ಕರ್ನಾಟಕ

karnataka

ಹುಬ್ಬಳ್ಳಿ ಗಲಭೆ: ಮಾಸ್ಟರ್ ಮೈಂಡ್​ಗಳೆಷ್ಟಿದ್ರೂ ಪೊಲೀಸರು ಹಿಡಿದು ಸರಿ ಮಾಡ್ತಾರೆ: ಜೋಶಿ

By

Published : Apr 23, 2022, 3:48 PM IST

ಪೊಲೀಸರು, ಕಾನೂನು ತಮ್ಮ ಕೆಲಸ ಮಾಡುತ್ತಿದೆ. ತಪ್ಪಿತಸ್ಥರನ್ನು, ಕುಮ್ಮಕ್ಕು ಕೊಟ್ಟವರನ್ನು ಹಿಡಿಯಲು ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆ ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

Central Minister Pralhad Joshi
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

ಧಾರವಾಡ: ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಗಲಭೆಯ ಮಾಸ್ಟರ್ ಮೈಂಡ್ ಮೊದಲು ಇವರೇ ಅಂತಿದ್ರು, ಅವರನ್ನು ಹಿಡಿದ ಮೇಲೆ ಬೇರೆಯವರು ಎನ್ನುತ್ತಿದ್ದಾರೆ. ಎಷ್ಟು ಮಾಸ್ಟರ್ ಮೈಂಡ್ ಇದಾವೇನೋ? ಎಷ್ಟೇ ಇದ್ದರೂ ಹಿಡಿದು ತಂದು ಮೈಂಡ್ ಸರಿ ಮಾಡೋ ಕೆಲಸವನ್ನು ಪೊಲೀಸರು ಮಾಡುತ್ತಾರೆ ಎಂದು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಉಳಿದವರನ್ನೂ ಬಂಧಿಸುವ ವಿಚಾರ ಕುರಿತು ಮಾತನಾಡಿದ ಅವರು, ವಿಡಿಯೋ ಕ್ಲಿಪಿಂಗ್ ಎಲ್ಲ ನೋಡಿ ಉಳಿದವರನ್ನು ಬಂಧಿಸಬೇಕಾಗುತ್ತದೆ. ಪೊಲೀಸರು, ಕಾನೂನು ತಮ್ಮ ಕೆಲಸ ಮಾಡುತ್ತಿದೆ. ತಪ್ಪಿತಸ್ಥರನ್ನು, ಕುಮ್ಮಕ್ಕು ಕೊಟ್ಟವರನ್ನು ಹಿಡಿಯಲು ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆಗೆ ಸೂಚನೆ ಕೊಟ್ಟಿದ್ದೆವು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಆ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.

ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

ಯಾರೂ ಹೆಚ್ಚು ಓಲೈಕೆ ಮಾಡುತ್ತಾರೆ ಅವರೇ ಸಿಎಂ ಅಂದುಕೊಂಡಿದ್ದಾರೆ. ದೇಶದಲ್ಲಿ ಓಲೈಕೆ ಮಾಡಿ ಮಾಡಿ ಕಾಂಗ್ರೆಸ್ ಡೆಪಾಸಿಟ್ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. ಯುಪಿಯಲ್ಲಿ 390 ಸ್ಥಾನದಲ್ಲಿ ಸ್ಪರ್ಧಿಸಿತ್ತು. 387ರಲ್ಲಿ ಡಿಪಾಸಿಟ್​ ಕಳೆದುಕೊಂಡಿದ್ದಾರೆ. ಉತ್ತರಾಖಂಡ್, ಮಣಿಪುರ, ಗೋವಾದಲ್ಲಿನ ಪರಿಸ್ಥಿತಿಯೂ ಹಾಗೆಯೇ ಆಗಿದೆ. ಹೀಗಾಗಿ ಕರ್ನಾಟಕದಲ್ಲಿಯಾದರೂ ಉಳಿಸಿಕೊಳ್ಳಬೇಕಿದೆ. ಅದಕ್ಕಾಗಿ ಸಿಎಂ ಆಗುವ ಸ್ಪರ್ಧೆಯಲ್ಲಿದ್ದಾರೆ. ಇದು ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆ ಎಂದು ಟೀಕಿಸಿದರು.

ಇದನ್ನೂ ಓದಿ:ವಾಸೀಂ ಪಠಾಣ್ ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ; ಸಬ್ ಜೈಲಿಗೆ ಶಿಫ್ಟ್

ABOUT THE AUTHOR

...view details