ಕರ್ನಾಟಕ

karnataka

ಸಿದ್ದರಾಮಯ್ಯ ಜೋಕರ್​​.. ಅಲ್ಲಲ್ಲ ಕ್ಷಮಿಸಿ.. ಸಿಎಂ ಇಬ್ರಾಹಿಂ​ ಒಬ್ಬ ಜೋಕರ್​​​​ : ಎಂ ಪಿ ರೇಣುಕಾಚಾರ್ಯ​​​

By

Published : Oct 16, 2021, 8:24 PM IST

ಸಿಎಂ ಇಬ್ರಾಹಿಂ ಅವರ ಕುರಿತು ಮಾತನಾಡುವ ಭರದಲ್ಲಿ ಸಿದ್ದರಾಮಯ್ಯ ಜೋಕರ್​​​ ಎಂದರು. ನಂತರ ತಮ್ಮ ತಪ್ಪಿನ ಅರಿವಾಗಿ, ಕ್ಷಮೆ ಇರಲಿ ಸಿದ್ದರಾಮಯ್ಯ ಅಲ್ಲ, ಸಿಎಂ ಇಬ್ರಾಹಿಂ ಜೋಕರ್​​ ಎಂದು ರೇಣುಕಾಚಾರ್ಯ ಯೂ ಟರ್ನ್ ಹೊಡೆದರು. ವಿಪಕ್ಷ ನಾಯಕನ ಮೇಲೆ ನಮಗೆ ಗೌರವ ಇದೆ ಅಂದರು..

renukacharya-statement-on-siddaramiah
ರೇಣುಕಾಚಾರ್ಯ

ದಾವಣಗೆರೆ :ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಶಾಸಕ ರೇಣುಕಾಚಾರ್ಯ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಜೋಕರ್​​ ಎಂದು ಕರೆದ ಪ್ರಸಂಗ ನಡೆಯಿತು.

ಸಿದ್ದರಾಮಯ್ಯ ಕುರಿತು ರೇಣುಕಾಚಾರ್ಯ ಹೇಳಿಕೆ

ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಮಾತನಾಡಿದ ಅವರು, ಹೆಚ್​​​ಡಿಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅದಕ್ಕೆ ಆರ್​ಆರ್​​ಎಸ್​​ ಬಗ್ಗೆ ಮಾತನಾಡುತ್ತಾರೆ ಎಂದು ಹೆಚ್​​ಡಿಕೆ ವಿರುದ್ದ ವಾಗ್ದಾಳಿ ನಡೆಸಿದರು.

ಬಳಿಕ ಸಿಎಂ ಇಬ್ರಾಹಿಂ ಅವರ ಕುರಿತು ಮಾತನಾಡುವ ಭರದಲ್ಲಿ ಸಿದ್ದರಾಮಯ್ಯ ಜೋಕರ್​​​ ಎಂದರು. ನಂತರ ತಮ್ಮ ತಪ್ಪಿನ ಅರಿವಾಗಿ, ಕ್ಷಮೆ ಇರಲಿ ಸಿದ್ದರಾಮಯ್ಯ ಅಲ್ಲ, ಸಿಎಂ ಇಬ್ರಾಹಿಂ ಜೋಕರ್​​ ಎಂದು ರೇಣುಕಾಚಾರ್ಯ ಯೂ ಟರ್ನ್ ಹೊಡೆದರು. ವಿಪಕ್ಷ ನಾಯಕನ ಮೇಲೆ ನಮಗೆ ಗೌರವ ಇದೆ ಅಂದರು.

ಅತಿವೃಷ್ಠಿ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನವರು ಸಮಾಜ ಸೇವೆ ಮಾಡಿದ್ದಾರೆ. ಹಿಂದುತ್ವ ನಮ್ಮದು ಎಂದು ಹೋರಾಟ ಮಾಡಿದ್ದಾರೆ. ಅವರಿಗೆ ಸೆನೆಟ್ ಮೆಂಬರ್ ಮಾಡೋದ್ರಲ್ಲಿ ತಪ್ಪೇನಿದೆ. ಭಯೋತ್ಪಾದಕರಿಗೆ ಸೆನೆಟ್ ಮೆಂಬರ್ ಕೊಡಬೇಕಾ. ಆರ್‌ಎಸ್‌ಎಸ್ ದೇಶ ಭಕ್ತ ಸಂಸ್ಥೆ, ಅದರ ಬಗ್ಗೆ ಮಾತನಾಡಿದ್ರೆ ಸರ್ವನಾಶ ಆಗ್ತೀರಿ ಎಂದು ಎಚ್ಚರಿಸಿದರು.

ಬಸವರಾಜ್ ಬೊಮ್ಮಾಯಿ ಪೂರ್ಣಾವಧಿ ಸಿಎಂ ಆಗಿರ್ತಾರೆ..

ಬೊಮ್ಮಾಯಿಯವರು ಪೂರ್ಣಾವಧಿ ಸಿಎಂ ಆಗಿರ್ತಾರೆ. ಅವರ ನೇತೃತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಈ ಮಾತನ್ನು ಹೇಳಿದ್ದಾರೆ. ಅವರು ಹೇಳಿದ್ದೇ ಫೈನಲ್, ನಾವು ಅವರನ್ನು ಅನುಸರಿಸುತ್ತೇವೆ ಎಂದರು.

ಮುಖ್ಯಮಂತ್ರಿ ಸ್ಥಾನಕ್ಕೆ ಟಿಪ್ಪು ಜಯಂತಿ :ಸಿದ್ದರಾಮಯ್ಯನವರೇ ಟಿಪ್ಪು ಜಯಂತಿಯನ್ನು ಯಾವ ಪುರುಷಾರ್ಥಕ್ಕಾಗಿ ಮಾಡಿದ್ರಿ, ನೀವು ಸಿಎಂ ಆಗಿರಬೇಕು ಎನ್ನುವ ಕಾರಣಕ್ಕೆ ಟಿಪ್ಪು ಜಯಂತಿ ಮಾಡಿದ್ರಿ ಅಷ್ಟೇ ಎಂದು ಸಿದ್ದರಾಮಯ್ಯನವರ ವಿರುದ್ಧ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ABOUT THE AUTHOR

...view details