ಕರ್ನಾಟಕ

karnataka

ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ಜೊತೆಗೆ ಚರ್ಚಿಸಿ ನಿರ್ಧಾರ: ಸಿಎಂ

By

Published : Feb 28, 2022, 1:19 PM IST

Updated : Feb 28, 2022, 1:45 PM IST

ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ, ವೀರ ಮಹಿಳೆಯರ ಕುರಿತ ಪಾಠ ಅಳವಡಿಕೆಗೆ ಕ್ರಮ, ಹೊರಟ್ಟಿ ಬಿಜೆಪಿ ಸೇರುವ ಕುರಿತ ಊಹಾಪೋಹದ ವಿಚಾರವಾಗಿ ಮಾತನಾಡಿದರು.

cm-basvaraj-bommai-visits-prahlad-joshi
ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ರಾಜ್ಯ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ವರಿಷ್ಠರ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಬಸವರಾಜ ಹೊರಟ್ಟಿ ಬಿಜೆಪಿ ಸೇರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಹೊರಟ್ಟಿಯವರು ಬಹಳ ಅನುಭವಿ ರಾಜಕಾರಣಿ. ಸಭಾಪತಿಯಾಗಿ ಕೆಲಸ‌ ಮಾಡಿದ್ದಾರೆ. ಅವರ ರಾಜಕೀಯ ನಡೆ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರೆಲ್ಲೂ ಇನ್ನೂ ಬಹಿರಂಗ ಹೇಳಿಕೆ‌ ನೀಡಿಲ್ಲ. ಅವರು ಸೂಕ್ತವಾದ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.


ವೀರ ಮಹಿಳೆಯರ ಕುರಿತ ಪಾಠ ಅಳವಡಿಕೆಗೆ ಕ್ರಮ:ಮುಂದಿನ ಪೀಳಿಗೆಗೆ ನಾಡಿನ ವೀರ ಮಹಿಳೆಯರಾದ ಬೆಳವಾಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕನ ಕುರಿತಾದ ಪಾಠಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗುವುದು ಎಂದು ಸಿಎಂ ತಿಳಿಸಿದರು.

ನಿನ್ನೆ ಕೆಳದಿ ಚೆನ್ನಮ್ಮನ ಪಟ್ಟಾಭಿಷೇಕದ 350ನೇ ವರ್ಷದ ಆಚರಣೆಯನ್ನೂ ಮಾಡಿದ್ದೇವೆ. ಕರ್ನಾಟಕಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಅದು ಇಂದಿನ ಪೀಳಿಗೆಗೆ ತಿಳಿಸಬೇಕಿದೆ. ಕಿತ್ತೂರು ರಾಣಿ ಚೆನ್ನಮ್ಮರಿಂದ ಮೊದಲುಗೊಂಡು ಮಹಿಳೆಯರ ಪಾತ್ರವನ್ನು ಪ್ರಮುಖವಾಗಿ ಯುವಜನಾಂಗಕ್ಕೆ ತಿಳಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸಚಿವ ಜೋಶಿ ಹೇಳಿಕೆ: ಸಾವಿರಾರು ಕೋಟಿ ಅನುದಾನವನ್ನ ಮೋದಿ ಸರ್ಕಾರ ರಾಜ್ಯಕ್ಕೆ ನೀಡಿದೆ. ಏಕಪಥ ರಸ್ತೆಯನ್ನ ಷಟ್ಪಥ ರಸ್ತೆಯನ್ನಾಗಿ ಮಾಡ್ತಿದ್ದೇವೆ. ಬೊಮ್ಮಾಯಿ ಅವರ ಆಗ್ರಹದಿಂದ ಈ ರೀತಿ ಅನುದಾನ ಬರ್ತಿದೆ‌. ಸಿಎಂ, ನಾವು ಸ್ನೇಹಿತರು. ಹೀಗಾಗಿ ನಮ್ಮ ಮನೆಗೆ ತಿಂಡಿ ತಿನ್ನಲು ಬಂದಿದ್ದಾರೆ. ಅದರೆಲ್ಲೇನು ವಿಶೇಷತೆ ಇಲ್ಲ, ಇಲ್ಲಿಂದ ಎಲ್ಲರೂ ಬೆಳಗಾವಿಗೆ ಹೋಗುತ್ತಿದ್ದೇವೆ. ರಾಜ್ಯದ ಪರವಾಗಿ ಗಡ್ಕರಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇದನ್ನೂ ಓದಿ :ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ; ಉಕ್ರೇನ್‌ನಿಂದ ಭಾರತೀಯರನ್ನ ಕರೆತರಲು ಅಗತ್ಯ ಕ್ರಮದ ಚರ್ಚೆ

Last Updated : Feb 28, 2022, 1:45 PM IST

ABOUT THE AUTHOR

...view details