ಕರ್ನಾಟಕ

karnataka

ಹುಬ್ಬಳ್ಳಿ: ಬಸ್​ಗಾಗಿ ಕಾಯುತಿದ್ದ ಮಹಿಳೆ ಮೇಲೆ ಹರಿದ ಬಸ್, ಸ್ಥಳದಲ್ಲಿಯೇ ಸಾವು

By

Published : Oct 3, 2021, 4:50 PM IST

Updated : Oct 3, 2021, 5:49 PM IST

ಮೃತ ಮಹಿಳೆಯನ್ನು ನವಲಗುಂದ ಪಟ್ಟಣದ ಜೈನ್ ದೇವಸ್ಥಾನ ಹತ್ತಿರದ ನಿವಾಸಿ ಸುಜಾತಾ ಪಾಟೀಲ್ ಎಂದು ಗುರುತಿಸಲಾಗಿದೆ. ಮಹಿಳೆ ನವಲಗುಂದ ಕಡೆ ಹೋಗುವ ಬಸ್​ಗಾಗಿ ಕಾಯುತಿದ್ದಾಗ ಹುಬ್ಬಳ್ಳಿ- ಬೆಳಗಾವಿ ಬಸ್ ಮಹಿಳೆ ಮೇಲೆ ಹರಿದಿದೆ ಎನ್ನಲಾಗ್ತಿದೆ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ :ಬಸ್ ಹಾಯ್ದು ಮಹಿಳೆಯೊಬ್ಬಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್​​ ಹರಿದು ಮೃತಪಟ್ಟ ಮಹಿಳೆ ಸುಜಾತಾ ಪಾಟೀಲ್ ಎಂದು ಗುರುತಿಸಲಾಗಿದೆ

ಮೃತ ಮಹಿಳೆಯನ್ನು ನವಲಗುಂದ ಪಟ್ಟಣದ ಜೈನ್ ದೇವಸ್ಥಾನ ಹತ್ತಿರದ ನಿವಾಸಿ ಸುಜಾತಾ ಪಾಟೀಲ್ ಎಂದು ಗುರುತಿಸಲಾಗಿದೆ. ಮಹಿಳೆ ನವಲಗುಂದ ಕಡೆ ಹೋಗುವ ಬಸ್​ಗಾಗಿ ಕಾಯುತಿದ್ದಾಗ ಹುಬ್ಬಳ್ಳಿ- ಬೆಳಗಾವಿ ಬಸ್ ಮಹಿಳೆ ಮೇಲೆ ಹರಿದಿದೆ ಎನ್ನಲಾಗ್ತಿದೆ.

ಬಸ್ ಚಾಲಕ ಪ್ಲಾಟ್ ಫಾರಂಗೆ ಬಸ್ ನಿಲ್ಲಿಸುವಾಗ ಹಿಂದೆ ನಿಂತ ಮಹಿಳೆಯನ್ನು ಗಮನಿಸಿಲ್ಲ. ಹಾಗೇ ಬಸ್ ಚಲಾಯಿಸಿದ್ದರಿಂದ ಹಿಂಭಾಗದಲ್ಲಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದಂತೆ ಗೋಕುಲ ರೋಡ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Last Updated : Oct 3, 2021, 5:49 PM IST

ABOUT THE AUTHOR

...view details