ಕರ್ನಾಟಕ

karnataka

ಕಾಂಗ್ರೆಸ್​ನವರು ಎಷ್ಟೇ ನೋಟು ಕೊಟ್ಟರೂ ಜನ ನಮ್ಮನ್ನು ಗುರುತಿಸಿ ವೋಟು ಹಾಕ್ತಾರೆ : ಸಿದ್ದೇಶ್ವರ್

By

Published : Dec 3, 2021, 7:05 PM IST

ನಾವು ಚುನಾವಣೆಗೆ ಹಣ ಕೊಡಲ್ಲ. ಹಾಗೆಯೇ ಮತ ಪಡೆಯುತ್ತೇವೆ. ಕಾಂಗ್ರೆಸ್​ನಿಂದ ಯಾರೇ ಪರಿಷತ್ ಚುನಾವಣೆಗೆ ಸ್ಪರ್ಧಿಸಲಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿ ನಮಗಿದೆ. ಕಳೆದ ಬಾರಿ ನಮ್ಮ ಬಳಿ ಹೆಚ್ಚು ಜನ ಶಾಸಕರು, ವಿಧಾನ ಪರಿಷತ್ ಸದಸ್ಯರಿರಲಿಲ್ಲ..

mp gm siddeshwar criticize on congress
ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಕಾಂಗ್ರೆಸ್​ ವಿರುದ್ಧ ಮಾತನಾಡಿರುವುದು..

ದಾವಣಗೆರೆ: ಕಾಂಗ್ರೆಸ್​​ನವರು ಒಂದು ಮತಕ್ಕೆ ಐವತ್ತು ಸಾವಿರ ಅಲ್ಲ ಒಂದು ಲಕ್ಷ ರೂ. ಕೊಡಲಿ, ಆದ್ರೂ ಜನ ನಮ್ಮನ್ನು ಗುರುತಿಸಿ ಮತ ಹಾಕುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಸಂಸದ ಜಿಎಂ ಸಿದ್ದೇಶ್ವರ್ ಹರಿಹಾಯ್ದರು.

ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಕಾಂಗ್ರೆಸ್​ ವಿರುದ್ಧ ಮಾತನಾಡಿರುವುದು..

ನಗರದಲ್ಲಿಂದು ಮಾತನಾಡಿದ ಅವರು, ನಾವು ಚುನಾವಣೆಗೆ ಹಣ ಕೊಡಲ್ಲ. ಹಾಗೆಯೇ ಮತ ಪಡೆಯುತ್ತೇವೆ. ಕಾಂಗ್ರೆಸ್​ನಿಂದ ಯಾರೇ ಪರಿಷತ್ ಚುನಾವಣೆಗೆ ಸ್ಪರ್ಧಿಸಲಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿ ನಮಗಿದೆ. ಕಳೆದ ಬಾರಿ ನಮ್ಮ ಬಳಿ ಹೆಚ್ಚು ಜನ ಶಾಸಕರು, ವಿಧಾನ ಪರಿಷತ್ ಸದಸ್ಯರಿರಲಿಲ್ಲ.

ಆದ್ರೆ, ಈ ಬಾರಿ ನಮ್ಮ ಬಳಿ ಚಿತ್ರದುರ್ಗ ಸೇರಿ ಹತ್ತು ಜನ ಶಾಸಕರು, ಮಹಾನಗರ ಪಾಲಿಕೆ, ನಗರಸಭೆಗಳು, ಪಟ್ಟಣ ಪಂಚಾಯತ್​, ಪುರಸಭೆಗಳು ಸೇರಿ ಇಬ್ಬರು ಲೋಕಸಭಾ ಸದಸ್ಯರಿದ್ದೇವೆ. ಯಾವುದೇ ಕಾರಣಕ್ಕೂ ಸೋಲಿನ ಪ್ರಶ್ನೆಯೇ ಇಲ್ಲ. ನಾವು ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮಂಗಳೂರು: ಸಿಮ್ ಬದಲಾವಣೆ ಮಾಡಲು ಹೋಗಿ 29 ಸಾವಿರ ಕಳೆದುಕೊಂಡ ವ್ಯಕ್ತಿ

ಬಿಜೆಪಿ ಅಭ್ಯರ್ಥಿ ನವೀನ್ ಅವರು ಚಿತ್ರದುರ್ಗದ ಮಗ, ದಾವಣಗೆರೆಯ ಮೊಮ್ಮಗ. ಜನರು ಇವರ ಮೇಲೆ ಅನುಕಂಪ ತೋರಿಸಿ ಮತ ನೀಡುತ್ತಾರೆಂಬ ನಂಬಿಕೆ ಇದೆ ಎಂದ್ರು.

ABOUT THE AUTHOR

...view details