ರಕಾಶ್​​ ಭಾವುಕರಾಗಿ ನುಡಿದರು‌.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಸಭೆ ಆರಂಭ : ಒಮಿಕ್ರೋನ್‌ಗೆ ಹೊಸ ಮಾರ್ಗಸೂಚಿ?

Last Updated : Dec 3, 2021, 6:11 PM IST

ABOUT THE AUTHOR

...view details