ಕರ್ನಾಟಕ

karnataka

ಸಾಮರಸ್ಯ ಮೆರೆದ ಸಿದ್ದರಾಮಯ್ಯ: ಹುಟ್ಟುಹಬ್ಬದಂದು ದೇವಸ್ಥಾನ, ದರ್ಗಾಕ್ಕೆ ಭೇಟಿ

By

Published : Aug 4, 2022, 8:54 AM IST

Siddaramaiah
ದೇವಸ್ಥಾನ ಮತ್ತು ದರ್ಗಾಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ()

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ಜನ್ಮ ದಿನದ ನಿಮಿತ್ತ ದಾವಣಗೆರೆ ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ದಾವಣಗೆರೆ: ನಿನ್ನೆ ಸಿದ್ದರಾಮಯ್ಯ 75 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡರು. ದಾವಣಗೆರೆಯಲ್ಲಿ ನಡೆದ ಅಮೃತ‌ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಮುನ್ನ ಜನ್ಮ ದಿನದ ಪ್ರಯುಕ್ತ ಟೆಂಪಲ್ ರನ್ ಮಾಡಿ ಬಳಿಕ ದರ್ಗಾಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಾಮರಸ್ಯ ಮೆರೆದರು.

ಹೌದು, ದಾವಣಗೆರೆಗೆ ಆಗಮಿಸಿದ‌ ಸಿದ್ದರಾಮಯ್ಯ ಮೊದಲು ಜಿಲ್ಲೆಯ ಅಧಿದೇವತೆ ದುರ್ಗಾಂಭಿಕ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಖಡಕ್ ಷಾ ವಲಿ ದರ್ಗಾಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ ಹಿಂದೂ - ಮುಸ್ಲಿಂ ಸಾಮರಸ್ಯದ ಸಂದೇಶ ರವಾನಿಸಿದರು.

ದರ್ಗಾದಲ್ಲಿ ಖಾಜಿಯವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅ ದೇವರು ಆಯುಷ್ಯ ಆರೋಗ್ಯವನ್ನು ಕರುಣಿಸಲಿ. ಒಳ್ಳೆದಾಗಲಿ, ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಕೈ ಕಾರ್ಯಕರ್ತರು, ಕೈ ಮುಖಂಡರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆ ಹಾಕಿದರು.

ಸಿರಿಗೆರೆ ಮಠಕ್ಕೆ ಸಿದ್ದರಾಮಯ್ಯ ಭೇಟಿ: ಇದೇ ಸಂದರ್ಭದಲ್ಲಿ ಸಿರಿಗೆರೆ ಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ತರಳಬಾಳು ಶ್ರೀಗಳನ್ನು ಭೇಟಿ ಮಾಡಿ ಆಶಿರ್ವಾದ ಪಡೆದರು. ಈ ವೇಳೆ ಶ್ರೀಗಳು ಸಿದ್ದರಾಮಯ್ಯನವರಿಗೆ ಹೂಮಾಲೆ ಹಾಕಿ ಸನ್ಮಾನಿಸಿದರು.

ಇದನ್ನೂ ಓದಿ:ಸಿದ್ದರಾಮಯ್ಯ ಅಮೃತ ಮಹೋತ್ಸವ: ಬೆಣ್ಣೆ ನಗರಿಗೆ ಹರಿದು ಬಂದ ಜನಸಾಗರ,ಕಾಂಗ್ರೆಸ್​ ಶಕ್ತಿ‌ ಪ್ರದರ್ಶನ

ABOUT THE AUTHOR

...view details