ಕರ್ನಾಟಕ

karnataka

ಶಾ ಭೇಟಿಗೆ ಅವಕಾಶ ಸಿಗದೇ ಕಾಲ್ಕಿತ್ತ ರಮೇಶ್ ಜಾರಕಿಹೊಳಿ ಅಂಡ್‌ ಟೀಂ..

By

Published : Jan 18, 2020, 11:44 PM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಸನ್ಮಾನ ಮಾಡಿದ್ದೇನೆ. ಸಂಪುಟ ವಿಸ್ತರಣೆಯ ಬಗ್ಗೆ ರಾಜ್ಯದ ನಾಯಕರು ಚರ್ಚೆ ಮಾಡುತ್ತಾರೆ ಎಂದು ಹಿರೇಕೆರೂರು ಶಾಸಕ ಬಿ ಸಿ‌ ಪಾಟೀಲ್ ಹೇಳಿದರು.

Amit Sha
ರಮೇಶ್​ ಜಾರಕಿಹೊಳಿ​

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಸನ್ಮಾನ ಮಾಡಿದ್ದೇನೆ. ಸಂಪುಟ ವಿಸ್ತರಣೆಯ ಬಗ್ಗೆ ರಾಜ್ಯದ ನಾಯಕರು ಚರ್ಚೆ ಮಾಡುತ್ತಾರೆ ಎಂದು ಹಿರೇಕೆರೂರು ಶಾಸಕ ಬಿ ಸಿ‌ ಪಾಟೀಲ್ ಹೇಳಿದರು.

ಶಾ ಭೇಟಿಗೆ ಅವಕಾಶ ಸಿಗದೇ ಹೋಟೆಲ್‌ನಿಂದ ಕಾಲ್ಕಿತ್ತ ರಮೇಶ್‌ ಜಾರಕಿಹೊಳಿ ಅಂಡ್‌ ಟೀಂ..

ನಗರದ ಖಾಸಗಿ ಹೋಟೆಲ್​ನಲ್ಲಿ ಅಮಿತ್ ಶಾ ಭೇಟಿಯಾಗಿ ಮಾತನಾಡಿದ ಅವರು, ರಮೇಶ್​ ಜಾರಕಿಹೊಳಿ ಸಹ ಶಾ ಭೇಟಿಯಾಗಿದ್ದಾರೆ ಎಂದರು.ಆದರೆ, ಅಮಿತ್ ಶಾ ಭೇಟಿಗೆ ಅವಕಾಶ ನೀಡಿದ್ರಾ ಎಂಬ ಮಾಧ್ಯಮದವರ ಪ್ರಶ್ನೆಗೆ ರಮೇಶ್​ ಜಾರಕಿಹೊಳಿ ಪ್ರತಿಕ್ರಿಯಿಸಿ, ನನಗೆ ಅವರು ಸಮಯ ಕೊಟ್ಟಿಲ್ಲ ಎಂದರು. ಕಳೆದ ಒಂದು ಗಂಟೆಗೂ‌ ಹೆಚ್ಚು ಕಾಲ ಭೇಟಿ ಮಾಡಲು ರಮೇಶ್​ ಹಾಗೂ ತಂಡ ಕಾಯುತ್ತಾ ನಿಂತಿತ್ತು. ಅಮಿತ್ ಶಾ ಭೇಟಿಗೆ ನಿರಾಕರಣೆ ಹಿನ್ನೆಲೆಯಲ್ಲಿ ರಮೇಶ್​ ಜಾರಕಿಹೊಳಿ, ಶ್ರೀಮಂತ್​ ಪಾಟೀಲ್ ಹಾಗೂ ಮಹೇಶ್​ ಕುಮಟಳ್ಳಿ ಖಾಸಗಿ ಹೋಟೆಲ್‌ನಿಂದ ಕಾಲ್ಕಿತ್ತರು.

ಬಳಿಕ ಶ್ರೀಮಂತ್​ ಪಾಟೀಲ್ ಮಾತನಾಡಿ, ಸಂಪುಟ ವಿಸ್ತರಣೆ ಬಗ್ಗೆ ಅವಸರ ಇಲ್ಲ. ಸಂಪುಟ ವಿಸ್ತರಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಸಚಿವ ಸ್ಥಾನದ ಭರವಸೆ ಇದೆ. ಆದರೆ, ಯಾವಾಗ ಎಂಬುದು ಗೊತ್ತಿಲ್ಲ. ಭರವಸೆ ಕೊಟ್ಟಿದ್ದಾರೆ. ಮತ್ತೆ ಆ ಬಗ್ಗೆ ಚರ್ಚೆ ಮಾಡಿಲ್ಲ ಎಂದು ತಿಳಿಸಿದ್ರು.

Intro:ಹುಬ್ಬಳ್ಳಿ-13


ಅಮಿತ್ ಶಾ ಭೇಟಿಯಾಗಿ ಸನ್ಮಾನ ಮಾಡಿದ್ದೇನೆ.
ಸಂಪುಟ ವಿಸ್ತರಣೆ ಬಗ್ಗೆ ರಾಜ್ಯದ ನಾಯಕರು ಚರ್ಚೆ ಮಾಡುತ್ತಾರೆ ಎಂದು ಹಿರೇಕೆರೂರು ಶಾಸಕ ಬಿ ಸಿ‌ ಪಾಟೀಲ್ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಅಮಿತ್ ಶಾ ಭೇಟಿಯಾಗಿ ಮಾತನಾಡಿದ ಅವರು ಈ ರಮೇಶ ಜಾರಕಿಹೊಳಿ ಸಹ ಶಾ ಭೇಟಿಯಾಗಿದ್ದಾರೆ ಎಂದರು.

ಆದ್ರೆ ಅಮಿತ್ ಭೇಟಿಗೆ ಅವಕಾಶ ನೀಡಿದ್ರಾ ಎಂಬ ಮಾಧ್ಯಮದವರ ಪ್ರಶ್ನೆಗೆ
ರಮೇಶ ಜಾರಕಿಹೋಳೀ
ನನಗೆ ಅವರು ಸಮಯ ಕೊಟ್ಟಿಲ್ಲ ಎಂದ ರಮೇಶ ಜಾರಕಿಹೊಳಿ, ನಿಮಗೆ ನೆಗಟಿವ್ ಬೇಕು, ಅದನ್ನೇ ಹಾಕಿಕೊಳ್ಳಿ ಎಂದ‌ ಜಾರಕಿಹೊಳಿ ಎಂದರು.

ಅಮಿತ್ ಶಾ ಭೇಟಿ ನಿರಾಕರಣೆ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ ಅವರ ಟೀಂ ಅಲ್ಲಿಂದ ಹೊಟೇಲ್ ನಿಂದ ಕಾಲ್ಕಿತ್ತಿದೆ.
ಕಳೆದ ಒಂದು ಗಂಟೆಗೂ‌ ಹೆಚ್ಚು ಕಾಲ ಒಂಟಿ ಕಾಲಿನಲ್ಲಿ‌ ನಿಂತಿದ್ದ ರಮೇಶ ಆ್ಯಂಡ್ ಟೀಂ
ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ್, ‌ಮಹೇಶ ಕುಮಟೊಳ್ಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.

ಬಳಿಕ ಶ್ರೀಮಂತ ಪಾಟೀಲ್ ಮಾತನಾಡಿ,ಸಂಪುಟ ವಿಸ್ತರಣೆ ಬಗ್ಗೆ ಅವಸರ ಇಲ್ಲ.
ಸಂಪುಟ ವಿಸ್ತರಣೆ ಹೈಕಮಾಂಡಗೆ ಬಿಟ್ಟದು.
ಸಚಿವ ಸ್ಥಾನದ ಭರವಸೆ ಇದೆ.
ಆದರೇ ಯಾವಾಗ ಎಂಬುದು ಗೊತ್ತಿಲ್ಲ. ಭರವಸೆ ಕೊಟ್ಟಿದ್ದಾರೆ. ಮತ್ತೆ ಆ ಬಗ್ಗೆ ಚರ್ಚೆ ಮಾಡಿಲ್ಲ ಎಂದು ತೇಪೆ ಹಚ್ಚಿದರು.

ಬೈಟ್- ಬಿ ಸಿ‌ ಪಾಟೀಲ್ , ಶಾಸಕ
ಬೈಟ್ - ಶ್ರೀಮಂತ ಪಾಟೀಲ್, ಶಾಸಕBody:H B GaddadConclusion:Etv hubli

ABOUT THE AUTHOR

...view details